ಬೀದರ್​​​: ಪ್ರತ್ಯೇಕ ಘಟನೆಗಳಲ್ಲಿ ತಾಯಿಯ ಕಣ್ಣೆದುರೇ ಮಗನ ಕೊಲೆ, ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ

ಬೈಕ್​ನಲ್ಲಿ ತಾಯಿ ಜೊತೆ ತೆರಳುತ್ತಿದ್ದಾಗ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಕಣ್ಣೆದುರೇ ಹತ್ಯೆಯಾದ ಮಗನ ಶವದ ಮುಂದೆ ಕುಳಿತ ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ಸದ್ಯ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಬೀದರ್​​​: ಪ್ರತ್ಯೇಕ ಘಟನೆಗಳಲ್ಲಿ ತಾಯಿಯ ಕಣ್ಣೆದುರೇ ಮಗನ ಕೊಲೆ, ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 28, 2023 | 2:35 PM

ರಾಜ್ಯದಲ್ಲಿ ನಡೆದ ಈನ ಕ್ಷಣದ ಕೆಲ ಪ್ರಮುಖ ಘಟನೆಗಳು ಇಲ್ಲಿವೆ. ಹಾಡಹಗಲೇ ಯುವಕನ ಹತ್ಯೆ..! ಬೀದರ್​​ನಲ್ಲಿ ಜನನಿಬಿಡ ರಸ್ತೆಯಲ್ಲೇ ಯುವಕನ ನೆತ್ತರು ಹರಿದಿದೆ. ಕ್ಷುಲ್ಲಕ ವಿಚಾರಕ್ಕೆ ಶುರುವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಯುವಕನ ಭೀಕರ ಕೊಲೆಗೆ ಬೀದರ್ ಜಿಲ್ಲೆ ಬಸವಕಲ್ಯಾಣದ ತ್ರಿಪುರಾಂತ ಬೆಚ್ಚಿಬಿದ್ದಿದೆ. ಆನಂದ ಫುಲೆ ಮತ್ತು ದಿಗಂಬರ ದಾಸೊರೆ ಮಧ್ಯೆ ಜಗಳ ಆರಂಭವಾಗಿದೆ.. ಆಗ ಇಬ್ಬರು ಪರಸ್ಪರ ಮಾರಕಾಸ್ತ್ರಗಳಿಂದ ದಾಳಿಗೆ ಮುಂದಾಗಿದ್ದಾರೆ. ಆಗ ಆನಂದ ಫುಲೆ ಮೇಲೆ ಬರ್ಬರ ದಾಳಿ ಮಾಡಿ ಹತ್ಯೆ ಮಾಡಲಾಗಿದೆ.

ಬೀದರ್​​​: ತಾಯಿ ಕಣ್ಣೆದುರೇ ಮಗನ ಕೊಲೆ

ಯುವಕರ ಜಗಳದಲ್ಲಿ ಆನಂದ ಫುಲೆ ತೀವ್ರವಾಗಿ ಗಾಯಗೊಂಡಿದ್ದ. ಅಸ್ವಸ್ಥಗೊಂಡಿದ್ದ ಆನಂದ್​​​ನನ್ನು ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿತ್ತು. ಆದ್ರೆ, ಸೊಲ್ಲಾಪುರದ ಆಸ್ಪತ್ರೆಗೆ ಸಾಗಿಸೋ ಮಾರ್ಗಮಧ್ಯೆಯೇ ಆನಂದ್​​​​ ಪುಲೆ ಉಸಿರು ಚೆಲ್ಲಿದ್ದಾನೆ.. ಬೈಕ್​ನಲ್ಲಿ ತಾಯಿ ಜೊತೆ ತೆರಳುತ್ತಿದ್ದಾಗ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಕಣ್ಣೆದುರೇ ಹತ್ಯೆಯಾದ ಮಗನ ಶವದ ಮುಂದೆ ಕುಳಿತ ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ಸದ್ಯ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಬೀದರ್: ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ

ಹಾಸ್ಟೆಲ್​ ಕಟ್ಟಡದಿಂದ ಜಿಗಿದು ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೀದರ್​ನ ಬ್ರೀಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಘಟನೆ ನಡೆದಿದೆ. ಅಂತಿಮ ವರ್ಷದ ಎಂಬಿಬಿಎಸ್​ನಲ್ಲಿ ಓದುತ್ತಿದ್ದ ಶ್ರೀರಾಮ್ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಮರ್ಡರ್

ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿಯ ಕೊಲೆ ಮಾಡಲಾಗಿದೆ. ನಾಯಂಡಹಳ್ಳಿ ಚೆಟ್ಟೀಸ್ ಪೆಟ್ರೊಲ್ ಬಂಕ್ ಬಳಿ ಘಟನೆ ನಡೆದಿದೆ. ರಾತ್ರಿ ಜಿಮ್‌ಗೆ ಹೋಗಿದ್ದ ಲಿಯಾಖತ್ ಅಲಿಖಾನ್ ನಾಪತ್ತೆಯಾಗಿದ್ದ. ಕುಟುಂಬಸ್ಥರಿಂದ ಹುಡುಕಾಟ ನಡೆಸಲಾಗಿತ್ತು.. ಬಳಿಕ ಬೆಳಗಿನ ಜಾವ ಮತ್ತೊಂದು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಹಣಕಾಸಿನ ವಿಚಾರಕ್ಕೆ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ನೇಹಿತರಾದ ವಾಸೀಂ ಮತ್ತು ಜೋಹರ್ ಕೊಲೆ ಮಾಡಿರುವ ಶಂಕೆಯಿದೆ. ಚಂದ್ರಾಲೇಔಟ್ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

ಬೆಂಗಳೂರು: ಪೊಲೀಸ್‌ಗೆ ಕಳ್ಳರಿಂದ ಮೋಸ

ಬ್ಯಾಂಕ್ ಖಾತೆ ಬ್ಲಾಕ್​ ಆಗಿದೆ ಅಂತೇಳಿ ಬೆಂಗಳೂರಿನಲ್ಲಿ ಪೊಲೀಸ್​ ಕಾನ್ಸ್​ಟೇಬಲ್​ ಭದ್ರಯ್ಯಗೆ $73 ಸಾವಿರ ರೂಪಾಯಿ ವಂಚಿಸಲಾಗಿದೆ. ನಿಮ್ಮ ಎಸ್​ಬಿಐ ಅಕೌಂಟ್ ಬ್ಲಾಕ್ ಆಗಿದೆ ಅಂತಾ ಭದ್ರಯ್ಯಗೆ ಸೈಬರ್ ವಂಚಕರು ಕರೆ ಮಾಡಿದ್ರು. ಪಾನ್​ಕಾರ್ಡ್ ಅಪ್ಡೇಟ್ ಮಾಡಬೇಕೆಂದು ಹೇಳಿದ್ರು. ಭದ್ರಯ್ಯರ ಮೊಬೈಲ್​ ವಾಟ್ಸಾಪ್​ಗೆ ಲಿಂಕ್ ಕಳಿಸಿದ್ರು. ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಎರಡು ಖಾತೆಯಲ್ಲಿದ್ದ ಹಣ ದಿಢೀರ್ ಸೈಬರ್ ವಂಚಕರ ಖಾತೆಗೆ ವರ್ಗಾವಣೆಯಾಗಿದೆ. ಆಗ್ನೇಯ ವಿಭಾಗದ ಸಿಇಎನ್​ ಠಾಣೆಗೆ ಕಾನ್ಸ್‌ಟೇಬಲ್ ಭದ್ರಯ್ಯ ದೂರು ನೀಡಿದ್ದಾರೆ.

ಚಿಕ್ಕಮಗಳೂರು: ಲೈಂಗಿಕ ದೌರ್ಜನ್ಯ ಆರೋಪ

ಅಥ್ಲೆಟಿಕ್ ತರಬೇತುದಾರನಿಂದ ಕ್ರೀಡಾಪಟುವಿನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ರಾಷ್ಟ್ರೀಯ ಮಹಿಳಾ ಟ್ರಯಾಥ್ಲಾನ್ ಕ್ರೀಡಾಪಟುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು 14 ವರ್ಷದ ರಾಷ್ಟ್ರೀಯ ಮಟ್ಟದ ಮಹಿಳಾ ಕ್ರೀಡಾ ಪಟು ದೂರು ನೀಡಿದ್ದಾರೆ. ಜಿಲ್ಲಾ ಕ್ರೀಡಾ ಅಥ್ಲೆಟಿಕ್ಸ್ ತರಬೇತುದಾರ ಭರತ್. ಎಸ್ ಮೇಲೆ ಆರೋಪ ಕೇಳಿ ಬಂದಿದೆ. ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಬಿಹಾರದ ಪಾಟ್ನಾದಲ್ಲಿ‌ ಆಯೋಜಿಸಿದ್ದ ಕ್ರೀಡಾ ಕೂಟದಲ್ಲಿ ಭಾಗಿಯಾಗಿದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ.

ಅಥ್ಲೆಟಿಕ್ ಕೋಚ್ ಎಸ್ಕೇಪ್: ಕ್ರೀಡಾಕೂಟ ಮುಗಿಸಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಸ್ಸಿನಲ್ಲಿ ಬರುವಾಗ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ. ಭರತ್.ಎಸ್ ಜಿಲ್ಲಾ ಯುವ ಸಬಲೀಕರಣ, ಕ್ರೀಡಾ ಇಲಾಖೆಯಯಲ್ಲಿ ಅಥ್ಲೆಟಿಕ್ಸ್ ‌ ತರಬೇತುದಾರನಾಗಿದ್ದ. ಅಪ್ರಾಪ್ತ ವಯಸ್ಕ ಕ್ರೀಡಾ ಪಟುವಿನಿಂದ ಚಿಕ್ಕಮಗಳೂರು ಎಸ್​ಪಿ ಉಮಾ ಪ್ರಶಾಂತ್​ಗೆ ದೂರು ಸಲ್ಲಿಸಲಾಗಿದೆ. ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಭರತ್ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಭರತ್ ಎಸ್ಕೇಪ್ ಆಗಿದ್ದಾನೆ.

ಹುಬ್ಬಳ್ಳಿ: ಕಳ್ಳನ ಕೈ ಚಳಕ

ಚಾಲಾಕಿ ಕಳ್ಳನೋರ್ವ ಹಾಡಹಗಲೇ ಆಟೋದಲ್ಲಿದ್ದ ನಗದು ಹಾಗೂ ಪೆನ್ ಡ್ರೈವ್ ಕದ್ದು ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ಬಿಡನಾಳ್ ಬಳಿಯಲ್ಲಿನ ಅಂಜುಮನ್ ಶಾದಿ ಹಾಲ್ ಬಳಿ ನಡೆದಿದೆ. ಮಹಮ್ಮದ್ ಗೌಸ್ ಗೌಳಿ ಎಂಬ ಆಟೋ ಚಾಲಕ ಟೀ ಕುಡಿಯಲಿಕ್ಕೆ ತೆರಳಿದ್ದ ಸಂದರ್ಭದಲ್ಲಿ ಕೃತ್ಯ ನಡೆದಿದೆ. ಆಟೋದಲ್ಲಿದ್ದ 6,300 ರೂಪಾಯಿ ನಗದು ಹಾಗೂ ಒಂದು ಪೆನ್ ಡ್ರೈವ್ ಕಳ್ಳತನವಾಗಿದೆ. ಸಿಸಿ ಕ್ಯಾಮರಾದಲ್ಲಿ ಕಳ್ಳನ ಕೈಚಳಕ ಸೆರೆಯಾಗಿದೆ.

ಮಂಡ್ಯ: ವೋಟ್​ಗಾಗಿ ರಸಮಂಜರಿ

ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೆ ಕೆಲವೆಡೆ ಮತ್ತೆ ನಂಗಾನಾಚ್ ಶುರುವಾಗಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಟಿ.ಚನ್ನಾಪುರ ಗ್ರಾಮದಲ್ಲಿ ಶ್ರೀ ಮಂಚಮ್ಮದೇವಿ, ಮಸಣಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೆಡಿಎಸ್ ಶಾಸಕ ಸುರೇಶ್ ಗೌಡ ಬೆಂಬಲಿಗರಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಎನ್ನಲಾಗಿದೆ. ಶಾಸಕರು ವೇದಿಕೆಯಿಂದ ತೆರಳುತ್ತಿದ್ದಂತೆ ಅಶ್ಲೀಲ ನೃತ್ಯ ಪ್ರಾರಂಭವಾಗಿದೆ. ನೃತ್ಯಕ್ಕೆ ಅಪ್ರಾಪ್ತ ಬಾಲಕನನ್ನ ಬಳಸಿಕೊಂಡು ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿ ಬಂದಿದೆ.

ಚಾಮರಾಜನಗರ: ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ

ಚಾಮರಾಜನಗರ ಜಿಲ್ಲೆ ಯಳಂದೂರು ಪಟ್ಟಣದ ಹೊರವಲಯದಲ್ಲಿ ಅಪರಿಚಿತ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 209ರ ಬಳಿ ಕೆಸ್ತೂರು ರಸ್ತೆಯಲ್ಲಿ ಶವ ಪತ್ತೆಯಾಗಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಯಳಂದೂರು ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Published On - 2:22 pm, Tue, 28 February 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ