ರಾಷ್ಟ್ರೀಯ ಸ್ವಯಂ ಸೇವಕ ಶಿಬಿರಕ್ಕೆ ಸಿದ್ದರಾಮಯ್ಯ – ಹೆಚ್.​ಡಿ. ಕುಮಾರಸ್ವಾಮಿಗೆ ಪತ್ರ ಬರೆದ ಆರ್​​ಎಸ್ಎಸ್ ಕಾರ್ಯಕರ್ತ

TV9 Digital Desk

| Edited By: preethi shettigar

Updated on:Oct 13, 2021 | 1:51 PM

ಆರ್​ಎಸ್​ಎಸ್ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಟೀಕಿಸಿದ ಹಿನ್ನಲೆ ಶಿಬಿರಕ್ಕೆ ಬರುವಂತೆ ಆರ್​ಎಸ್​ಎಸ್ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಪತ್ರ ಬರೆದು ಆಹ್ವಾನಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಶಿಬಿರಕ್ಕೆ ಸಿದ್ದರಾಮಯ್ಯ - ಹೆಚ್.​ಡಿ. ಕುಮಾರಸ್ವಾಮಿಗೆ ಪತ್ರ ಬರೆದ ಆರ್​​ಎಸ್ಎಸ್ ಕಾರ್ಯಕರ್ತ
ಆರ್​ಎಸ್​ಎಸ್ ಕಾರ್ಯಕರ್ತ ಶಿವಕುಮಾರ್

Follow us on

ಮಂಡ್ಯ: ರಾಷ್ಟ್ರೀಯ ಸ್ವಯಂ ಸೇವಕ ಶಿಬಿರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೆಚ್.ಡಿ ಕುಮಾರಸ್ವಾಮಿಗೆ ಪತ್ರ ಬರೆದು ಆರ್​ಎಸ್​ಎಸ್(RSS)​ ಕಾರ್ಯಕರ್ತ ಆಹ್ವಾನಿಸಿದ್ದಾರೆ. ಮಂಡ್ಯದ ಮದ್ದೂರು ತಾಲೂಕಿನ ಸೋಮನಹಳ್ಳಿ ವಿದ್ಯಾಸಂಸ್ಥೆಯಲ್ಲಿ ಅಕ್ಟೋಬರ್ 17 ರಿಂದ ಅಕ್ಟೋಬರ್ 25 ರ ವರೆಗೆ ನಡೆಯಲಿರುವ ಆರ್​ಎಸ್​ಎಸ್ ಪ್ರಾಥಮಿಕ ಶಿಕ್ಷಾ ವರ್ಗ ಶಿಬಿರಕ್ಕೆ ಆರ್​ಎಸ್​ಎಸ್ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಆಹ್ವಾನಿಸಿದ್ದಾರೆ.

ಆರ್​ಎಸ್​ಎಸ್ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಟೀಕಿಸಿದ ಹಿನ್ನಲೆ ಶಿಬಿರಕ್ಕೆ ಬರುವಂತೆ ಆರ್​ಎಸ್​ಎಸ್ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಪತ್ರ ಬರೆದು ಆಹ್ವಾನಿಸಿದ್ದಾರೆ. ಆರ್​ಎಸ್​ಎಸ್ ಶಿಬಿರದಲ್ಲಿ ಸಂಸ್ಕಾರದ ಬಗ್ಗೆ ಹೇಳಿಕೊಡಲಾಗುತ್ತದೆ. 7 ದಿನಗಳಲ್ಲಿ ನಿಮ್ಮನ್ನು ಪರಿಪೂರ್ಣವಾಗಿ ಗಟ್ಟಿಗೊಳಿಸಿ. ಈ ದೇಶಕ್ಕೆ ಹಾಗೂ ಸಮಾಜಕ್ಕೆ ಆರ್​ಎಸ್​ಎಸ್ ಅರ್ಪಣೆ ಮಾಡುತ್ತದೆ. ಶಿಬಿರಕ್ಕೆ ಬರುವಾಗ ಬುಡುಬುಡುಕೆ ಬುಂಡೇದಾಸನ ರೀತಿ ಕೈಬೀಸಿಕೊಂಡು ಬರಬೇಡಿ. ತಟ್ಟೆ, ಲೋಟ, ಬೆಡ್ ಶೀಟ್, ಜಮಕಾನ್, ಎರಡೂ ಜೊತೆ ಬಟ್ಟೆ ತೆಗೆದುಕೊಂಡು ಬನ್ನಿ ಎಂದು ಆರ್​ಎಸ್​ಎಸ್ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಹೇಳಿದ್ದಾರೆ.

ಆರ್​ಎಸ್​ಎಸ್ ಗಣವೇಷದಲ್ಲಿ ಶಿಬಿರಕ್ಕೆ ಬರಬೇಕು. ಶಿಬಿರದಲ್ಲಿ ಪಾಲ್ಗೊಂಡ ಬಳಿಕ ಆರ್​ಎಸ್​ಎಸ್ ಬಗ್ಗೆ ಮಾತನಾಡಿ ಎಂದು ಮಂಡ್ಯದಲ್ಲಿ ನಡೆಯಲಿರುವ ಆರ್​ಎಸ್​ಎಸ್ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಮಾಜಿ ಸಿಎಂಗಳಿಗೆ ಆರ್​ಎಸ್​ಎಸ್ ಕಾರ್ಯಕರ್ತ ಅಂಚೆ‌ ಪತ್ರ ಪೋಸ್ಟ್ ಮಾಡಿದ್ದಾರೆ.

letter

ಅಂಚೆ‌ ಪತ್ರ

ಇದನ್ನೂ ಓದಿ: ಬಿಎಸ್‌ವೈ ಅಧಿಕಾರ ಕಳೆದುಕೊಳ್ಳಲು ಆರ್​ಎಸ್​ಎಸ್​​ ಕಾರಣ; ಆರ್​ಎಸ್​ಎಸ್ ಬಗ್ಗೆ ನಿಜ ಏನೆಂದು ಜನರೇ ಚರ್ಚೆ ಮಾಡಲಿ: ಹೆಚ್‌ಡಿಕೆ

ನಾನು ಆರ್​ಎಸ್​ಎಸ್ ಹೊಗಳಿದ್ದೇನೆ ಎನ್ನುವುದು ಶುದ್ಧ ಸುಳ್ಳು, ನನಗೂ ಆರ್​ಎಸ್​ಎಸ್​ಗೂ ಸಂಬಂಧವಿಲ್ಲ: ಹೆಚ್​ಡಿ ದೇವೇಗೌಡ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada