ಬೆಂಗಳೂರು: ಇತ್ತೀಚೆಗಷ್ಟೇ ದೇಶದಾದ್ಯಂತ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ಮಹಾಮಾರಿಯ ವಿರುದ್ಧ ಹಗಲಿರುಳು ಎನ್ನದೇ ಹೋರಾಡುತ್ತಿರುವ ವೈದ್ಯರ ಸೇವೆಯನ್ನ ಗೌರವಿಸಲಾಯಿತು. ಇದೀಗ ರಾಜ್ಯ ಸರ್ಕಾರ ತುಸು ತಡವಾಗಿ ರಾಜ್ಯದ ಗುತ್ತಿಗೆ ವೈದ್ಯರಿಗೆ ಭರ್ಜರಿ ಗಿಫ್ಟ್ ಕೊಟ್ಟಿದೆ.
ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ವೈದ್ಯರಿಗೆ ಸಂಬಳ ಹೆಚ್ಚಿಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ನೀಡಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 504 ವೈದ್ಯರಿಗೆ ಅನುಕೂಲವಾಗಲಿದೆ.’
ಆದೇಶದಲ್ಲಿ ಸಂಬಳವನ್ನು 45 ಸಾವಿರದಿಂದ 60 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ ಅವರ ಸೇವೆಯನ್ನ ಖಾಯಂಗೊಳಿಸುತ್ತಿಲ್ಲ ಕೇವಲ ಸಂಬಳವನ್ನ ಮಾತ್ರ ಹೆಚ್ಚಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ. ಇತ್ತೀಚೆಗಷ್ಟೇ ಸಂಬಳ ಏರಿಕೆ ಹಾಗೂ ಖಾಯಂ ಕೆಲಸಕ್ಕಾಗಿ ಗ್ರಾಮೀಣ ಭಾಗದ ವೈದ್ಯರು ಪ್ರತಿಭಟನೆ ನೆಡೆಸಿದ್ದರು. ಇದೀಗ ಸರ್ಕಾರ ಅವರ ಮನವಿಗೆ ಸ್ಪಂದಿಸಿ ಆದೇಶ ಹೊರಡಿಸಿದೆ.