ಮಂದಿರ ದೇಣಿಗೆ ಲೆಕ್ಕ: ಚುನಾವಣೆ ಬಂದಾಗಲೇ ಇದರ ಬಗ್ಗೆ ಪ್ರಶ್ನೆ, ಸಂದೇಹ ಬರುತ್ತದೆ – ಪೇಜಾವರ ಶ್ರೀ ಅಸಮಾಧಾನ

| Updated By: ಸಾಧು ಶ್ರೀನಾಥ್​

Updated on: Oct 21, 2021 | 1:07 PM

ರಾಮ ಮಂದಿರ ನಿರ್ಮಾಣಕ್ಕಾಗಿ ಸಂಗ್ರಹವಾಗುತ್ತಿರುವ ದೇಣಿಗೆಯ ಲೆಕ್ಕ ಕೇಳಿದ ರಾಜಕಾರಣಿಗಳಿಗೆ ಪೇಜಾವರ ಶ್ರೀಗಳು ತಿರುಗೇಟು ನೀಡಿದ್ದಾರೆ. ಎಲೆಕ್ಷನ್ ಬಳಿಕ ಅವರಿಗೆ ಉತ್ತರ ಸಿಗುತ್ತೋ, ಬಿಡುತ್ತೋ ಗೊತ್ತಿಲ್ಲ. ಈ ಹಿಂದೆಯೂ ಲೆಕ್ಕ ಕೇಳಿದ್ದರು, ಲೆಕ್ಕ ಕೊಟ್ಟಾಗಿದೆ. ವ್ಯರ್ಥ ಪ್ರಶ್ನೆಗಳನ್ನ ಕೇಳ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಂದಿರ ದೇಣಿಗೆ ಲೆಕ್ಕ: ಚುನಾವಣೆ ಬಂದಾಗಲೇ ಇದರ ಬಗ್ಗೆ ಪ್ರಶ್ನೆ, ಸಂದೇಹ ಬರುತ್ತದೆ - ಪೇಜಾವರ ಶ್ರೀ ಅಸಮಾಧಾನ
ಮಂದಿರ ದೇಣಿಗೆ ಲೆಕ್ಕ: ಚುನಾವಣೆ ಬಂದಾಗಲೇ ಇದರ ಬಗ್ಗೆ ಪ್ರಶ್ನೆ-ಸಂದೇಹಗಳು ಬರ್ತಿವೆ- ಪೇಜಾವರ ಶ್ರೀ ಅಸಮಾಧಾನ
Follow us on

ಗದಗ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಸಂಗ್ರಹವಾಗುತ್ತಿರುವ ದೇಣಿಗೆಯ ಲೆಕ್ಕ ಕೇಳಿದ ರಾಜಕಾರಣಿಗಳಿಗೆ ಪೇಜಾವರ ಶ್ರೀಗಳು ತಿರುಗೇಟು ನೀಡಿದ್ದಾರೆ. ಗದಗ ನಗರದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡುತ್ತಾ ದೇಣಿಗೆ ಸಂಗ್ರಹಕ್ಕೆ ಸಂಬಂಧಿಸಿದ ಟ್ರಸ್ಟ್ ಇದೆ ಅವರ ಬಳಿ ಇದನ್ನೆಲ್ಲ ಕೇಳಬೇಕು. ಸಾರ್ವಜನಿಕರ ಬಳಿ ಕೇಳುವುದು ಹಾಸ್ಯಾಸ್ಪದವಾದೀತು. ಯಾವುದಾದರೂ ಚುನಾವಣೆ ಬಂದಾಗಲೇ ಈ ಬಗ್ಗೆ ಪ್ರಶ್ನೆ, ಸಂದೇಹಗಳು ಬರ್ತಿವೆ ಅಂತಾ ಅವರು ಕಿಡಿಕಿಡಿಯಾದರು.

ಎಲೆಕ್ಷನ್ ಬಳಿಕ ಅವರಿಗೆ ಉತ್ತರ ಸಿಗುತ್ತೋ, ಬಿಡುತ್ತೋ ಗೊತ್ತಿಲ್ಲ. ಈ ಹಿಂದೆಯೂ ಲೆಕ್ಕ ಕೇಳಿದ್ದರು, ಲೆಕ್ಕ ಕೊಟ್ಟಾಗಿದೆ. ವ್ಯರ್ಥ ಪ್ರಶ್ನೆಗಳನ್ನ ಕೇಳ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಮತಾಂತರ ಹಾವಳಿ ವಿಚಾರವಾಗಿ ಮಾತನಾಡಿದ ಪೇಜಾವರ ಶ್ರೀ ಅವರು ಸಮಾಜದಲ್ಲಿ ಸಾಮರಸ್ಯ ಇರಬೇಕು ಅಂದ್ರೆ ಇಂತಹ ಅವ್ಯವಹಾರ ಮಾಡಬಾರದು. ಆಮಿಷ ಒಡ್ಡಿ ಒತ್ತಾಯಪೂರ್ವಕವಾಗಿ ಮತಾಂತರ ಮಾಡಬಾರದು. ಮತಾಂತರ ಕಾಯ್ದೆ ಜಾರಿಗೆಯಾಗಬೇಕು ಎಂದರು.

ವರ್ಲ್ಡ್ ಕಪ್ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಶ್ರೀಗಳು ಸಹ ವಿರೋಧ ವ್ಯಕ್ತಪಡಿಸಿದರು. ಎರಡೂ ಕಡೆ ವಿರೋಧವಿದ್ದರೆ ಪಂದ್ಯ ವಾಡುವುದು ಬೇಡ. ಪಾಕಿಸ್ತಾನ ಮಾಡುವ ಕೃತ್ಯಗಳು ನಿಲ್ಲಬೇಕು. ಪಾಕಿಸ್ತಾನದ ಕೃತ್ಯಗಳ ವಿರೋಧಿಸುವ ನಿಟ್ಟಿನಲ್ಲಿ ಪಂದ್ಯ ಆಡುವುದು ಬೇಡ ಎಂದು ಗದಗನಲ್ಲಿ ಪೇಜಾವರ ಶ್ರೀಗಳು ಗುಡುಗಿದರು.

Also Read:
Ram Temple: ಅಯೋಧ್ಯೆ ರಾಮಮಂದಿರಕ್ಕೆ ಕರ್ನಾಟಕದ ಕೊಳ್ಳೇಗಾಲದ ಗ್ರಾನೈಟ್; ಇಲ್ಲಿದೆ ಪೂರ್ತಿ ಮಾಹಿತಿ

Also Read:
ರಾಷ್ಟ್ರೀಯ ಸ್ವಯಂ ಸೇವಕ ಶಿಬಿರಕ್ಕೆ ಸಿದ್ದರಾಮಯ್ಯ – ಹೆಚ್.​ಡಿ. ಕುಮಾರಸ್ವಾಮಿಗೆ ಪತ್ರ ಬರೆದ ಆರ್​​ಎಸ್ಎಸ್ ಕಾರ್ಯಕರ್ತ

ರಾಮಮಂದಿರ ಲೆಕ್ಕ ಕೇಳಿದ ಎಚ್​ಡಿಕೆಗೆ ಮಾರ್ಮಿಕವಾಗಿ ಉತ್ತರಿಸಿದ ಪೇಜಾವರ ಶ್ರೀಗಳು |Pejavarashree byte On HDK|

(Sri ram mandir donation collection pejawar sri question the motives of the politicians)

Published On - 12:59 pm, Thu, 21 October 21