ಫೆ. 27ರಿಂದ ಪಾದಯಾತ್ರೆ ಶುರು; ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 25, 2022 | 7:22 PM

ಫೆ. 27 ರಿಂದ ಮಾ. 3ರವರೆಗೆ ಪಾದಯಾತ್ರೆ ನಡೆಯಲಿದ್ದು, ಮಾ.೧ ರಿಂದ ೩ರವರೆಗೆ ಬೆಂಗಳೂರಿನ ಹಲವು ಭಾಗದಲ್ಲಿ ಪಾದಯಾತ್ರೆ ಸಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಫೆ. 27ರಿಂದ ಪಾದಯಾತ್ರೆ ಶುರು; ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿಕೆ
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ
Follow us on

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಇಂದು ಸುದ್ದಿಗೋಷ್ಠಿ ನಡೆಸಿದ್ದು, ಪಾದಯಾತ್ರೆಯನ್ನು ಮತ್ತೇ ಆರಂಭಿಸುವುದರ ಕುರಿತಾಗಿ ಮಾಹಿತಿ ನಿಡಿದ್ದಾರೆ. ಫೆ. 27 ರಿಂದ ಮಾ. 3 ರವರೆಗೆ ಪಾದಯಾತ್ರೆ ನಡೆಯಲಿದೆ. ಮಾ.೧ರಿಂದ ೩ ರವರೆಗೆ ಬೆಂಗಳೂರು ಭಾಗದಲ್ಲಿ ಪಾದಯಾತ್ರೆ ಸಾಗಲಿದೆ.
ಮಾ.೧ ರಂದು ಜ್ಙಾನಭಾರತಿ ಮೆಟ್ರೋ ನಿಲ್ದಾಣ, ನಾಯಂಡಹಳ್ಳಿ, ಕತ್ರಿಗುಪ್ಪೆ, ಕದಿರೇನಹಳ್ಳಿ, ಬನಶಂಕರಿ ದೇಗುಲ, ಜಯದೇವ ಆಸ್ಪತ್ರೆ, ಹೊಸೂರು ರಸ್ತೆ,ಇನ್ ಫ್ಯಾಂಟ್ರಿ‌ರಸ್ತೆ, ಹಾಸ್ ಮ್ಯಾಟ್ ರಸ್ತೆ, ತಿರುವಳ್ಳವರ್ ಪ್ರತಿಮೆ ರಸ್ತೆ, ನಂದಿದುರ್ಗ, ಜೆ.ಸಿ.ನಗರ, ಮೇಖ್ರಿ ಸರ್ಕಲ್, ಅರಮನೆ ಮೈದಾನ, ಕಾವೇರಿ, ಸ್ಯಾಂಕಿರಸ್ತೆ, ಮಾರ್ಗೊಸಾ ರಸ್ತೆ, ಶೇಷಾದ್ರಿಪುರಂ, ಕಾಟನ್ ಪೇಟೆ ರಾಯನ್ ಸರ್ಕಲ್, ಈದ್ಗಾ ಮೈದಾನ ಮತ್ತು ನ್ಯಾಷನಲ್ ಕಾಲೇಜು‌ ಮೈದಾನದಲ್ಲಿ ಪಾದಯಾತ್ರೆ ಕೊನೆಯಾಗಲಿದೆ. ಈ ಪಾದಯಾತ್ರೆಗೆ ಕಾಂಗ್ರೆಸ್ ಉಸ್ತುವಾರಿ ಸಚಿವ ರಣದೀಪ್ ಸಿಂಗ್ ಸುರ್ಜೆವಾಲಾ ಚಾಲನೆ ನೀಡಲಿದ್ದಾರೆ.

ಇನ್ನೂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸುಮಾರು ೨.೫ ಕೋಟಿ ಜನರಿಗೆ ನೀರು ಸಿಗಲಿದೆ. ಇದರಿಂದ ಬೆಂಗಳೂರಿಗಷ್ಟೇ ಅಲ್ಲ, ಸುತ್ತಮುತ್ತಲಿನ ಜಿಲ್ಲೆಯ ಜನರಿಗೂ ನೀರು ಸಿಗಲಿದೆ. ಕುಡಿಯುವ ನೀರಿಗಾಗಿ ಹೋರಾಡ ಮಾಡ್ತಿದ್ದೇವೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯಾಗಲಿದೆ. ನೀರಿಗಾಗಿ ಸ್ವಲ್ಪ ಕಿರಿಕಿರಿ ಆಗಲಿದ್ದು, ಹಾಗಾಗಿ ಇಲ್ಲಿನ ಜನ ಸಹಕರಿಸಬೇಕು ಎಂದಿದ್ದಾರೆ. ಈ ಯೋಜನೆ ಆಗಲೇಬೇಕಿದೆ. ನೆಲ, ಜಲ, ಭಾಷೆ ಬಗ್ಗೆ ಸರ್ವಪಕ್ಷ ನಾಯಕರೊಡನೆ ಎಲ್ಲರನ್ನೂ‌ಕರೆದೋಯ್ಯುತ್ತಿದ್ದೆವು ಆದರೆ ಇವರು ಕೇಂದ್ರಕ್ಕೆ ಕರೆದೊಯ್ಯಲಿಲ್ಲ. ಮೋದಿಯವರ ಮುಂದೆ ಮಾತನಾಡುವ ಶಕ್ತಿಯಿಲ್ಲ. ಮೋದಿವರನ್ನ ಸುತ್ತುವುದಷ್ಟೇ ಅವರ ಕೆಲಸ. ಗಣೇಶ ಸುತ್ತಿದಂತೆ ಸುತ್ತಿ‌ ಸುಮ್ಮನಾಗ್ತಾರೆ ಹೊರತು ಇವರಿಂದ ನಾವು ಇನ್ನೇನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಕೂಡ ಮೇಕೆದಾಟು ಪಾದಯಾತ್ರೆಯನ್ನು ಕೈಗೊಳ್ಳಲಾಗಿತ್ತು. ಆದರೆ ಅಂದು ಮಹಾಮಾರಿ ಕರೊನಾ ಪ್ರಕರಣಗಳು ಹೆಚ್ಚಾಗಿದ್ದವು. ಸಾರ್ವಜನಿಕವಾಗಿ ಸಭೆ ಸಮಾರಂಭಗಳಲ್ಲಿ ಜನರು ಹೆಚ್ಚಾಗಿ ಪಾಲ್ಗೊಳ್ಳುವುದರಿಂದ ಮತ್ತಷ್ಟೋ ಪ್ರಕರಣಗಳು ಹೆಚ್ಚಾಗ ಬಹುದು ಎಂದು ಕಾಂಗ್ರೆಸ್ ಪಕ್ಷ ಪಾದಯಾತ್ರೆಯನ್ನು ಅರ್ಧಕ್ಕೆ ನಿಲ್ಲಿಸಿತ್ತು.

ಇದನ್ನೂ ಓದಿ:

Crime News: ನೀನು ಜಗತ್ತಿನ ಬೆಸ್ಟ್​ ಅಮ್ಮ, ನನ್ನ ದೇವತೆ; ಸೂಸೈಡ್ ನೋಟ್ ಬರೆದಿಟ್ಟು 15ನೇ ಮಹಡಿಯಿಂದ ಹಾರಿದ ಬಾಲಕ

ಉಕ್ರೇನ್‌ನಿಂದ ಪಾರಾಗಲು ಪೋಲೆಂಡ್ ಗಡಿಭಾಗಕ್ಕೆ 8 ಕಿಮೀ ನಡೆದ 40 ಭಾರತೀಯ ವಿದ್ಯಾರ್ಥಿಗಳು