ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಕರ ಸಂಕ್ರಾಂತಿಯಂದು ಮಹಾಕುಂಭದಲ್ಲಿ 2 ಕೋಟಿಗಿಂತಲೂ ಹೆಚ್ಚು ಜನರು ತೀರ್ಥ ಸ್ನಾನ ಮಾಡಿದ್ದಾರೆ ಎಂದು ಯುಪಿ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ. ಮಹಾಕುಂಭದ 2ನೇ ದಿನವಾದ ಇಂದು ತ್ರಿವೇಣಿ ಸಂಗಮದಲ್ಲಿ 2.5 ಕೋಟಿಗಿಂತ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿದ್ದಾರೆ. ಈ ಮಹಾ ಕುಂಭಮೇಳವು 144 ವರ್ಷಗಳ ನಂತರ ಸಂಭವಿಸುತ್ತಿದೆ.
ಪ್ರಯಾಗರಾಜ್: ಪೌಷ ಪೂರ್ಣಿಮೆಯಂದು ಭಜನೆಗಳು ಮತ್ತು ಘೋಷಣೆಗಳೊಂದಿಗೆ ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾದ ಮಹಾಕುಂಭ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಸಂಕ್ರಾಂತಿಯಾದ ಇಂದು ಮಹಾಕುಂಭ ರಾಜ ಸ್ನಾನಕ್ಕೆ ಸಾಕ್ಷಿಯಾಗಿದೆ. ಈ ಮಹಾ ಕುಂಭಮೇಳವು 144 ವರ್ಷಗಳ ನಂತರ ಸಂಭವಿಸುತ್ತಿದೆ. ಈ ಬಾರಿಯ ಮಹಾ ಕುಂಭ ಮೇಳವು ಇನ್ನಷ್ಟು ಶುಭಕರವಾಗಿದೆ ಎಂದು ಋಷಿಗಳು ಹೇಳಿಕೊಳ್ಳುತ್ತಾರೆ. ವಿಶ್ವದ ಅತಿದೊಡ್ಡ ಧಾರ್ಮಿಕ ಕೂಟಗಳಲ್ಲಿ ಒಂದಾದ ಕುಂಭಮೇಳವು ಕೋಟ್ಯಂತರ ಯಾತ್ರಿಕರನ್ನು ಆಕರ್ಷಿಸುತ್ತಲೇ ಇದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Jan 14, 2025 04:08 PM
Latest Videos