ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಕೋ ಅಪರೇಟಿವ್ ಬ್ಯಾಂಕ್ ಗ್ರಾಹಕರಿಗೆ ಪಂಗನಾಮ ಹಾಕಿರುವ ಆರೋಪ ಕೇಳಿಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಗ್ರಾಹಕರು, ಚಂದಾದಾರರಿಗೆ ಸಾರಾಸಗಟಾಗಿ ಅನೇಕ ಬ್ಯಾಂಕು, ಸೊಸೈಟಿ, ಚಿಟ್ ಫಂಡ್ ಹೀಗೆ ಮೋಸದ ಜಾಲ ಬೀರುವ ಅನೇಕ ಹಣಕಾಸು ಸಂಸ್ಥೆಗಳು ಜನರನ್ನು ಯಾಮಾರಿಸುತ್ತಲೇ ಇದೆ. ವಿಶೇಷವೆಂದರೆ ಇತ್ತೀಚೆಗೆ ನಡೆದಿರುವ ಇಂತಹ ಹಣಕಾಸು ವಚನೆ ಪ್ರಕರಣಗಳು ಸರಿಸುಮಾರು ಎಲ್ಲ ನಡೆದಿರುವ ಹಳೆಯ ಬೆಂಗಳೂರಿನ ಭಾಗವಾದ ಬಸವನಗುಡಿ, ಅದರ ಪಕ್ಕದ ಹನುಮಂತನಗರ, ಸ್ವಲ್ಪ ಈ ಕಡೆ ಬಂದರೆ ಜಯನಗರ ಈ ಭಾಗಗಳಲ್ಲಿಯೇ ಈ ವಂಚನೆ ಪುರಾಣಗಳು ಬಿಚ್ಚಿಕೊಂಡಿವೆ. ಆದರೆ ಇದಕ್ಕೆಲ್ಲ ಕಾರಣಕರ್ತರಾಗುವುದು ಅದೇ ಗ್ರಾಹಕ ವರ್ಗ ಎಂದರೆ ತಪ್ಪೇನುಲ್ಲ. ಎಲ್ಲಿಯವರೆಗೆ ಮೋಸ ಹೋಗುವ ಜನ ನಾಮುಂದು ತಾಮುಂದು ಎಂದು ಮೋಸ ಹೋಗೋಕ್ಕೆ ಮುಗಿಬೀಳುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವ ನಯವಂಚಕರು ಸಾಲು ಸಾಲು ನಿಂತಿರುತ್ತಾರೆ. ಸೋ, ಎಚ್ಚರಿಕೆಯಂದ ಇರಬೇಕಿರುವುದು.. ಕಷ್ಟಪಟ್ಟು ಹಣ ದುಡಿದಿರುತ್ತಾರೋ ಅಂತಹವರು ತಮ್ಮ ಇಡಿಗಂಟನ್ನು ಸ್ವಯಂ ಜೋಪಾನಮಾಡುವುದು ಅವರವರಿಗೇ ಬಿಟ್ಟಿದ್ದು ಎಂದು ಹೇಳುತ್ತಾ ಇಂದು ಮತ್ತೊಂದು ವಂಚನೆ ಪುರಾಣ ಬೆಳಕಿಗೆ ಬಂದರುವ ಬಗ್ಗೆ ಹೇಳಬೇಕಿದೆ.
ಹೌದು ಮತ್ತದೇ ಬಸವನಗುಡಿಯ ಗಾಂಧಿ ಬಜಾರ್ನಲ್ಲಿರುವ ಶ್ರೀಶೈಲ ಕೋ ಅಪರೇಟಿವ್ ಬ್ಯಾಂಕ್ (Sri Shaila Coop Bank in Gandhi Bazaar ) ತನ್ನ ಗ್ರಾಹಕರಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ. 200 ಕ್ಕೂ ಅಧಿಕ ಗ್ರಾಹಕರಿಗೆ ವಂಚಿಸಿರುವ (cheat) ಆರೋಪ ಹೊರಬಿದ್ದಿದೆ. ಅಂದಾಜು 18 ಕೋಟಿ ರೂಪಾಯಿ ವಂಚನೆ ಎಸಗಿರುವ ಆರೋಪ ಕೇಳಿ ಬಂದಿದೆ (allegation).
ಇದರಿಂದ ಶ್ರೀಶೈಲ ಕೋ ಅಪರೇಟಿವ್ ಬ್ಯಾಂಕ್ ಎದುರು ವಂಚನೆಗೊಳಗಾಗಿರುವ ಗ್ರಾಹಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರಾಹಕರು ನೇರವಾಗಿ ಬ್ಯಾಂಕ್ ಒಳಗಡೆ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಕಳೆದ ಎರಡು ವರ್ಷದಿಂದ ಠೇವಣಿ ಹಿಂದಿರುಗಿಸದೇ ಸದರಿ ಬ್ಯಾಂಕ್ ಸತಾಯಿಸುತ್ತಿದೆಯಂತೆ. ಇದರಿಂದ ಬೇಸತ್ತ ಗ್ರಾಹಕರು ಅನ್ಯ ಮಾರ್ಗ ಕಾಣದೆ ಪ್ರತಿಭಟನೆ ಮಾರ್ಗ ಹಿಡಿದಿದ್ದಾರೆ. ಸಮಾಧಾನಕರ ಸಂಗತಿಯೆಂದರೆ ಗ್ರಾಹಕರ ಒತ್ತಡಕ್ಕೆ ಮಣಿದು ಶ್ರೀಶೈಲ ಕೋ ಅಪರೇಟಿವ್ ಬ್ಯಾಂಕ್ ಹಣ ನೀಡುವ ಭರವಸೆ ನೀಡಿದೆಯಂತೆ. ಮುಂದಿನ ತಿಂಗಳು ಮೇ ಹತ್ತರೊಳಗಡೆ ಗ್ರಾಹಕರ ಠೇವಣಿ ವಾಪಸ್ ನೀಡುವ ಲಿಖಿತ ಭರವಸೆ ನೀಡಿದ್ದಾರೆ ಬ್ಯಾಂಕ್ ಸಿಇಎ ಪಲ್ಲವಿ ಅವರು. ಗ್ರಾಹಕರು ಸದ್ಯಕ್ಕೆ ಸಮಾಧಾನದ ನಿಟ್ಟುಸಿರುಬಿಟ್ಟಿದ್ದಾರೆ.
ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಗ್ರಾಹಕರಿಗೆ ವಂಚನೆ: ಜಾರಿ ನಿರ್ದೇಶನಾಲಯದಿಂದ 6.17 ಕೋಟಿ ರೂಪಾಯಿ ಜಪ್ತಿ
ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಗ್ರಾಹಕರಿಗೆ ವಂಚನೆ ಪ್ರಕರಣಗಳು ಹೆಚ್ಚಾಗಿದ್ದು ಜಾರಿ ನಿರ್ದೇಶನಾಲಯದಿಂದ (ಇ.ಡಿ) 6.17 ಕೋಟಿ ರೂಪಾಯಿ ಜಪ್ತಿ ಮಾಡಲಾಗಿದೆ. ವಿವಿಧ ಕಂಪನಿಗಳ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಹೊಂದಿದ್ದ ಖಾತೆಗಳಿಂದ ಹಣ ಜಪ್ತಿ ಮಾಡಲಾಗಿದೆ. ಕಂಪನಿಗಳ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಇವರೆಲ್ಲ ಖಾತೆಗಳನ್ನು ಹೊಂದಿದ್ದರು. ಇವುಗಳಲ್ಲಿ ಬಹುತೇಕವು ಕೊವಿಡ್ ವೇಳೆ ತಲೆ ಎತ್ತಿದ್ದ ಮೈಕ್ರೋ ಫೈನಾನ್ಸ್ ಕಂಪನಿಗಳಾಗಿದ್ದವು.
ಚೀನಾ ಮೂಲದ ವ್ಯಕ್ತಿಗಳ ಜತೆ ಸಂಪರ್ಕ ಹೊಂದಿದ್ದ ಈ ನಕಲಿ ಕಂಪನಿಗಳು ನಾನಾ ಹೆಸರುಗಳಲ್ಲಿ ಆ್ಯಪ್ ಮೂಲಕ ಹೂಡಿಕೆ ಮತ್ತು ಲೋನ್ ವ್ಯವಹಾರ ನಡೆಸಿದ್ದವು. ನ್ಯಾಯಯುತವಲ್ಲದೆ, ಬೆದರಿಸಿ ಲೋನ್ ರಿಕವರಿ ಆರೋಪ ಈ ಕಂಪನಿಗಳ ವಿರುದ್ಧವಿತ್ತು. ಇವುಗಳ ವಿರುದ್ಧ ಬೆಂಗಳೂರಿನ ಮಹಾಲಕ್ಷ್ಮೀಪುರಂ, ಮಾರತ್‌ಹಳ್ಳಿ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ವಿದೇಶಿ ಹಣ ವರ್ಗಾವಣೆ ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ:
ಮತ್ತೊಂದು ದಿವ್ಯ ಕೊಡುಗೆ! ’6 ವರ್ಷ ಹಿಂದೆಯೇ ದಿವ್ಯಾ ಹಾಗರಗಿ ಮೂಲಕ 16 ಪಿಎಸ್ಐಗಳು ಆಯ್ಕೆಯಾಗಿದ್ದಾರೆ ಮಹಾಸ್ವಾಮಿ!’
ಇದನ್ನೂ ಓದಿ:
PSI Recruitment: ಪಿಎಸ್ಐ ನೇಮಕ ಆದೇಶ ಕೈ ಸೇರುವುದಕ್ಕೂ ಮುನ್ನವೇ ಹುಟ್ಟೂರಲ್ಲಿ ಸಮವಸ್ತ್ರ ಧರಿಸಿ ಸಂಭ್ರಮಿಸಿದ ಬಸನಗೌಡ!
Published On - 1:34 pm, Wed, 27 April 22