ನೈಋತ್ಯ ರೈಲ್ವೆಯ ಹಲವು ರೈಲು ರದ್ದು, ಕೆಲವು ಭಾಗಶಃ ರದ್ದು, ಇಲ್ಲಿದೆ ಮಾಹಿತಿ
ಕೆಂಗೇರಿ-ಹೆಜ್ಜಾಲ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ನಂ. 15 ರಲ್ಲಿ ಇಂಜಿನಿಯರಿಂಗ್ ಕೆಲಸಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕೆಳಗಿನ ರೈಲುಗಳ ಸಂಚಾರ ರದ್ದುಗೊಂಡಿವೆ. ಭಾಗಶಃ ರದ್ದುಗೊಂಡಿವೆ. ಈ ಕುರಿತು ನೈಋತ್ಯ ರೈಲ್ವೆ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಬೆಂಗಳೂರು, ಮಾರ್ಚ್ 02: ಕೆಂಗೇರಿ-ಹೆಜ್ಜಾಲ (Kengeri-Hejjal) ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ನಂ. 15 ರಲ್ಲಿ ಇಂಜಿನಿಯರಿಂಗ್ ಕೆಲಸಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕೆಳಗಿನ ರೈಲುಗಳ ಸಂಚಾರ ರದ್ದುಗೊಂಡಿವೆ (Train Cancelled). ಭಾಗಶಃ ರದ್ದುಗೊಂಡಿವೆ. ಈ ಕುರಿತು ನೈಋತ್ಯ ರೈಲ್ವೆ (South Western Railway) ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಮಾರ್ಚ್ 6 ರಿಂದ 12ರ ವರೆಗೆ ಈ ಕೆಳಗಿನ ರೈಲುಗಳು ರದ್ದಾಗಲಿವೆ ಅಥವಾ ಭಾಗಶಃ ರದ್ದಾಗಲಿವೆ. ಇನ್ನು ಕೆಲವು ರೈಲುಗಳು ವಿಳಂಬವಾಗಿ ಸಹ ಸಂಚಾರ ನಡೆಸಲಿವೆ.
ರದ್ದುಗೊಂಡಿರುವ ರೈಲುಗಳು
- ರೈಲು ಸಂಖ್ಯೆ 16021: ಮಾರ್ಚ್ 6 ಮತ್ತು 7 ರಂದು ಡಾ. MGR ಚೆನ್ನೈ ಸೆಂಟ್ರಲ್-ಮೈಸೂರು ಮಧ್ಯೆ ಸಂಚರಿಸುವ ಡೈಲಿ ಎಕ್ಸ್‌ಪ್ರೆಸ್
- ರೈಲು ಸಂಖ್ಯೆ 20623: ಮಾರ್ಚ್ 7 ಮತ್ತು 8 ರಂದು ಮೈಸೂರು-KSR ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್
- ರೈಲು ಸಂಖ್ಯೆ 20624: ಮಾರ್ಚ್ 7 ಮತ್ತು 8 ರಂದು KSR ಬೆಂಗಳೂರು-ಮೈಸೂರು ಡೈಲಿ ಎಕ್ಸ್‌ಪ್ರೆಸ್.
- ರೈಲು ಸಂಖ್ಯೆ 16022: ಮಾರ್ಚ್ 7 ಮತ್ತು 8 ರಂದು ಮೈಸೂರು-ಡಾ. MGR ಚೆನ್ನೈ ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್
- ರೈಲು ಸಂಖ್ಯೆ 06267: ಮಾರ್ಚ್ 7 ಮತ್ತು 12 ರಂದು ಅರಸೀಕೆರೆ-ಮೈಸೂರು ಡೈಲಿ ಎಕ್ಸ್‌ಪ್ರೆಸ್
- ರೈಲು ಸಂಖ್ಯೆ 06269: ಮಾರ್ಚ್ 7 ಮತ್ತು 12 ರಂದು ಮೈಸೂರು-SMVT ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್
- ರೈಲು ಸಂಖ್ಯೆ 06560: ಮಾರ್ಚ್ 7 ಮತ್ತು 12 ರಂದು ಮೈಸೂರು-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ.
- ರೈಲು ಸಂಖ್ಯೆ 06270: ಮಾರ್ಚ್ 7 ಮತ್ತು 12 ರಂದು SMVT ಬೆಂಗಳೂರು-ಮೈಸೂರು ಡೈಲಿ ಎಕ್ಸ್‌ಪ್ರೆಸ್ ವಿಶೇಷ
- ರೈಲು ಸಂಖ್ಯೆ 06268: ಮಾರ್ಚ್ 8 ಮತ್ತು 13 ರಂದು ಮೈಸೂರು-ಅರಸಿಕೆರೆ ಎಕ್ಸ್‌ಪ್ರೆಸ್
- ರೈಲು ಸಂಖ್ಯೆ 06559: ಮಾರ್ಚ್ 8 ಮತ್ತು 13 ರಂದು KSR ಬೆಂಗಳೂರು-ಮೈಸೂರು ಮೆಮು ವಿಶೇಷ
- ರೈಲು ಸಂಖ್ಯೆ 01763: ಮಾರ್ಚ್ 8 ಮತ್ತು 13 ರಂದು KSR ಬೆಂಗಳೂರು-ಚನ್ನಪಟ್ಟಣ ಮೆಮು ವಿಶೇಷ
ಇದನ್ನೂ ಓದಿ: ರಾಜ್ಯದ 15 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ
ಭಾಗಶಃ ರದ್ದಾದ ರೈಲುಗಳು
- ರೈಲು ಸಂಖ್ಯೆ 06526: ಮಾರ್ಚ್ 7 ಮತ್ತು 12 ರಂದು ಮೈಸೂರು- KSR ಬೆಂಗಳೂರು ವಿಶೇಷ ರೈಲು ಚನ್ನಪಟ್ಟಣ- KSR ಬೆಂಗಳೂರು ಮಧ್ಯೆ ಸಂಚಾರ ನಡೆಸುವುದಿಲ್ಲ.
ರೈಲು ಸಂಚಾರ ವಿಳಂಬ
- ರೈಲು ಸಂಖ್ಯೆ 16220: ಮಾರ್ಚ್ 7 ರಂದು ತಿರುಪತಿ-ಚಾಮರಾಜನಗರ ದೈನಂದಿನ ಎಕ್ಸ್‌ಪ್ರೆಸ್ 30 ನಿಮಿಷ ತಡವಾಗಲಿದೆ.
- ರೈಲು ಸಂಖ್ಯೆ 16231: ಮಾರ್ಚ್ 12 ರಂದು ಮೈಸೂರು ಡೈಲಿ ಎಕ್ಸ್‌ಪ್ರೆಸ್, ಕೆಂಗೇರಿ ನಿಲ್ದಾಣದಲ್ಲಿ 10 ನಿಮಿಷಗಳ ಕಾಲ ತಡವಾಗಲಿದೆ.
- ರೈಲು ಸಂಖ್ಯೆ 16228: ಮಾರ್ಚ್ 12 ರಂದು ತಾಳಗುಪ್ಪ-ಮೈಸೂರು ಡೈಲಿ ಎಕ್ಸ್‌ಪ್ರೆಸ್ ನಾಯ್ರಾಂಡನಹಳ್ಳಿ ನಿಲ್ದಾಣದಲ್ಲಿ 10 ನಿಮಿಷಗಳ ಕಾಲ ತಡವಾಗಲಿದೆ.
- ರೈಲು ಸಂಖ್ಯೆ 16586: ಮಾರ್ಚ್ 12 ರಂದು ಮುರ್ಡೇಶ್ವರ-SMVT ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ 15 ನಿಮಿಷಗಳ ಕಾಲ ತಡವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ