ಹಾವೇರಿಯಲ್ಲಿ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರ ಹೋರಾಟ ವಿಚಾರ; ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯ ಡಾ. ಪಿ ಶಾಂತ ಹೇಳಿದ್ದು ಹೀಗೆ
ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯ ಡಾ.ಪಿ ಶಾಂತ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ಸದ್ಯ ಗೋಕಾಕ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಘಟನೆಯಾಗಿ ಈಗಾಗಲೇ ಹನ್ನೆರಡು ವರ್ಷ ಆಗಿದೆ. ಸರ್ಕಾರದ ಮಟ್ಟದಲ್ಲಿ ತನಿಖೆಯಾಗಿ ನನಗೆ ಮತ್ತೆ ಕೆಲಸ ಮಾಡಲು ಅವಕಾಶ ನೀಡಿದ್ದಾರೆ.
ಬೆಳಗಾವಿ: ಹಾವೇರಿಯಲ್ಲಿ (Haveri) ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರು ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವಂತೆ ಸರ್ಕಾರಕ್ಕೆ (Government) ಆಗ್ರಹಿಸಿ ಹೋರಾಟ ನಡೆಸಿದ್ದರು. ಏಪ್ರಿಲ್ 25ರಿಂದ ಪಾದಯಾತ್ರೆ ಹೊರಟಿದ್ದರು. ಸದ್ಯ ಜಿಲ್ಲಾಡಳಿತ ಮಹಿಳೆಯರ ಬೇಡಿಕೆಯನ್ನು ಇಡೇರಿಸುವುದಾಗಿ ಭರವಸೆ ನೀಡಿದೆ. ಹೀಗಾಗಿ ಇಂದು (ಏಪ್ರಿಲ್ 27) ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಡಾ.ಪಿ.ಶಾಂತ, ಸುಮಾರು 1,522 ಮಹಿಳೆಯರಿಗೆ ವಿನಾಕಾರಣ ಗರ್ಭಕೋಶವನ್ನೇ ತೆಗೆದು ಹಾಕಿದ್ದಾರೆ.
ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯ ಡಾ.ಪಿ ಶಾಂತ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ಸದ್ಯ ಗೋಕಾಕ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಘಟನೆಯಾಗಿ ಈಗಾಗಲೇ ಹನ್ನೆರಡು ವರ್ಷ ಆಗಿದೆ. ಸರ್ಕಾರದ ಮಟ್ಟದಲ್ಲಿ ತನಿಖೆಯಾಗಿ ನನಗೆ ಮತ್ತೆ ಕೆಲಸ ಮಾಡಲು ಅವಕಾಶ ನೀಡಿದ್ದಾರೆ. ಅವಶ್ಯಕತೆ ಇದ್ದವರಿಗೆ ಅನುಮತಿ ಪತ್ರ ಪಡೆದು ಶಸ್ತ್ರಚಿಕಿತ್ಸೆ ಮಾಡಿದ್ದೇನೆ. ಈಗ 1500ಕ್ಕೂ ಅಧಿಕ ಶಸ್ತ್ರಚಿಕಿತ್ಸೆ ಮಾಡಿದ್ದೇನೆ ಅಂತಿದ್ದಾರೆ. ಇದರಲ್ಲಿ ಗರ್ಭಕೋಶ ಶಸ್ತ್ರಚಿಕಿತ್ಸೆ ಮಾತ್ರ ಇಲ್ಲಾ, ಎಲ್ಲಾ ಆಪರೇಷನ್ ಸೇರಿಸಿ ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡಿದರ ಕುರಿತು ಅಂಕಿ ಅಂಶ ನನಗೆ ಗೊತ್ತಿಲ್ಲ. ಈ ಕೇಸ್ ಕೋರ್ಟ್ನಲ್ಲಿರುವ ಕಾರಣ ಹೆಚ್ಚು ಹೇಳಲು ಆಗಲ್ಲ. ಇಲಾಖೆಯಿಂದ ವಿಚಾರಣೆ ನಡೆದಿದೆ. ಎಸಿಬಿಯಿಂದ ತನಿಖೆ ಆಗಿದೆ. ಕೆಎಂಸಿಯಿಂದ ತನಿಖೆ ಆಗಿದೆ. ನಿವೃತ್ತ ನ್ಯಾಯಮೂರ್ತಿಗಳಿಂದಲೂ ತನಿಖೆ ನಡೆದಿದೆ. ಎಲ್ಲಾ ತನಿಖೆಯಲ್ಲೂ ನಾನು ದೋಷ ಮುಕ್ತ, ಆರೋಪ ಮುಕ್ತಾ ಅಂತಾ ಬಂದಿದೆ. ಹಣ ಪಡೆದು ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂಬ ಆರೋಪಿಸಿದ್ದಾರೆ. ನಾನು ಎಲ್ಲಾ ಆಪರೇಷನ್ ಮಾಡಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ. ಸರ್ಕಾರಿ ಆಸ್ಪತ್ರೆಯಲ್ಲಿ ಹಣ ಪಡೆದು ಆಪರೇಷನ್ ಮಾಡಲು ಅವಕಾಶ ಇರುವುದಿಲ್ಲ ಅಂತ ವೈದ್ಯ ಡಾ.ಪಿ ಶಾಂತ ಹೇಳಿದರು.
ಉಚಿತವಾಗಿದ್ದಕ್ಕೆ ಇಷ್ಟೊಂದು ಜನ ಬಂದು ನನ್ನ ಹತ್ತಿರ ಆಪರೇಷನ್ ಮಾಡಿಸಿಕೊಂಡಿದ್ದಾರೆ. ನಾನು ಒತ್ತಾಯಪೂರ್ವಕವಾಗಿ ಆಪರೇಷನ್ ಮಾಡಿಲ್ಲ. ಎಲ್ಲರ ಒಪ್ಪಿಗೆ ಪಡೆದು ಮಾಡಿದ್ದೇನೆ. ವೈಯಕ್ತಿಕ ಕಾರಣಗಳಿಂದ ಈಗ ಹೋರಾಟ ಮಾಡುತ್ತಿದ್ದಾರೆ. ಗೋಕಾಕ್ನಲ್ಲಿ ನಾಲ್ಕು ವರ್ಷದಿಂದ ಕೆಲಸ ಮಾಡಿದ್ದು, ಯಾವುದೇ ಸಮಸ್ಯೆ ಆಗಿಲ್ಲ. ಈಗ ಹೋರಾಟ ಮಾಡುವವರ ಪೈಕಿ ತುಂಬಾ ಜನ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿಕೊಂಡವರಿದ್ದಾರೆ. ಕೆಲವರು ನಮ್ಮ ಕಡೆ ಆಪರೇಷನ್ ಮಾಡಿಸಿಕೊಂಡವರು ಇರಬಹುದು. ಖಾಸಗಿಯವರದ್ದು ಸೇರಿಸಿ ಇವರು 1,500 ಅಂತಿದ್ದಾರೆ. ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡುವಾಗ ಹೆಣ್ಣು ಮಕ್ಕಳಿಗೆ ತಿಳಿ ಹೇಳುತ್ತಿದ್ದೆ. ತನಿಖೆ ನಡೆದು ವರದಿ ಬಂದ ಒಂದು ವರ್ಷದ ಬಳಿಕ ನನಗೆ ಮತ್ತೆ ಪೋಸ್ಟಿಂಗ್ ಕೊಟ್ಟಿದ್ದಾರೆ. ಇದುವರೆಗೂ ಎಲ್ಲಾ ತನಿಖೆಯನ್ನ ಎದುರಿಸಿದ್ದೇನೆ. ಇನ್ನೂ ಮುಂದೆ ಎನೇ ತನಿಖೆ ಬಂದರೂ ಎದುರಿಸುತ್ತೇನೆ ಅಂತ ಗೋಕಾಕ್ನಲ್ಲಿ ಟಿವಿ9ಗೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ
Harshal Patel: ಕ್ರೀಡಾಸ್ಪೂರ್ತಿ ಮರೆತ ಹರ್ಷಲ್ ಪಟೇಲ್: ಆರ್ಸಿಬಿ ವೇಗಿ ವಿರುದ್ದ ಆಕ್ರೋಶ