ಸ್ಟಿಂಗ್ ಆಪರೇಷನ್ ವಿಡಿಯೋ ನನ್ನ ಮೊಬೈಲ್​​​ಗೂ ಬಂದಿದೆ: ಹೊಸ ಬಾಂಬ್ ಸಿಡಿಸಿದ ಅಶೋಕ್

ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ಬಾಂಬ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸ್ವತಃ ಸಿಎಂ ಡಿಕೆ ಶಿವಕುಮಾರ್ ಅವರೇ ನನ್ನೇ ಟ್ರ್ಯಾಪ್ ಮಾಡೋಕೆ ಬಂದಿದ್ರು ಎಂದು ಹೇಳಿರೋದು ರಾಜಕೀಯ ಜಪಾಪಟಿಗೆ ಕಾರಣ ಆಗಿದೆ. ಇದಕ್ಕೆ ಕೌಂಟರ್ ಕೊಡ್ತಿರೋ ಕೇಸರಿ ಪಡೆ, ಎಲ್ಲೋ ಒಂದ್ಕಡೆ ಸಿಎಂ ತಗ್ಲಾಕೊಂಡಂತೆ ಕಾಣುತ್ತಿದೆ ಅಂತಿದ್ದಾರೆ. ಇದರ ಮಧ್ಯೆ ವಿಪಕ್ಷ ನಾಯಕರ ಆರ್ ಅಶೋಕ್, ನನಗೆ ಕೂಡಾ ಕೆಲವು ವಿಡಿಯೋಗಳನ್ನು ಕಳುಹಿಸಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ.

ಸ್ಟಿಂಗ್ ಆಪರೇಷನ್ ವಿಡಿಯೋ ನನ್ನ ಮೊಬೈಲ್​​​ಗೂ ಬಂದಿದೆ: ಹೊಸ ಬಾಂಬ್ ಸಿಡಿಸಿದ ಅಶೋಕ್
R Ashok
Edited By:

Updated on: Oct 08, 2026 | 9:16 PM

ಬೆಂಗಳೂರು, (ಅಕ್ಟೋಬರ್ 08): ಸ್ಟಿಂಗ್ ಆಪರೇಷನ್.. ಸಚಿವರಿಗೆ ಖೆಡ್ಡಾ.. ರಾಜ್ಯ ರಾಜಕೀಯದಲ್ಲಿ ಸ್ಟಿಂಗ್​ ಆಪರೇಷನ್ ಸಾಕಷ್ಟು ಸದ್ದು ಮಾಡುತ್ತಿದೆ. ಸಚಿವರಿಗೆ ಕಿವಿ ಮಾತು ಹೇಳಿದ್ದ ಡಿ.ಕೆ.ಶಿವಕುಮಾರ್, ಸಚಿವರನ್ನ ಸ್ಟಿಂಗ್ ಆಪರೇಷನ್ ಮಾಡಲು ಯತ್ನ ನಡೆಯುತ್ತಿದೆ, ಎಚ್ಚರಿಕೆಯಿಂದ ಇರುವಂತೆ ಎಂದು ಹೇಳಿದ್ದಾರೆ. ಸಿಎಂ ಡಿಕೆಶಿ ಜನರಲ್​ ಆಗಿ ಹೇಳಿದ್ರೆ, ಸಚಿವರಿಗೆ ಅಷ್ಟು ಶಾಕ್ ಆಗ್ತಿರಲಿಲ್ಲ. ಆದ್ರೆ ಬಹಳ ಗಂಭೀರವಾದಂತಹ ಕ್ಯಾಬಿನೆಟ್ ಸಭೆಯಲ್ಲೇ ಸ್ಟಿಂಗ್​ ಆಪರೇಷನ್ ಬಗ್ಗೆ ಸಿಎಂ ಪ್ರಸ್ತಾಪಿಸಿದ್ದಾರೆ. ಒಂದು ಫೈಲ್​ನನ್ನೇ ಸಚಿವರ ಮುಂದೆ ಇಟ್ಟಿದ್ದಾರೆ. ಇದೀಗ ಸಿಎಂ ಆದ್ಮೇಲೆ ನನ್ನನ್ನೇ ಟ್ರ್ಯಾಪ್​ಗೆ ಯತ್ನ ಆಯ್ತು ಎಂದು ಸಿಎಂ ಡಿಕೆ ಶಿವಕುಮಾರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್ ಅಶೋಕ್, ದಾಖಲೆ ಸಿಕ್ಕಿದ್ದು ಗಮನಕ್ಕೆ ಬಂದರೂ ಮುಚ್ಚಿಡುವುದು ಅಪರಾಧ. ನನಗೆ ಕೂಡಾ ಕೆಲವು ವಿಡಿಯೋಗಳನ್ನು ಕಳುಹಿಸಿದ್ದಾರೆ. ವಿಡಿಯೋಗಳು ಈಗ ಎಲ್ಲರ ಬಳಿ ಓಡಾಡುತ್ತಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಸಂಬಂಧ ಇಂದು (ಅ.08) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್, ಸಂವಿಧಾನದ ಅಡಿಯಲ್ಲಿ ನೀವು (ಡಿಕೆ ಶಿವಕುಮಾರ್) ಪ್ರಮಾಣವಚನ ಸ್ವೀಕರಿಸಿದ್ದೀರಿ. ನಿಮ್ಮ ಗಮನಕ್ಕೆ ಬಂದ ಮೇಲೆ ಯಾಕೆ ಕ್ರಮ ವಹಿಸಿಲ್ಲ? ದಾಖಲೆ ಸಿಕ್ಕಿದ್ದು ಗಮನಕ್ಕೆ ಬಂದರೂ ಮುಚ್ಚಿಡುವುದು ಅಪರಾಧ. ನನಗೆ ಕೂಡಾ ಕೆಲವು ವಿಡಿಯೋಗಳನ್ನು ಕಳುಹಿಸಿದ್ದಾರೆ. ವಿಡಿಯೋಗಳು ಈಗ ಎಲ್ಲರ ಬಳಿ ಓಡಾಡುತ್ತಿದೆ. ಇದರ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಯಾಕೆ ಇನ್ನೂ ಕ್ರಮ ವಹಿಸಿಲ್ಲ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ‘ಟ್ರ್ಯಾಪ್​​ ಮಾಡಲು ಬಂದವರನ್ನು ಯಾಕೆ ಬಿಟ್ರಿ?: ಸಿಎಂ ಡಿಕೆ ಶಿವಕುಮಾರ್​​ಗೆ ಕೇಂದ್ರ ಸಚಿವ ಹೆಚ್​​.ಡಿ.ಕುಮಾರಸ್ವಾಮಿ ಕೌಂಟರ್​

ಇಷ್ಟು ದಿನ ಸಿಎಂ ಡಿಕೆ ಶಿವಕುಮಾರ್ ಭರವಸೆ ಕೊಡುತ್ತಿದ್ದಾರೆ ಅಂತಾ ಇತ್ತು. ಈಗ ನೋಡಿದರೆ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡ್ತಿದ್ದಾರೆ. ಸಂಪುಟಸಭೆಯಲ್ಲಿ ಸಚಿವರನ್ನ ಟ್ರ್ಯಾಪ್ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಿರುವ ಮುಖ್ಯಮಂತ್ರಿಗಳು. ಇಂದು ಅಸಹಾಯಕ ಸ್ಥಿತಿಯಲ್ಲಿ ನನ್ನ ಮೇಲೆ ಟ್ರ್ಯಾಪ್ ಆಗಿದೆ ಅಂತಿದ್ದಾರೆ. ಸರ್ಕಾರ, ಕ್ಯಾಬಿನೆಟ್ ಸಚಿವರು, ಸಿಎಂಗೇ ಭದ್ರತೆ ಇಲ್ಲ ಅಂತಾದರೆ? ಯಾರು ಬೇಕಾದರೂ ಅವರನ್ನ ಹನಿಟ್ರ್ಯಾಪ್ ಮಾಡಬಹುದು ಎಂದಿದ್ದಾರೆ.
R Ashoka on Sting Operation: ಸ್ಟಿಂಗ್ ಆಪರೇಷನ್ ವಿಡಿಯೋ ನನ್ನ ಮೊಬೈಲ್​ಗೆ ಬಂದಿದೆ ಎಂದ ಅಶೋಕ್ | #TV9D
ನನ್ನ ಮೇಲೆ ಟ್ರ್ಯಾಪ್​ಗೆ ಯತ್ನಿಸಿದ ಕುರಿತ ದಾಖಲೆ ಇದೆ ಅಂತಾರೆ. ಹಾಗಾದರೆ ಸಿಎಂ ಡಿ.ಕೆ.ಶಿವಕುಮಾರ್ ಯಾಕೆ​​​ ದೂರು ಕೊಡಲಿಲ್ಲ? ಇದರ ಬಗ್ಗೆ ಯಾಕೆ ಇನ್ನೂ ಎಫ್​ಐಆರ್ ಹಾಕಿಲ್ಲ?​ ನೀವು ಗಾಳಿಯಲ್ಲಿ ಗುಂಡು ಹಾರಿಸುವುದಿದ್ದರೆ ಅದಕ್ಕೆ ಬೇರೆ ಜಾಗವಿದೆ. ಸಿಎಂ ಅಧಿವೇಶನದಲ್ಲಿ ಬೆಂಗಳೂರಿನ ಹೊರಗಿನ ಮಂತ್ರಿಗಳು, ಶಾಸಕರು ಎರಡೆರಡು ಮದುವೆಯಾಗಿದ್ದಾರೆ ಎಂದು ಹೇಳಿದ್ದಾರೆ. ಹಾಗಾದರೆ ಅವರ ಮೇಲೆ ಯಾಕೆ ಎಫ್ಐಆರ್ ಮಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
Loading...
Unable to load recommendations.
Follow Us