ಅಶ್ವಥ್ ನಾರಾಯಣ ಸಚಿವನಾಗಿದ್ದಾಗ ಕಿಯಾನಿಕ್ಸ್​ನಲ್ಲಿ ನಡೆದ ಅವ್ಯವಹಾರಕ್ಕೆ ನಾನು ಹೊಣೆಗಾರನೇ? ಪ್ರಿಯಾಂಕ್ ಖರ್ಗೆ

ಅಶ್ವಥ್ ನಾರಾಯಣ ಸಚಿವನಾಗಿದ್ದಾಗ ಕಿಯಾನಿಕ್ಸ್​ನಲ್ಲಿ ನಡೆದ ಅವ್ಯವಹಾರಕ್ಕೆ ನಾನು ಹೊಣೆಗಾರನೇ? ಪ್ರಿಯಾಂಕ್ ಖರ್ಗೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 14, 2025 | 5:07 PM

ಗುತ್ತಿಗೆದಾರರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಲ್ ಗಳನ್ನು ಕ್ಲೀಯರ್ ಮಾಡಲು 40 ಪರ್ಸೆಂಟ್ ಕಮೀಶನ್ ಕೇಳಲಾಗುತ್ತಿದೆ ಎಂದಿದ್ದರು, ಈಗ ಅವರು ಬಿಲ್​ಗಳ ಕ್ಲೀಯರನ್ಸ್ ಗೆ ವಿಳಂಬವಾಗುತ್ತಿದೆ ಅಂತಿದ್ದಾರೆ, ಬಿಜೆಪಿ ಸರ್ಕಾರ ಬಾಕಿಯುಳಿಸಿರುವ ಬಿಲ್ ಗಳನ್ನು ಸಿದ್ದರಾಮಯ್ಯ ಸರ್ಕಾರ ಕ್ಲೀಯರ್ ಮಾಡುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ಪ್ರಿಯಾಂಕ್ ಖರ್ಗೆ ಹಿಂದಿನ ಬಿಜೆಪಿ ಸರ್ಕಾರದವರು ಸಾಲ ಮಾಡಿ ತುಪ್ಪ ತಿಂದಿದ್ದಾರೆ, ಅವರು ಮಾಡಿದ ಸಾಲವನ್ನು ತಮ್ಮ ಸರ್ಕಾರ ತೀರಿಸುತ್ತಿದೆ ಎಂದು ಹೇಳಿದರು. ದೆಹಲಿಯಿಂದ ಬರುವ ಕುಮಾರಸ್ವಾಮಿಯವರು 70 ಪರ್ಸೆಂಟ್ ಕಮೀಶನ್ ಸರ್ಕಾರ ಎನ್ನುತ್ತಾರೆ, ರಾಜ್ಯ ಬಿಜೆಪಿ ನಾಯಕರು 60 ಪರ್ಸೆಂಟ್ ಕಮೀಶನ್ ಸರ್ಕಾರ ಅನ್ನುತ್ತಾರೆ, ಯಾರು ಕಮೀಶನ್ ತೆಗೆದುಕೊಂಡಿದ್ದಾರೆ ಅಂತ ಅವರು ಸಾಕ್ಷಿ ಒದಗಿಸಲಿ, ತನಿಖೆ ಮಾಡಿಸಲು ತಮ್ಮ ಸರ್ಕಾರ ಸಿದ್ಧವಿದೆ ಎಂದು ಹೇಳಿದ ಅವರು ಅಶ್ವಥ್ ನಾರಾಯಣ ಮಿನಿಸ್ಟ್ರಾಗಿದ್ದಾಗ ಕಿಯಾನಿಕ್ಸ್ ನಲ್ಲಿ ನಡೆದ ಅವ್ಯವಹಾರಗಳಿಗೆ ತಾನು ಜವಾಬ್ದಾರನೇ ಎಂದರು. ದೂರುಗಳನ್ನು ಅವರು ನಾಗಮೋಹನ್ ದಾಸ್ ಆಯೋಗಕ್ಕೆ ಸಲ್ಲಿಸಲಿ, ಸರ್ಕಾರ ತನಿಖೆ ನಡೆಸುತ್ತದೆ ಎಂದು ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್: ಪ್ರಿಯಾಂಕ್ ಖರ್ಗೆ ಆಪ್ತ ಸೇರಿ ಐವರ ಬಂಧನ