ಬೈಎಲೆಕ್ಷನ್ ಕಾಲದಲ್ಲೇ ಹೊರಬಿತ್ತು ವರ್ಗಾವಣೆ ಆದೇಶ: 18 DySP, 100 ಇನ್​​ಸ್ಪೆಕ್ಟರ್​ ಟ್ರಾನ್ಸ್​ಫರ್​

|

Updated on: Mar 29, 2021 | 8:21 PM

ರಾಜ್ಯದ ಪೊಲೀಸ್​ ಇಲಾಖೆಯಲ್ಲಿ ಟ್ರಾನ್ಸ್​ಫರ್​ ಪರ್ವ ಶುರುವಾಗಿದೆ. 18 ಡಿವೈಎಸ್‌ಪಿ ಹಾಗೂ 100 ಇನ್​ಸ್ಪೆಕ್ಟರ್​ಗಳನ್ನು ವರ್ಗಾವಣೆ ಮಾಡಲಾಗಿದೆ.

ಬೈಎಲೆಕ್ಷನ್ ಕಾಲದಲ್ಲೇ ಹೊರಬಿತ್ತು ವರ್ಗಾವಣೆ ಆದೇಶ: 18 DySP, 100 ಇನ್​​ಸ್ಪೆಕ್ಟರ್​ ಟ್ರಾನ್ಸ್​ಫರ್​
ವಿಧಾನ ಸೌಧ
Follow us on

ಬೆಂಗಳೂರು: ಮುಂಬರುವ ಉಪಸಮರಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದೆ. ಈ ನಡುವೆ, ರಾಜ್ಯದ ಪೊಲೀಸ್​ ಇಲಾಖೆಯಲ್ಲಿ ಟ್ರಾನ್ಸ್​ಫರ್​ ಪರ್ವ ಶುರುವಾಗಿದೆ. 18 ಡಿವೈಎಸ್‌ಪಿ ಹಾಗೂ 100 ಇನ್​ಸ್ಪೆಕ್ಟರ್​ಗಳನ್ನು ವರ್ಗಾವಣೆ ಮಾಡಲಾಗಿದೆ. ಪೊಲೀಸ್​ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರದಿಂದ ಆದೇಶ ಹೊರಬಿದ್ದಿದೆ.

ಅತ್ತ, ರಾಜ್ಯದ 5 ನಗರಸಭೆಗಳು, ಎರಡು ಪುರಸಭೆ ಹಾಗೂ 2 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ಘೋಷಣೆಯಾಗಿದೆ. ರಾಜ್ಯ ಚುನಾವಣಾ ಆಯೋಗದಿಂದ ಚುನಾವಣೆ ಘೋಷಣೆಯಾಗಿದೆ. ಏಪ್ರಿಲ್ 8ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ 15 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಏಪ್ರಿಲ್ 27ರಂದು ಮತದಾನ ಹಾಗೂ ಏಪ್ರಿಲ್ 30ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ.

ರಾಮನಗರ, ಚನ್ನಪಟ್ಟಣ, ಭದ್ರಾವತಿ, ಮಡಿಕೇರಿ ಹಾಗೂ ಬೀದರ್ ನಗರಸಭೆಗೆ ಚುನಾವಣೆ ಘೋಷಿಸಿದ ಆಯೋಗ ವಿಜಯಪುರ, ಬೇಲೂರು ಪುರಸಭೆಗೆ ಚುನಾವಣೆ ಘೋಷಣೆ ಮಾಡಿದೆ. ಇದಲ್ಲದೆ, ಗುಡಿಬಂಡೆ, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗೆ ಚುನಾವಣೆ ಘೋಟಣೆಯಾಗಿದ್ದು ಹಳ್ಳಿಖೇಡ ಪಟ್ಟಣ ಪಂಚಾಯಿತಿ ವಾರ್ಡ್ 11ಕ್ಕೆ ಬೈಎಲೆಕ್ಷನ್ ಸಹ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ಸಿಡಿ ಲೇಡಿಗೆ ಪೊಲೀಸರಿಂದ ಮತ್ತೊಂದು ನೋಟಿಸ್ ಜಾರಿ; ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ

Published On - 7:15 pm, Mon, 29 March 21