ಕೇಂದ್ರದ ವರಿಷ್ಠರು ಸೌಜನ್ಯಕ್ಕಾದರೂ ರಾಜ್ಯ ಬಿಜೆಪಿ ನಾಯಕರೊಂದಿಗೆ ಮಾತಾಡುತ್ತಿಲ್ಲ: ಎನ್ ಚಲುವರಾಯಸ್ವಾಮಿ, ಸಚಿವ

|

Updated on: Nov 01, 2023 | 2:04 PM

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರವೊಂದು ರಚನಾತ್ಮಕವಾಗಿ ಕೆಲಸ ಮಾಡಬೇಕಾದರೆ, ಸರ್ಕಾರದ ತಪ್ಪು ಒಪ್ಪುಗಳನ್ನು ಟೀಕಿಸಲು, ತಿದ್ದಲು ಒಬ್ಬ ಸಮರ್ಥ ವಿರೋಧ ಪಕ್ಷದ ನಾಯಕ ಇರಲೇಬೇಕು. ರಾಜ್ಯದ ಸ್ಥಿತಿ ಚೆನ್ನಾಗಿಲ್ಲ, ಭೀಕರ ಬರಗಾಲ ಎದುರಾಗಿದೆ, ಕಾವೇರಿಯಲ್ಲಿ ನೀರಿಲ್ಲ ಮತ್ತು ಇನ್ನೂ ಹಲವಾರು ಸಮಸ್ಯೆಗಳಿವೆ, ಹಾಗಾಗಿ ಸರ್ಕಾರದ ಜೊತೆ ಫೈಟ್ ಮಾಡಲು ಒಬ್ಬ ವಿರೋಧ ಪಕ್ಷದ ನಾಯಕ ಇಲ್ಲವೆಂದ್ರೆ ಹೇಗೆ ಅಂತ ಚಲುವರಾಯಸ್ವಾಮಿ ಪ್ರಶ್ನಿಸಿದರು.

ಮಂಡ್ಯ: ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy), ರಾಜ್ಯದಲ್ಲಿ ಬಿಜೆಪಿ ನಾಯಕರ (state BJP leaders) ಸ್ಥಿತಿ ಶೋಚನೀಯವಾಗಿದೆ ಅಂತ ಹೇಳಿದರು. ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ ನಂತರ ಕೇಂದ್ರದ ಬಿಜೆಪಿ ವರಿಷ್ಠರು ಸೌಜನ್ಯಾಕ್ಕಾದರೂ ರಾಜ್ಯದ ನಾಯಕರೊಂದಿಗೆ ಮಾತಾಡುತ್ತಿಲ್ಲ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ವಿಧಾನಮಂಡಲ ಅಧಿವೇಶನದಲ್ಲಿ (Assembly session) ರಾಜ್ಯಪಾಲರು ವಿರೋಧ ಪಕ್ಷದ ನಾಯಕನಿಲ್ಲದೆ ಭಾಷಣ ಮಾಡಿದ ಪ್ರಸಂಗ ಮೊನ್ನೆ ನಡೆದಿದೆ ಎಂದು ಸಚಿವ ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರವೊಂದು ರಚನಾತ್ಮಕವಾಗಿ ಕೆಲಸ ಮಾಡಬೇಕಾದರೆ, ಸರ್ಕಾರದ ತಪ್ಪು ಒಪ್ಪುಗಳನ್ನು ಟೀಕಿಸಲು, ತಿದ್ದಲು ಒಬ್ಬ ಸಮರ್ಥ ವಿರೋಧ ಪಕ್ಷದ ನಾಯಕ ಇರಲೇಬೇಕು. ರಾಜ್ಯದ ಸ್ಥಿತಿ ಚೆನ್ನಾಗಿಲ್ಲ, ಭೀಕರ ಬರಗಾಲ ಎದುರಾಗಿದೆ, ಕಾವೇರಿಯಲ್ಲಿ ನೀರಿಲ್ಲ ಮತ್ತು ಇನ್ನೂ ಹಲವಾರು ಸಮಸ್ಯೆಗಳಿವೆ, ಹಾಗಾಗಿ ಸರ್ಕಾರದ ಜೊತೆ ಫೈಟ್ ಮಾಡಲು ಒಬ್ಬ ವಿರೋಧ ಪಕ್ಷದ ನಾಯಕ ಇಲ್ಲವೆಂದ್ರೆ ಹೇಗೆ ಅಂತ ಚಲುವರಾಯಸ್ವಾಮಿ ಪ್ರಶ್ನಿಸಿದರು. ತಮ್ಮ ಪಕ್ಷದ ಶಾಸಕರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದ ಚಲುವರಾಯಸ್ವಾಮಿ, ಶಾಸಕರು ಮಂತ್ರಿಗಿರಿ, ನಿಗಮ-ಮಂಡಳಿಗಳ ಅಧ್ಯಕ್ಷನಾಗುವ ಆಸೆ ಇಟ್ಟುಕೊಳ್ಳುವುದು ತಪ್ಪೇ ಅಂತ ಕೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ