ಹಾಲ್ ​ಟಿಕೆಟ್ ಪಡೆದು ಮನೆಗೆ ವಾಪಸಾಗುವಾಗ ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ಎಸ್‌ಎಸ್ಎಲ್‌ಸಿ‌ ವಿದ್ಯಾರ್ಥಿನಿ ಸಾವು

| Updated By: ಸಾಧು ಶ್ರೀನಾಥ್​

Updated on: Jul 15, 2021 | 9:50 AM

SSLC 2021: ಜುಲೈ 19 ರಂದು ಪರೀಕ್ಷೆ ಬರೆಯಬೇಕಿದ್ದ ಪುಟಪಾಕ ಗ್ರಾಮದ ನಿಶಿತಾ ಫಾತಿಮಾ(16) ಸಾವಿಗೀಡಾದ ದುರ್ದೈವಿ. ನಿಶಿತಾ ಫಾತಿಮಾ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ. ಗ್ರಾಮಕ್ಕೆ ವಾಪಸ್​ ಹೋಗಲು ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾಳೆ.

ಹಾಲ್ ​ಟಿಕೆಟ್ ಪಡೆದು ಮನೆಗೆ ವಾಪಸಾಗುವಾಗ ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ಎಸ್‌ಎಸ್ಎಲ್‌ಸಿ‌ ವಿದ್ಯಾರ್ಥಿನಿ ಸಾವು
ಹಾಲ್ ​ಟಿಕೆಟ್ ಪಡೆದು ಮನೆಗೆ ವಾಪಸಾಗುವಾಗ ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ಎಸ್‌ಎಸ್ಎಲ್‌ಸಿ‌ ವಿದ್ಯಾರ್ಥಿನಿ ಬಲಿ
Follow us on

ಯಾದಗಿರಿ: ಜಿಲ್ಲೆಯಲ್ಲಿ ಎಸ್‌ಎಸ್ಎಲ್‌ಸಿ‌ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಮತ್ತೊಂದು ಆಕಸ್ಮಿಕ ಘಟನೆ ನಡೆದಿದೆ. ಹಾಲ್ ಟಿಕೆಟ್ ತರಲು ಶಾಲೆಗೆ ಹೋದಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ಮಂಜುನಾಥ್ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದ. ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿ ಬಳಿ ಈ ದುರ್ಘಟನೆ ನಡೆದಿತ್ತು. ಇದೀಗ ಎಸ್‌ಎಸ್ಎಲ್‌ಸಿ‌ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. ಯಾದಗಿರಿ ಜಿಲ್ಲೆ ಗುರುಮಠಕಲ್‌ ಬಸ್​ ನಿಲ್ದಾಣದಲ್ಲಿ ಘಟನೆ ನಡೆದಿದ್ದು ಎಸ್‌ಎಸ್ಎಲ್‌ಸಿ‌ ಪರೀಕ್ಷೆಗೆಂದು ಹಾಲ್ ​ಟಿಕೆಟ್ ಪಡೆದು ಮನೆಗೆ ವಾಪಸ್​ ಬರುವಾಗ ಸಾವು ಸಂಭವಿಸಿದೆ.

ಜುಲೈ 19 ರಂದು ಪರೀಕ್ಷೆ ಬರೆಯಬೇಕಿದ್ದ (SSLC 2021) ಪುಟಪಾಕ ಗ್ರಾಮದ ನಿಶಿತಾ ಫಾತಿಮಾ (16) ಸಾವಿಗೀಡಾದ ದುರ್ದೈವಿ. ನಿಶಿತಾ ಫಾತಿಮಾ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ. ಗ್ರಾಮಕ್ಕೆ ವಾಪಸ್​ ಹೋಗಲು ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾಳೆ.

ಅಂದು ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ ಹೊಡೆದಿತ್ತು:

ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ ಹೊಡೆದು ಮಂಜುನಾಥ್ ಎಂಬ ವಿದ್ಯಾರ್ಥಿ ಅಸುನೀಗಿದ್ದ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿ ಬಳಿ ದುರ್ಘಟನೆ ನಡೆದಿತ್ತು. ಹಾಲ್ ಟಿಕೆಟ್ ತರಲು ಮನೆಯಿಂದ‌ ಶಾಲೆಗೆ ಹೋದಾಗ ಈ ‌ದುರ್ಘಟನೆ ನಡೆದಿತ್ತು. ಮಂಜುನಾಥ್ (16), ಹಾಲ್‌ ಟಿಕೆಟ್‌ ತರಲು ಹೋಗಿ ಮೃತಪಟ್ಟ ವಿದ್ಯಾರ್ಥಿ.

ದಾರಿಯಲ್ಲಿ ಹೋಗುವಾಗ ಟ್ರ್ಯಾಕ್ಟರ್ ಚಾಲಕ ಶಾಲೆ‌ವರೆಗೆ ಬಿಡೋದಾಗಿ ಮಂಜುನಾಥನನ್ನು ತನ್ನ ಟ್ರ್ಯಾಕ್ಟರ್​ನಲ್ಲಿ ಕೂರಿಸಿಕೊಂಡು ಹೋಗಿದ್ದ. ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿ ಈ ಆಕಸ್ಮಿಕ ನಡೆದಿದೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ರ್ಯಾಕ್ಟರ್ ಪಲ್ಟಿ: ಹಾಲ್‌ ಟಿಕೆಟ್‌ ತರಲು ಹೋಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು‌

(sslc girl student died due to heart attack in gurmitkal in yadgir)