ಎಸ್ಎಸ್ಎಲ್​ಸಿ ಪರೀಕ್ಷೆಗೆ ಸಿದ್ಧರಾಗಿ.. ಬೋರ್ಡ್‌ ವೆಬ್‌ಸೈಟ್‌ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

| Updated By: ಆಯೇಷಾ ಬಾನು

Updated on: Jun 16, 2021 | 2:20 PM

www.sslc.karnataka.gov.in ಬೋರ್ಡ್‌ ವೆಬ್‌ಸೈಟ್‌ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಲಭ್ಯವಿದೆ. ಬಹು ಆಯ್ಕೆಯ ಮೊದಲ ಪ್ರಶ್ನೆ ಪತ್ರಿಕೆ ಪ್ರಕಟವಾಗಿದೆ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆಗಳು ಲಭ್ಯವಾಗಿದ್ದು ಉತ್ತರವನ್ನು ಒಎಂಆರ್ ಶೀಟ್ನಲ್ಲಿ ನಮೂದಿಸಬೇಕು.

ಎಸ್ಎಸ್ಎಲ್​ಸಿ ಪರೀಕ್ಷೆಗೆ ಸಿದ್ಧರಾಗಿ.. ಬೋರ್ಡ್‌ ವೆಬ್‌ಸೈಟ್‌ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕೇಸ್ಗಳು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯ 2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟಿಸಿದೆ.

www.sslc.karnataka.gov.in ಬೋರ್ಡ್‌ ವೆಬ್‌ಸೈಟ್‌ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಲಭ್ಯವಿದೆ. ಬಹು ಆಯ್ಕೆಯ ಮೊದಲ ಪ್ರಶ್ನೆ ಪತ್ರಿಕೆ ಪ್ರಕಟವಾಗಿದೆ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆಗಳು ಲಭ್ಯವಾಗಿದ್ದು ಉತ್ತರವನ್ನು ಒಎಂಆರ್ ಶೀಟ್ನಲ್ಲಿ ನಮೂದಿಸಬೇಕು. ಪ್ರತೀ ವಿಷಯಕ್ಕೆ ತಲಾ 40 ಅಂಕಗಳ ಒಟ್ಟು 120 ಅಂಕದ ಪ್ರಶ್ನೆ ಪತ್ರಿಕೆ ಇದಾಗಿದ್ದು 3 ಗಂಟೆಗಳ ಕಾಲ ನಡೆಯುವ ಪತ್ರಿಕೆ.

ಉತ್ತರಗಳನ್ನು OMR ಶೀಟ್ನಲ್ಲಿ ನಮೂದಿಸಬೇಕು. OMR ಶೀಟ್ ಮಾದರಿಯೂ ಸಹ ಪ್ರಕಟಿಸಲಾಗಿದೆ. ಇನ್ನೆರಡು ದಿನದಲ್ಲಿ ಮಾತೃ ಭಾಷೆ ಸೇರಿ 3 ವಿಷಯಗಳ ಪ್ರಶ್ನೆಪತ್ರಿಕೆ ಪ್ರಕಟವಾಗುತ್ತೆ. ಪ್ರಶ್ನೆ ಪತ್ರಿಕೆಯನ್ನು ವೆಬ್ ಸೈಟ್ನಲ್ಲಿ ಡೌನ್ ಲೋಡ್ ಮಾಡಿ ಅಭ್ಯಾಸ ಮಾಡಲು ಸೂಚಿಸಲಾಗಿದೆ. ಹಾಗೂ ಶಿಕ್ಷಕರಿಗೂ ಈ ಕುರಿತು ಕಾರ್ಯ ಪ್ರವೃತ್ತರಾಗುವಂತೆ ಸೂಚನೆ ನೀಡಲಾಗಿದೆ.

ಜುಲೈ ಕೊನೆಯ ವಾರದಲ್ಲಿ SSLC ಪರೀಕ್ಷೆ?
ಇನ್ನು ಎಸ್ಎಸ್ಎಲ್ಸಿ ಪರೀಕ್ಷೆ ಬಗ್ಗೆ ಈ ತಿಂಗಳ ಕೊನೆಯ ವಾರದಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ. ಕೊರೊನಾ‌ ಕೇಸ್ ಕಡಿಮೆಯಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ ಜುಲೈ 3ನೇ ವಾರ ಪರೀಕ್ಷೆ ಫಿಕ್ಸ್ ಆಗಬಹುದು. 20 ದಿನಗಳ ಮುಂಚೆ ಪರೀಕ್ಷೆ ಬಗ್ಗೆ ಘೋಷಿಸುವುದಾಗಿ ಈ ಹಿಂದೆ ಸಚಿವ ಸುರೇಶ್ ಕುಮಾರ್ ತಿಳಿಸಿದ್ದರು.

ಇದನ್ನೂ ಓದಿ: Suresh Kumar On PUC exams : ಪಿಯುಸಿ ಪರೀಕ್ಷೆಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೂ ಏನು ವ್ಯತ್ಯಾಸ? ಶಿಕ್ಷಣ ಸಚಿರು ಹೇಳ್ತಾರೆ ಕೇಳಿ…