ಕೊರೊನಾ ಟೆಸ್ಟ್ ಬಳಿಕ ಬಂದ 25 ಕೋಟಿ ಕೊವಿಡ್ ಮೆಸೇಜ್‌ಗೆ ₹2.4 ಕೋಟಿ ಗುತ್ತಿಗೆ, ಸರ್ಕಾರದ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ
ರಾಜ್ಯ ಸರ್ಕಾರ ಕೋವಿಡ್ಗೆ ಸಂಬಂಧಿಸಿದ ಒಂದು ಮೆಸೇಜ್‌ಗೆ 10.57 ಪೈಸೆ ಖರ್ಚು ಮಾಡಿದೆ. ಕೇಂದ್ರ ಸರ್ಕಾರದ ಅಧೀನ ಸಂಸ್ಥೆ ಸಿ ಡಾಕ್‌ಗೆ ಕೊಕ್ ನೀಡಿ ಉತ್ತರ ಪ್ರದೇಶದ ಖಾಸಗಿ ಕಂಪನಿಗೆ ಗುತ್ತಿಗೆ ಕೊಡಲಾಗಿದೆ.
ಬೆಂಗಳೂರು: ಕೊರೊನಾ ಟೆಸ್ಟ್ ಮಾಡಿಸಿದ ಬಳಿಕ ಬರುವ ಕೊವಿಡ್ ಮೆಸೇಜ್‌ಗೆ ರಾಜ್ಯ ಸರ್ಕಾರ 2.4 ಕೋಟಿ ರೂಪಾಯಿಗೆ ಗುತ್ತಿಗೆ ನೀಡಿದೆ. ರಾಜ್ಯ ಸರ್ಕಾರ 25 ಕೋಟಿ ಕೊವಿಡ್ ಮೆಸೇಜ್‌ಗೆ ₹2.4 ಕೋಟಿಗೆ ಗುತ್ತಿಗೆ ನೀಡಿದೆ.
ರಾಜ್ಯ ಸರ್ಕಾರ ಕೋವಿಡ್ಗೆ ಸಂಬಂಧಿಸಿದ ಒಂದು ಮೆಸೇಜ್‌ಗೆ 10.57 ಪೈಸೆ ಖರ್ಚು ಮಾಡಿದೆ. ಕೇಂದ್ರ ಸರ್ಕಾರದ ಅಧೀನ ಸಂಸ್ಥೆ ಸಿ ಡಾಕ್‌ಗೆ ಕೊಕ್ ನೀಡಿ ಉತ್ತರ ಪ್ರದೇಶದ ಖಾಸಗಿ ಕಂಪನಿಗೆ ಗುತ್ತಿಗೆ ಕೊಡಲಾಗಿದೆ. ರಾಜ್ಯ ಸರ್ಕಾರ ಉತ್ತರ ಪ್ರದೇಶದ ವಿ ಕನೆಕ್ಟ್ ಸಿಸ್ಟಂ ಸರ್ವಿಸ್ ಪ್ರೈವೇಟ್ ಲಿಮಿಟೆಡ್ಗೆ ಕೋವಿಡ್ ಪರೀಕ್ಷೆಗೊಳಪಟ್ಟವರ ಮೊಬೈಲ್ಗೆ ನೆಗೆಟಿವ್ ಮತ್ತು ಪಾಸಿಟಿವ್ ಮೆಸೇಜ್ ಕಳಿಸಿಲು ಗುತ್ತಿಗೆ ಪಡೆದಿದೆ.
ಈ ಹಿಂದೆ ಕೇಂದ್ರ ಸರ್ಕಾರದ ಅಧೀನದ ಸಿ ಡಾಕ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಅವಧಿ 2023ರ ಡಿಸೆಂಬರ್ 31ಕ್ಕೆ ಮುಗಿಯಬೇಕಿತ್ತು. ಆದ್ರೆ ಅವಧಿಗೂ ಮುನ್ನವೇ ಸರ್ಕಾರ ಬೇರೊಬ್ಬರಿಗೆ ಗುತ್ತಿಗೆ ನೀಡಿದೆ. ಹೀಗಾಗಿ ಸರ್ಕಾರದ ಅಧೀನ ಸಂಸ್ಥೆ ಬಿಟ್ಟು ಖಾಸಗಿಯವರಿಗೆ ಗುತ್ತಿಗೆ ನೀಡುವ ಪರಿಸ್ಥಿತಿ ರಾಜ್ಯ ಸರ್ಕಾರಕ್ಕೆ ಬಂದಿದೆ. ಇದೀಗ ಈ ಗುತ್ತಿಗೆ ಖಾಸಗಿ ಕಂಪನಿಗೆ ನೀಡಲಾಗಿದ್ದು ಖಾಸಗಿ ಕಂಪನಿಗೆ ಗುತ್ತಿಗೆ ನೀಡಿರುವುದು ಏಕೆ ಎಂಬ ಬಗ್ಗೆ ಹಾಗೂ ರಾಜ್ಯ ಸರ್ಕಾರದ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.
25 ಕೋಟಿ SMS ಸೇವೆಗೆ 2.4 ಕೋಟಿ ಪಾವತಿಯಾಗಲಿದೆ. ಸಿ ಡಾಕ್ ಗುತ್ತಿಗೆ ಪೂರ್ಣಗೊಳುವ ಮುನ್ನವೇ ಖಾಸಗಿ ಕಂಪನಿಗೆ ಗುತ್ತಿಗೆ ನೀಡಿದ್ಯಾಕೆ ಎಂಬ ಪ್ರಶ್ನೆ ಉದ್ಭವಿಸಿದೆ. ಸಿ ಡಾಕ್ ಗೆ ಮೆಸೇಜ್ ಸೇವೆ ನೀಡುವ ಅವಕಾಶ 2023 ಡಿಸೆಂಬರ್ 31 ವರೆಗೂ ಇತ್ತು. 2021 ರ ಜನವರಿ 1 ರಿಂದ 2 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು.
ಇದನ್ನೂ ಓದಿ: Gold Price Today: ಇಂದು ಸಹ ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ; ನೀವು ಕೊಳ್ಳುವ ಆಭರಣಕ್ಕೆ ಎಷ್ಟಿದೆ ರೇಟ್? ಇಲ್ಲಿದೆ ಮಾಹಿತಿ