Karnataka Budget Session: ಪ್ರಿಯಾಂಕ್ ಖರ್ಗೆ ಮತ್ತು ಅಶ್ವಥ್ ನಾರಾಯಣ ನಡುವೆ ಸದನದಲ್ಲಿ ಮಾತು ಜೋರು, ಸ್ಪೀಕರ್ ಪ್ರೇಕ್ಷಕ

|

Updated on: Mar 06, 2025 | 3:43 PM

ಸದನದಲ್ಲಿ ಅಶೋಕ ವಿಷಯವೊಂದನ್ನು ಮಂಡಿಸುವಾಗ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಮಾತಿನ ಪ್ರಹಾರ ಶುರುವಿಟ್ಟುಕೊಳ್ಳುತ್ತಾರೆ. ಶರತ್ ಬಚ್ಚೇಗೌಡ ಮಾತಾಡುವಾಗ ಎಲ್ಲ ಶಾಂತವಾಗಿರುತ್ತದೆ. ಜಾರ್ಜ್ ಮತ್ತು ಅಶ್ವಥ್ ನಾರಾಯಣ ನಡುವೆ ಮಾತಿನ ಯುದ್ಧ ಅರಂಭವಾದಾಗ ಖರ್ಗೆ ಎಂಟರ್ ಆಗುತ್ತಾರೆ. ಖರ್ಗೆ ಮತ್ತು ಅಶ್ವಥ್ ರನ್ನು ಸುಮ್ಮನಾಗಿಸುವ ವ್ಯರ್ಥ ಪ್ರಯತ್ನ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾಡುತ್ತಾರೆ.

ಬೆಂಗಳೂರು ಮಾರ್ಚ್ 6: ಬಜೆಟ್ ಮಂಡನೆಯ (Budget presentation) ಮುನ್ನಾದಿನವಾದ ಇಂದು ಸದನದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರ ನಡುವೆ ಯಾರು ಹೆಚ್ಚು ಬಲಿಷ್ಠರು, ಯಾರು ದುರ್ಬಲರು ಅಂತ ಮಾತಿನ ಜಟಾಪಟಿ ನಡೆಯಿತು. ಆಡಳಿತ ಪಕ್ಷದಿಂದ ಕೆಜೆ ಜಾರ್ಜ್ ಮತ್ತು ಪ್ರಿಯಾಂಕ್ ಖರ್ಗೆ ಮಾತಾಡಿದರೆ ವಿರೋಧ ಪಕ್ಷದಿಂದ ಡಾ ಸಿಎನ್ ಅಶ್ವಥ್ ನಾರಾಯಣ ಮತ್ತು ವಿಪಕ್ಷ ನಾಯಕ ಆರ್ ಅಶೋಕ ಮಾತಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಅಶ್ವಥ್ ನಾರಾಯಣ ಸಚಿವನಾಗಿದ್ದಾಗ ಕಿಯಾನಿಕ್ಸ್​ನಲ್ಲಿ ನಡೆದ ಅವ್ಯವಹಾರಕ್ಕೆ ನಾನು ಹೊಣೆಗಾರನೇ? ಪ್ರಿಯಾಂಕ್ ಖರ್ಗೆ