Maha Kumbh 2025: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಾಗಲೇ ಪಾಸಿಟಿವ್ ಎನರ್ಜಿ ಏನು ಅಂತ ಗೊತ್ತಾಗುತ್ತದೆ ಎನ್ನುತ್ತಾರೊಬ್ಬ ಕನ್ನಡಿಗ
ಗಮನಿಸಬೇಕಾದ ಸಂಗತಿಯೆಂದರೆ ತ್ರಿವೇಣಿ ಸಂಗಮ್ ಗೆ ಹೋಗುವ ಮಾರ್ಗದಲ್ಲಿ ಒಂದು ಟೀ ಸ್ಟಾಲ್ ಇದ್ದು ಇದನ್ನು ಕನ್ನಡಿಗರು ನಡೆಸುತ್ತಿದ್ದಾರೆ. ಬಿಸಿಬಿಸಿಯಾಗಿ ಹಬೆಯಾಡುವ ಚಹಾವನ್ನು ನಮ್ಮ ರಾಜ್ಯದ ವಿಖ್ಯಾತ ನಂದಿನಿ ಹಾಲಿನಿಂದ ಮಾಡುತ್ತಾರೆ. ಸ್ಟಾಲ್ ಮಾಲೀಕ, ಪುರುಸೊತ್ತಿಲ್ಲದ ಹಾಗೆ ವ್ಯಾಪಾರ ಆಗುತ್ತಿದೆ, ಜನಕ್ಕೆ ನಂದಿನಿ ಹಾಲಿನ ಚಹಾ ಬಹಳ ಇಷ್ಟವಾಗುತ್ತಿದೆ ಎಂದು ಹೇಳುತ್ತಾರೆ.
ಪ್ರಯಾಗ್ರಾಜ್: ಮಹಾಕುಂಭ ಮೇಳದಲ್ಲಿ ಕರ್ನಾಟಕದ ಟಚ್ ಬಗ್ಗೆ ನಾವು ವರದಿ ಮಾಡುತ್ತಿದ್ದೇವೆ. ಮೇಳಕ್ಕೆ ಬೆಂಗಳೂರುನಿಂದ ಅಗಮಿಸಿರುವ ಯುವಕನೊಬ್ಬ ನಮ್ಮ ವರದಿಗಾರನೊಂದಿಗೆ ಮಾತಾಡಿ ತನ್ನ ಆಧ್ಯಾತ್ಮಿಕ ಅನುಭವವನ್ನು ಹಂಚಿಕೊಂಡಿದ್ದಾರೆ. ಪ್ರಯಾಗ್ ರಾಜ್ ತ್ರಿವೇಣಿ ಸಂಗಮದಲ್ಲಿ ಮಕರ ಸಂಕ್ರಾಂತಿ ದಿನವಾಗಿರುವ ಇಂದು ಪವಿತ್ರ ಸ್ನಾನ ಮಾಡಿರುವ ಇವರು, ಆಧ್ಯಾತ್ಮದ ಕಡೆ ಒಲವನ್ನೇ ತೋರದವರಿಗೆ ಕೂತಲ್ಲಿಂದ ಮಾತಾಡಿದರೆ ಏನೂ ಗೊತ್ತಾಗಲ್ಲ, ಎದ್ದು ಹೊರಬಂದು ಕುಂಭಮೇಳದಲ್ಲಿ ಭಾಗಿಯಾದಾಗ ಮಾತ್ರ ಇಲ್ಲಿ ಪ್ರಾಪ್ತಿಯಾಗುವ ಪಾಸಿಟಿವ್ ಎನರ್ಜಿ ಏನು ಅನ್ನೋದು ಗೊತ್ತಾಗುತ್ತದೆ, ಕುಂಭ್ 45ದಿನಗಳವರೆಗೆ ನಡೆಯುವ ಉತ್ಸವವಾಗಿದೆ, ಇನ್ನೂ ಸಾಕಷ್ಟು ಸಮಯವಿದೆ ಎಲ್ಲರೂ ಭಾಗವಹಿಸಿ ಎಂದು ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Mahakumbh 2025: 144 ವರ್ಷಕ್ಕೆ ಒಮ್ಮೆ ಬರುವ ಮಹಾಕುಂಭಮೇಳದ ಮಹತ್ವ ಮತ್ತು ವಿಧಿವಿಧಾನ
Latest Videos