ದಾವಣಗೆರೆ: ಕಾಂಗ್ರೆಸ್ನಲ್ಲಿ ಶಾಮನೂರು ಶಿವಶಂಕರಪ್ಪ ಕೂಡಾ ಮುಖ್ಯಮಂತ್ರಿಯಾಗಲು ಇಣುಕಿ ನೋಡುತ್ತಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆಗೆ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವ್ಯಂಗ್ಯವಾಡಿದ್ದಾರೆ. ಬಿಜೆಪಿಯವರು ಕಾಂಗ್ರೆಸ್ಗೆ ಸಪೋರ್ಟ್ ಮಾಡುತ್ತೀವಿ ಸಿಎಂ ಆಗಿ ಎಂದಿದ್ದಾರಾ? ಎಂದು ವ್ಯಂಗ್ಯವಾಡಿದ ಮಲ್ಲಿಕಾರ್ಜುನ್, ಮಲ್ಲಿಕಾರ್ಜುನ್ ನಮ್ಮ ಅಪ್ಪಾಜ್ಜಿ ಮುಖ್ಯಮಂತ್ರಿ ಆಗುವುದಕ್ಕೆ ಬಿಜೆಪಿಯವರು ಕಾಂಗ್ರೆಸ್ಗೆ ಸಪೋರ್ಟ್ ಮಾಡ್ತಾರಂತಾ? ಎಂದು ನಗೆ ಚಟಾಕಿ ಹಾರಿಸಿದ್ದಾರೆ.
ಸಿಎಂ ಆಗುವುದಕ್ಕೆ ಎಲ್ಲರಿಗೂ ಆಸೆ ಇರುತ್ತೆ. ಆದರೆ ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಒಂದು ಸಂಸ್ಕೃತಿ ಇದೆ. ಹಿರಿಯರು ಹಾಗೂ ಶಾಸಕರು ಆರಿಸಿದ ವ್ಯಕ್ತಿ ಮುಖ್ಯಮಂತ್ರಿ ಆಗುತ್ತಾರೆ. ಶಾಸಕರು ಕೆಲವರ ಹೆಸರನ್ನು ಸಿಎಂ ಅಭ್ಯರ್ಥಿ ಎಂದು ಸೂಚಿಸುವುದು ಅವರವರ ವೈಯಕ್ತಿಕ. ಡಿ.ಕೆ.ಶಿವಕುಮಾರ್ ಎಲ್ಲಾ ಕಾಂಗ್ರೆಸ್ ಶಾಸಕ ಮುಖಂಡರ ಜೊತೆ ಮೀಟಿಂಗ್ ಮಾಡಿದ್ದಾರೆ. ಪಕ್ಷ ಅಧಿಕಾರಕ್ಕೆ ಬರಲು ನಾವೇಲ್ಲ ಒಗ್ಗಟ್ಟಿನಿಂದ ಅಧಿಕಾರಕ್ಕೆ ತರಬೇಕು. ಹೈಕಮಾಂಡ್ ಇದೆ. ಹಿರಿಯರು, ಎಲ್ಲಾ ಎಂಎಲ್ಎಗಳು ಸಿಎಂರನ್ನು ಆರಿಸುತ್ತಾರೆ. ಈಗಲೇ ಸಿಎಂ ಅಭ್ಯರ್ಥಿ ಎಂದು ನಮ್ಮ ಕಾಂಗ್ರೆಸ್ನಲ್ಲಿ ಘೋಷಣೆ ಮಾಡಲ್ಲ ಎಂದು ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಗೋವಿಂದ ಕಾರಜೋಳ ವ್ಯಂಗ್ಯ
ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಕೇವಲ 2 ಗುಂಪುಗಳಿಲ್ಲ, 3 ಗುಂಪುಗಳಿವೆ. (ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಡಿಸಿಎಂ ಡಾ.ಪರಮೇಶ್ವರ್) ಜತೆಗೆ ನಾಲ್ಕನೆಯ ಗುಂಪಿನ ಶ್ಯಾಮನೂರು ಶಿವಶಂಕರಪ್ಪ ಸಹ ಇಣುಕಿ ನೋಡುತ್ತಿದ್ದಾರೆ ಎಂದು ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದರು.
ಹಿರಿಯ ರಾಜಕಾರಣಿ, ಕಾಂಗ್ರೆಸ್ ಶಾಸಕ ಶ್ಯಾಮನೂರು ಶಿವಶಂಕರಪ್ಪ ತಮಗೂ 5 ವರ್ಷ ಆಡಳಿತ ನಡೆಸುವ ಅವಕಾಶ ಸಿಗುವ ಬಗ್ಗೆ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಕಾಂಗ್ರೆಸ್ನಲ್ಲಿನ ಕುಸ್ತಿ ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದಲೇ ಈ ಹಗ್ಗ ಜಗ್ಗಾಟ ಕಾಂಗ್ರೆಸ್ನಲ್ಲಿದೆ. ಈ ಹಿಂದೆ ಕಾಂಗ್ರೆಸ್ನಲ್ಲಿ ಕುಸ್ತಿಯಾಗಿ ಪರಮೇಶ್ವರ್ ಮೂಲೆಗುಂಪು ಮಾಡಲಾಗಿತ್ತು. ಡಾ.ಜಿ.ಪರಮೇಶ್ವರ್ರನ್ನು ಅವರ ಪಕ್ಷದವರೇ ಸೋಲಿಸಿದರು ಎಂದು ಡಿಸಿಎಂ ಗೋವಿಂದ ಕಾರಜೋಳ ವಿಶ್ಲೇಷಿಸಿದ್ದರು.
ಇದನ್ನೂ ಓದಿ
ಕಾಂಗ್ರೆಸ್ನಲ್ಲಿ ಶಾಮನೂರು ಶಿವಶಂಕರಪ್ಪ ಅವರೂ ಮುಖ್ಯಮಂತ್ರಿಯಾಗಲು ಇಣುಕಿ ನೋಡುತ್ತಿದ್ದಾರೆ: ಡಿಸಿಎಂ ಗೋವಿಂದ ಕಾರಜೋಳ
Mann ki Baat: ಕೊವಿಡ್ ಲಸಿಕೆ ಪಡೆಯಲು ಹಿಂಜರಿಕೆ ಬೇಡ, ಲಸಿಕೆ ಪಡೆದುಕೊಳ್ಳಿ: ನರೇಂದ್ರ ಮೋದಿ
(SS Mallikarjun react to DCM Govind Karjol statement)