AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಂಪೇಗೌಡ ಏರ್ಪೋರ್ಟ್ ಹೋಗೋರಿಗೆ ಶುಭ ಸುದ್ದಿ, ಸದ್ಯದಲ್ಲೇ ಬರಲಿದೆ ಸ್ಪೆಷಲ್ ರೈಲು

ದೆಹಲಿಯಿಂದ ಬೆಂಗಳೂರಿಗೆ ಬರ್ಬೇಕಂದ್ರೆ ಒಂದೂವರೆ ಗಂಟೆ ಆದ್ರೆ, ಏರ್‌ಪೋರ್ಟ್‌ನಿಂದ ಮನೆ ಸೇರ್ಬೇಕಂದ್ರೆ ಅದಕ್ಕಿಂತ ಹೆಚ್ಚು ಟೈಮ್‌ ಬೇಕು ಅನ್ನೋ ಮಾತು ಬೆಂಗಳೂರಿನಲ್ಲಿ ರೂಢಿಯಲ್ಲಿದೆ.. ಅಂದ್ರೆ, ಅಷ್ಟೊಂದು ಟ್ರಾಫಿಕ್‌ ಇರುತ್ತೆ.. ಬೆಂಗಳೂರಿನ ಟ್ರಾಫಿಕ್‌ ನೋಡಿ ಬೇಸತ್ತೋರಿಗೆ ಈಗ ಏರ್‌ಪೋರ್ಟ್‌ ಸೇರೋಕೆ ಹೊಸ ದಾರಿ ರೆಡಿಯಾಗ್ತಿದೆ.. ಹೈಫೈ ಔಟ್‌ಲುಕ್‌ನಲ್ಲಿರುವ ಕಟ್ಟಡ.. ಭರದಿಂದ ನಡೆದಿರುವ ಕಾಮಗಾರಿ.. ಮತ್ತೊಂದೆಡೆ ಬಣ್ಣ ಬಣ್ಣದ ಹೂಗಳ ಉದ್ಯಾನವನ.. ಇದ್ಯಾವುದೋ ಪಾರ್ಕ್‌ನ ದೃಶ್ಯ ಅಲ್ಲ. ಐಟಿ ಕಂಪನಿ ಕಾರಿಡಾರ್‌ ಕೂಡಾ ಅಲ್ಲ. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ […]

ಕೆಂಪೇಗೌಡ ಏರ್ಪೋರ್ಟ್ ಹೋಗೋರಿಗೆ ಶುಭ ಸುದ್ದಿ, ಸದ್ಯದಲ್ಲೇ ಬರಲಿದೆ ಸ್ಪೆಷಲ್ ರೈಲು
ಕೆಂಪೇಗೌಡ ವಿಮಾನ ನಿಲ್ದಾಣ
ಆಯೇಷಾ ಬಾನು
|

Updated on: Aug 18, 2020 | 7:06 AM

Share

ದೆಹಲಿಯಿಂದ ಬೆಂಗಳೂರಿಗೆ ಬರ್ಬೇಕಂದ್ರೆ ಒಂದೂವರೆ ಗಂಟೆ ಆದ್ರೆ, ಏರ್‌ಪೋರ್ಟ್‌ನಿಂದ ಮನೆ ಸೇರ್ಬೇಕಂದ್ರೆ ಅದಕ್ಕಿಂತ ಹೆಚ್ಚು ಟೈಮ್‌ ಬೇಕು ಅನ್ನೋ ಮಾತು ಬೆಂಗಳೂರಿನಲ್ಲಿ ರೂಢಿಯಲ್ಲಿದೆ.. ಅಂದ್ರೆ, ಅಷ್ಟೊಂದು ಟ್ರಾಫಿಕ್‌ ಇರುತ್ತೆ.. ಬೆಂಗಳೂರಿನ ಟ್ರಾಫಿಕ್‌ ನೋಡಿ ಬೇಸತ್ತೋರಿಗೆ ಈಗ ಏರ್‌ಪೋರ್ಟ್‌ ಸೇರೋಕೆ ಹೊಸ ದಾರಿ ರೆಡಿಯಾಗ್ತಿದೆ..

ಹೈಫೈ ಔಟ್‌ಲುಕ್‌ನಲ್ಲಿರುವ ಕಟ್ಟಡ.. ಭರದಿಂದ ನಡೆದಿರುವ ಕಾಮಗಾರಿ.. ಮತ್ತೊಂದೆಡೆ ಬಣ್ಣ ಬಣ್ಣದ ಹೂಗಳ ಉದ್ಯಾನವನ..

ಇದ್ಯಾವುದೋ ಪಾರ್ಕ್‌ನ ದೃಶ್ಯ ಅಲ್ಲ. ಐಟಿ ಕಂಪನಿ ಕಾರಿಡಾರ್‌ ಕೂಡಾ ಅಲ್ಲ. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೈಲ್ವೆ ಇಲಾಖೆ ನಿರ್ಮಿಸುತ್ತಿರೋ ಸುಸಜ್ಜಿತ ರೈಲ್ವೇ ಸ್ಟೇಷನ್‌.

ಶೀಘ್ರದಲ್ಲೇ ಕೆಐಎಬಿಗೆ ಓಡಾಡಲಿದೆ ಸುಸಜ್ಜಿತ ರೈಲು ಬೆಂಗಳೂರು ನಗರದ ಟ್ರಾಫಿಕ್‌ ತಡೆಗೆ ಏಕೈಕ ಮಾರ್ಗ ಉಪನಗರ ರೈಲು ಎಂದು ದಶಕಗಳ ಹಿಂದೆಯೇ ಬೇಡಿಕೆ ಇಡಲಾಗಿತ್ತು. ಆದ್ರೆ, ಅದಕ್ಕೆ ಇನ್ನೂ ದಿನ ಬಹಳ ದೂರ ಇದೆ. ಆದ್ರೆ, ಪ್ರತಿನಿತ್ಯ ಸಾವಿರಾರು ಜನ ಓಡಾಡುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಅಥವಾ ಮೆಟ್ರೋ ಬೇಕೆಂಬ ಬೇಡಿಕೆಯೂ ಇತ್ತು. ಸಾಕಷ್ಟು ಜನ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಫ್ಲೈಟ್‌ಗಳನ್ನ ಮಿಸ್‌ ಮಾಡಿಕೊಂಡ ಉದಾಹರಣೆಯಿತ್ತು. ಹೀಗಾಗಿ, ರೈಲ್ವೆ ಇಲಾಖೆ ಏರ್‌ಪೋರ್ಟ್‌ ಬಳಿಯೇ ನೂತನ ರೈಲು ನಿಲ್ದಾಣ ನಿರ್ಮಿಸ್ತಿದೆ.

ಟರ್ಮಿನಲ್‌ನಿಂದ ಎರಡು ಕಿಲೋಮೀಟರ್‌ ದೂರದಲ್ಲಿ ನಿರ್ಮಾಣವಾಗ್ತಿರೋ ನಿಲ್ದಾಣದ ಶೇಕಡಾ 80ರಷ್ಟು ಕಾಮಗಾರಿ ಈಗಾಗ್ಲೇ ಪೂರ್ಣಗೊಂಡಿದೆ. ಮುಂದಿನ ತಿಂಗಳಲ್ಲಿ ಏರ್‌ಪೋರ್ಟ್‌ಗೆ ರೈಲು ಓಡಿಸುವ ಯೋಚನೆಯಲ್ಲಿದೆ. ಹೀಗಾಗಿ, ಉಳಿದ 20 ಪರ್ಸೆಂಟ್ ಕಾಮಗಾರಿ ಭರದಿಂದ ಸಾಗ್ತಿದೆ.

ರೈಲ್ವೆಯಿಂದ ಬೆಂಗಳೂರು ವಿಮಾನ ಪ್ರಯಾಣಿಕರಿಗೆ ಗಿಫ್ಟ್. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಹಾಲ್ಟ್‌ ರೈಲ್ವೇ ನಿಲ್ದಾಣಕ್ಕಾಗಿ ಇದ್ದ ದಶಕದ ಹಳೆಯ ಬೇಡಿಕೆಯನ್ನ ಪೂರೈಸುತ್ತಿದ್ದೇವೆ. ಟ್ರಾಫಿಕ್‌ ಜಂಜಾಟದಿಂದ ಮುಕ್ತಿ ಮಾತ್ರವಲ್ಲ, ಜನರಿಗೆ ಏರ್‌ಪೋರ್ಟ್‌ಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ. – ಪಿಯೂಶ್ ಗೋಯೆಲ್, ಕೇಂದ್ರ ರೈಲ್ವೆ ಸಚಿವ

ಅಷ್ಟೇ ಅಲ್ಲ, ಎರಡು ಕಿಲೋಮೀಟರ್‌ ದೂರದ ಟರ್ಮಿನಲ್‌ಗೆ ಹೋಗೋದು ಹೇಗೆ ಅನ್ನೋ ಚಿಂತೆ ಬೇಡ. ರೈಲಿನಲ್ಲಿ ಬರೋ ಪ್ರಯಾಣಿಕರಿಗೆ ಏರ್‌ಪೋರ್ಟ್‌ಗೆ ಉಚಿತ ಬಸ್‌ ವ್ಯವಸ್ಥೆ ಇರಲಿದೆ. ಪ್ರಸ್ತುತ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಚಿಂತಾಮಣಿ ಮುಖಾಂತರ ಕೋಲಾರಕ್ಕೆ ಹೋಗುವ ಹಳಿಯಲ್ಲಿ ದಿನಕ್ಕೆ ಮೂರು ರೈಲುಗಳು ಮಾತ್ರ ಸಂಚರಿಸುತ್ತಿವೆ. ನೂತನ ಸ್ಟೇಷನ್ ನಿರ್ಮಾಣದ ನಂತರ ಶಟಲ್ ರೈಲುಗಳ ಸಂಚಾರ ಆರಂಭವಾಗಲಿದೆ.