‘ಫೀಸ್ ಕಟ್ಟೋಕೆ ಆಗದಿದ್ರೇ ನಿಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸಿ’
ಕೊಡಗು: ಕೊರೊನಾ ಸಂಕಷ್ಟದ ನಡುವೆ ಶಾಲಾ ಶುಲ್ಕ ಪಾವತಿಸುವಂತೆ ಪೋಷಕರಿಗೆ ಒತ್ತಡ ಹೇರಬೇಡಿ ಎಂದು ರಾಜ್ಯ ಸರ್ಕಾರ ನಿರ್ದೇಶನ ಹೊರಡಿಸಿದರೂ ಕೆಲವು ಖಾಸಗಿ ಶಾಲೆಗಳು ಮಾತ್ರ ತಮ್ಮ ವರಸೆ ಮುಂದುವರೆಸಿವೆ. ಇದಕ್ಕೆ ಹೊಸ ಉದಾಹರಣೆ ಜಿಲ್ಲೆಯ ಮಡಿಕೇರಿಯಲ್ಲಿರುವ ಈ ಖಾಸಗಿ ಶಾಲೆ. ಶುಲ್ಕವನ್ನ ಕಟ್ಟಲು ಪೋಷಕರ ಮೇಲೆ ಒತ್ತಡ ಹೇರುತ್ತಿರುವ ಶಾಲೆಯ ಆಡಳಿತ ಮಂಡಳಿ ಫೀಸ್ ಕಟ್ಟಲು ಆಗದಿದ್ರೆ ನಿಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸಿ. ಜೊತೆಗೆ ಸರ್ಕಾರಿ ಶಾಲೆಗಳು ಚೆನ್ನಾಗಿವೆ. ಕರೆದುಕೊಂಡು ಹೋಗಿ ಅಲ್ಲೇ ಸೇರಿಸಿ […]
ಕೊಡಗು: ಕೊರೊನಾ ಸಂಕಷ್ಟದ ನಡುವೆ ಶಾಲಾ ಶುಲ್ಕ ಪಾವತಿಸುವಂತೆ ಪೋಷಕರಿಗೆ ಒತ್ತಡ ಹೇರಬೇಡಿ ಎಂದು ರಾಜ್ಯ ಸರ್ಕಾರ ನಿರ್ದೇಶನ ಹೊರಡಿಸಿದರೂ ಕೆಲವು ಖಾಸಗಿ ಶಾಲೆಗಳು ಮಾತ್ರ ತಮ್ಮ ವರಸೆ ಮುಂದುವರೆಸಿವೆ. ಇದಕ್ಕೆ ಹೊಸ ಉದಾಹರಣೆ ಜಿಲ್ಲೆಯ ಮಡಿಕೇರಿಯಲ್ಲಿರುವ ಈ ಖಾಸಗಿ ಶಾಲೆ.
ಶುಲ್ಕವನ್ನ ಕಟ್ಟಲು ಪೋಷಕರ ಮೇಲೆ ಒತ್ತಡ ಹೇರುತ್ತಿರುವ ಶಾಲೆಯ ಆಡಳಿತ ಮಂಡಳಿ ಫೀಸ್ ಕಟ್ಟಲು ಆಗದಿದ್ರೆ ನಿಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸಿ. ಜೊತೆಗೆ ಸರ್ಕಾರಿ ಶಾಲೆಗಳು ಚೆನ್ನಾಗಿವೆ. ಕರೆದುಕೊಂಡು ಹೋಗಿ ಅಲ್ಲೇ ಸೇರಿಸಿ ಎಂದು ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಉಡಾಫೆಯ ಮಾತುಗಳನ್ನು ಆಡಿದ್ದಾರೆ.
ಫೀಸ್ ಕಟ್ಟದಿದ್ರೆ ಶಾಲೆ ನಡೆಸೋಕೆ ಆಗಲ್ಲ. ಹೀಗಾಗಿ ಕಾಲು ಭಾಗ ಫೀಸ್ ಕಟ್ಟಲೇ ಬೇಕು. ಫೀಸ್ ಕಟ್ಟದಿದ್ರೆ ಪಠ್ಯ ಪುಸ್ತಕ ಮತ್ತು ನೋಟ್ ಬುಕ್ ಕೊಡಲ್ಲ ಎಂದು ಪೋಷಕರಿಗೆ ಆಡಳಿತ ಮಂಡಳಿ ತಾಕೀತು ಮಾಡಿದೆ. ಹೀಗಾಗಿ ಇದರಿಂದ ಸಿಟ್ಟಾದ ಪೋಷಕರು ಆಡಳಿತ ಮಂಡಳಿಯೊಂದಿಗೆ ವಾಗ್ವಾದಕ್ಕೆ ಇಳಿದರು.