ಗ್ರಾಮ ಪಂಚಾಯತಿ ಸದಸ್ಯೆ ಮನೆ ಮೇಲೆ ದಾಳಿ; ಮಣ್ಣು ತೆಗೆಯುವ ವಿಚಾರಕ್ಕೆ ಕಿಡಿಗೇಡಿಗಳಿಂದ ದಾಂದಲೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 24, 2021 | 4:51 PM

ರಾತ್ರಿ 11 ಗಂಟೆ ಸುಮಾರಿಗೆ ಒಂದು ಕಾರು ಮತ್ತು ನಾಲ್ಕು ಬುಲೆಟ್​ ಬೈಕ್​ಗಳಲ್ಲಿ ಬಂದಿದ್ದ ಕಿಡಿಗೇಡಿಗಳು, ಬಾಟಲ್​ಗಳಿಂದ ದಾಳಿ ಮಾಡಿದ್ದಾರೆ. ಕೂನಿಮಡಿವಾಳ ಗ್ರಾಮದ ಶಶಿ ಅಲಿಯಾಸ್ ಗಿಡ್ಡ, ಜಯಂತ್ ಪ್ರವೀಣ್, ಚಂದ್ರು ಸೇರಿ 15 ಜನರ ತಂಡದಿಂದ ಈ ಕೃತ್ಯ ನಡೆದಿದೆ.

ಗ್ರಾಮ ಪಂಚಾಯತಿ ಸದಸ್ಯೆ ಮನೆ ಮೇಲೆ ದಾಳಿ; ಮಣ್ಣು ತೆಗೆಯುವ ವಿಚಾರಕ್ಕೆ ಕಿಡಿಗೇಡಿಗಳಿಂದ ದಾಂದಲೆ
ಗ್ರಾಮ ಪಂಚಾಯತಿ ಸದಸ್ಯೆ ಮಂಜುಳಾ ಮನೆ ಮೇಲೆ ದಾಳಿ
Follow us on

ಅನೇಕಲ್​: ಕೆರೆಯಲ್ಲಿ ಮಣ್ಣು ತೆಗೆಯುವ ವಿಚಾರಕ್ಕೆ ಗ್ರಾಮ ಪಂಚಾಯಿತಿ ಸದಸ್ಯೆ ಮನೆ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬ್ಯಾಗಡದೇನಹಳ್ಳಿ ಸಮೀಪದ ಕೂನಿಮಡಿವಾಳದಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ಕೆರೆಯಲ್ಲಿ ಮಣ್ಣು ತೆಗೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂದು ದಾಂದಲೆ ನಡೆಸಲಾಗಿದೆ. ತಡರಾತ್ರಿ ಹೊತ್ತಿಗೆ ಮನೆ ಮೇಲೆ ಬಿಯರ್ ಬಾಟಲಿ ಹಾಗೂ ಕಲ್ಲು ತೂರಾಟ ನಡೆಸಿದ್ದು, ಸುಮಾರು ಹದಿನೈದರಿಂದ ಇಪ್ಪತ್ತು ಮಂದಿ ಈ ಕೃತ್ಯ ಎಸಗಿದ್ದಾರೆ.

ದಾಂದಲೆ ನಡೆಸಿದ ಗುಂಪಿನ ಬಳಿ ಪ್ರಶ್ನಿಸಲು ಹೋದ ಗ್ರಾಮ ಪಂಚಾಯತಿ ಸದಸ್ಯೆ ಮಂಜುಳಾ ಅವರ ಮಗ ಮನೋಜ್​ಗೆ ಕಿಡಿಗೇಡಿಗಳು ಚಾಕುವಿನಿಂದ ಇರಿದು, ಹಲ್ಲೆ ಮಾಡಿದ್ದಾರೆ. ಚಾಕು ಇರಿತದಿಂದ ಮನೋಜ್​ ಕೈಗೆ ತೀವ್ರ ಗಾಯಗೊಂಡಿದ್ದು, ಸದ್ಯ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ 11 ಗಂಟೆ ಸುಮಾರಿಗೆ ಒಂದು ಕಾರು ಮತ್ತು ನಾಲ್ಕು ಬುಲೆಟ್​ ಬೈಕ್​ಗಳಲ್ಲಿ ಬಂದಿದ್ದ ಕಿಡಿಗೇಡಿಗಳು, ಬಾಟಲ್​ಗಳಿಂದ ದಾಳಿ ಮಾಡಿದ್ದಾರೆ. ಕೂನಿಮಡಿವಾಳ ಗ್ರಾಮದ ಶಶಿ ಅಲಿಯಾಸ್ ಗಿಡ್ಡ, ಜಯಂತ್ ಪ್ರವೀಣ್, ಚಂದ್ರು ಸೇರಿ 15 ಜನರ ತಂಡದಿಂದ ಈ ಕೃತ್ಯ ನಡೆದಿದೆ. ಕೂನಿಮಡಿವಾಳ ಕೆರೆಯಲ್ಲಿ ಕಳೆದ ಕೆಲವು ದಿನಗಳಿಂದ ರಾತ್ರೋರಾತ್ರಿ ಮಣ್ಣು ತೆಗೆಯುತ್ತಿದ್ದ ಶಶಿ, ಖಾಸಗಿ ಬಡಾವಣೆಗಳಿಗೆ ಈ ಮಣ್ಣನ್ನು ಸರಬರಾಜು ಮಾಡುತ್ತಿದ್ದ. ಈಗಾಗಲೇ ಮೂರರಿಂದ ನಾಲ್ಕು ಸಾವಿರ ಲೋಡ್ ಮಣ್ಣು ಬೇರೆಡೆಗೆ ಸಾಗಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿತ್ತು.

ಬಾಟಲಿ ಮತ್ತು ಕಲ್ಲಿನಿಂದ ದಾಳಿ

ಈ ಕಾರಣಕ್ಕೆ ಕೆರೆಯಲ್ಲಿ ಮಣ್ಣು ತೆಗೆಯುವ ವಿಚಾರವನ್ನು ಕಂದಾಯ ಅಧಿಕಾರಿಗಳ ಗಮನಕ್ಕೆ ಗ್ರಾಮಸ್ಥರು ತಂದಿದ್ದಾರೆ. ಹೀಗಾಗಿ ಕಂದಾಯ ಅಧಿಕಾರಿಗಳು ನಿನ್ನೆ ಮಣ್ಣು ತೆಗೆಯದಂತೆ ತಡೆಯೊಡ್ಡಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ದೂರು ನೀಡಿದ್ದರಿಂದ ಮಣ್ಣು ತೆಗೆಯುವುದನ್ನು ಸ್ಥಗಿತಗೊಳಿಸಿದ್ದಾರೆಂದು ಆರೋಪಿಗಳು ದಾಳಿ ನಡೆಸಿದ್ದಾರೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Tamil Nadu Elections 2021: ಚುನಾವಣಾ ಪ್ರಚಾರ ಮುಗಿಸಿ ಬರುತ್ತಿದ್ದ ಕಮಲ್ ಹಾಸನ್​ರ ಕಾರಿನ ಬಾಗಿಲು ತೆರೆಯಲು ವ್ಯಕ್ತಿಯಿಂದ ಯತ್ನ; ಇದು ದಾಳಿ ಪ್ರಯತ್ನ ಎಂದ ಎಂಎನ್ಎಂ

ಇದನ್ನೂ ಓದಿ: ದೇವಸ್ಥಾನದಲ್ಲೇ ಮಹಿಳೆ ಜೊತೆ ಅಸಭ್ಯ ವರ್ತನೆ, ಪ್ರಶ್ನಿಸಿದಕ್ಕೆ ಪತಿ ಕೈ ಬೆರಳು ಮುರಿದು ಹಲ್ಲೆ.. ಕಿಡಿಗೇಡಿಗಳ ಕೃತ್ಯ ಕಂಡೂ ಕಾಣದಂತೆ ನಿಂತ ಭಕ್ತರು