SSLC ಹಾಗೂ ದ್ವಿತೀಯ ಪಿಯುಸಿ ತಾತ್ಕಾಲಿಕ ಪರೀಕ್ಷಾ ದಿನಾಂಕ ಪ್ರಕಟ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 06, 2021 | 7:28 PM

ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮೇ2 ‌ನೇ ವಾರದಲ್ಲಿ ನಡೆಸಲು ನಿರ್ಧರಿಸಲಾಗಿದೆ. SSLC ಜೂನ್ ಮೊದಲ ವಾರದಲ್ಲಿ ಪರೀಕ್ಷಾ ದಿನಾಂಕ ನಿಗದಿ ಆಗಿದೆ. ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ದಿನಾಂಕ ನಾಳೆ ಪ್ರಕಟಗೊಳ್ಳಲಿದೆ.

SSLC ಹಾಗೂ ದ್ವಿತೀಯ ಪಿಯುಸಿ ತಾತ್ಕಾಲಿಕ ಪರೀಕ್ಷಾ ದಿನಾಂಕ ಪ್ರಕಟ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: SSLC ಹಾಗೂ ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಮೇ ಹಾಗೂ ಜೂನ್​ ತಿಂಗಳಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮೇ2 ‌ನೇ ವಾರದಲ್ಲಿ ನಡೆಸಲು ನಿರ್ಧರಿಸಲಾಗಿದೆ. SSLC ಜೂನ್ ಮೊದಲ ವಾರದಲ್ಲಿ ಪರೀಕ್ಷಾ ದಿನಾಂಕ ನಿಗದಿ ಆಗಿದೆ. ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ದಿನಾಂಕ ನಾಳೆ ಪ್ರಕಟಗೊಳ್ಳಲಿದೆ. ಪರೀಕ್ಷೆ ಸಂಬಂಧಿಸಿದ ಸಿಲಬಸ್ ಕೂಡ ಬಿಡುಗಡೆಯಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಈ ಬಾರಿ ಕೊರೊನಾ ವೈರಸ್​ನಿಂದ ಈ ಬಾರಿಯ ಶೈಕ್ಷಣಿಕ ಕಾರ್ಯಗಳು ಸರಿಯಾಗಿ ನಡೆದಿಲ್ಲ. . ಎಲ್ಲವೂ ಸರಿಯಾಗಿದ್ದರೆ ಮಾರ್ಚ್​​-ಏಪ್ರಿಲ್​ ಅವಧಿಯಲ್ಲೇ ಪರೀಕ್ಷೆ ನಡೆಯಬೇಕಿತ್ತು.

ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್​: 1 ರಿಂದ 10ನೇ ತರಗತಿವರೆಗೆ ಪಠ್ಯ ಕಡಿತಗೊಳಿಸಿ ಸರ್ಕಾರದಿಂದ ಆದೇಶ