ರಾಜ್ಯದಲ್ಲಿ ನೈಋತ್ಯ ಮುಂಗಾರು ಅಂತ್ಯಗೊಂಡಿದ್ದರೂ ಅ.15ರವರೆಗೆ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅ.10ರ ಬಳಿಕ ಮಳೆಯ ಪ್ರಮಾಣ ಕೊಂಚ ತಗ್ಗಲಿದೆ. ಜೂನ್ 1ರಿಂದ ಸೆ.30ರವರೆಗೆ ಇದ್ದ ನೈಋತ್ಯ ಮುಂಗಾರಿನಲ್ಲಿ ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಶೇ.20ಕ್ಕಿಂತ ಅಧಿಕ ಮಳೆಯಾಗಿದೆ.
ರಾಜ್ಯದ ವಾಡಿಕೆ ಪ್ರಮಾಣ 85.2 ಸೆ.ಮೀ, ಈ ಬಾರಿ 100.19 ಸೆ.ಮಿ ಮಳೆಯಾಗಿದೆ ದಕ್ಷಿಣ ಒಳನಾಡಿನ ವಾಡಿಕೆ 67.84ಸೆ.ಮೀ ಈ ಬಾರಿ 101.2 ಸೆ.ಮೀ. ಮಳೆಯಾಗಿದ್ದು ಶೇ.49 ರಷ್ಟು ಮಳೆ ಹೆಚ್ಚಳವಾಗಿದೆ.
ಉತ್ತರ ಒಳನಾಡಿನಲ್ಲಿ ವಾಡಿಕೆ 48.08 ಸೆಂ.ಮೀ ಇದ್ದು, ಈ ಬಾರಿ 65.11 ಸೆಂ.ಮೀ ಮಳೆಯಾಗಿದ್ದು, ಶೇ.34 ರಷ್ಟು ಮಳೆ ಹೆಚ್ಚಳವಾಗಿದೆ. ಕರಾವಳಿಯಲ್ಲಿ ವಾಡಿಕೆ 307.55 ಸೆಂ.ಮೀ, ಈ ಬಾರಿ 323.28 ಸೆಂ.ಮೀ ಮಳೆಯಾಗಿದೆ.
ವಾಡಿಕೆಗಿಂತ ಶೇ 60+ ಮಳೆಪಡೆದ ಜಿಲ್ಲೆಗಳು
ಜಿಲ್ಲೆ- ಪಡೆದ ಮಳೆ- ವಾಡಿಕೆ ಮಳೆ
ಮಂಡ್ಯ – 73 – 30.24
ತುಮಕೂರು – 76.9- 36.85
ರಾಮನಗರ – 81.4-44.6
ಚಿತ್ರದುರ್ಗ – 63.5-37.49
ಬೆಂಗಳೂರು ನಗರ – 86.56- 44.16
ಬೆಂ.ಗ್ರಾಮಾಂತರ – 80.3- 42.21
ಕೋಲಾರ – 75.85- 39.11
ದಾವಣಗೆರೆ – 63.55- 37.49
ರಾಜ್ಯದ 11 ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಅತಿ ಹೆಚ್ಚು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಮಳೆಯಾಗಲಿದೆ.
ಗದಗದ ಶಿರಹಟ್ಟಿಯಲ್ಲಿ 10 ಸೆಂ.ಮೀ ಮಳೆಯಾಗಿದೆ. ಕಂಪ್ಲಿ, ಶಿರಾಲಿ, ಲಕ್ಷ್ಮೇಶ್ವರ, ರಾಯಚೂರು, ಮಸ್ಕಿ, ಪಣಂಬೂರು, ಸುಬ್ರಹ್ಮಣ್ಯ, ಹೊನ್ನಾವರ, ಮಂಕಿ, ಹಳಿಯಾಳ, ಬೈಲಹೊಂಗಲ, ಹೆಬ್ಬೂರು, ಬ್ರಾಹ್ಮಾವರ, ಗೇರುಸೊಪ್ಪ, ಹುಕ್ಕೇರಿ, ಸಂಕೇಶ್ವರ, ಟಿ ನರಸೀಪುರ, ಸಂಡೂರು, ದಾವಣಗೆರೆ, ಉಡುಪಿ, ಕೋಟ, ಕುಮಟಾ, ಕಿರವತ್ತಿ, ಅಣ್ಣಿಗೇರಿ, ಚಿಕ್ಕೋಡಿ, ನಿಪ್ಪಾಣಿ, ಮತ್ತಿಕೊಪ್ಪ, ಮುದಗಲ್, ಆಲಮಟ್ಟಿ, ಕೊಳ್ಳೇಗಾಲದಲ್ಲಿ ಮಳೆಯಾಗಿದೆ.
ಗಂಗಾವತಿ, ಬೆಂಗಳೂರುನಗರ, ಹೆಸರಘಟ್ಟ, ಹಿರಿಯೂರು, ನಾಯಕನಹಟ್ಟಿ, ಹೊಸಕೋಟೆ, ಗೌರಿಬಿದನೂರು, ಹೊಸಕೋಟೆ, ಕುಂದಾಪುರ, ಕಾರ್ಕಳ, ಬೆಳ್ತಂಗಡಿ, ಧರ್ಮಸ್ಥಳ, ಮಾಣಿ, ತೊಂಡೆಭಾವಿ, ಹಾನಗಲ್, ರಾಣೆಬೆನ್ನೂರಿನಲ್ಲಿ ಮಳೆಯಾಗಿದೆ.
ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ