ಶಿವಮೊಗ್ಗ: ಹಾವಿನಿಂದ ಕಚ್ಚಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿ ತನ್ನ ಕಾಲಿಗೆ ಆದ ಗಾಯವನ್ನು ಲೆಕ್ಕಿಸದೇ ಪರೀಕ್ಷೆಗೆ ಹಾಜರಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಸಾಗರ ತಾಲೂಕಿನ ಆನಂದಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಾವಿನಿಂದ ಕಚ್ಚಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿದ್ದಾನೆ.
ವಿದ್ಯಾರ್ಥಿಗೆ ಕೆಲವು ದಿನಗಳ ಹಿಂದೆ ಕೊಳಕುಮಂಡಲ ಹಾವು ಕಚ್ಚಿತ್ತು. ಹಾವು ಕಚ್ಚಿದ ಪರಿಣಾಮ ಕಾಲು ಗಾಯವಾಗಿ ಸಮಸ್ಯೆ ಉಂಟಾಗಿತ್ತು. ಗಾಯದ ಭಾಗ ಕೊಳೆಯುತ್ತಿದ್ದರೂ ಅದನ್ನು ಲೆಕ್ಕಿಸದ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿದ್ದಾನೆ. ಕಾಲಿನ ಗಾಯವನ್ನು ಲೆಕ್ಕಿಸದೇ ವಿದ್ಯಾರ್ಥಿ ಸ್ಕಂದ ಪರೀಕ್ಷೆಗೆ ಹಾಜರಾಗಿದ್ದಾನೆ.
ತಾಲೂಕಿನ ಸೊರಗುಂದಾ ಗ್ರಾಮದ ಸ್ಥಳೀಯರ ಸಹಾಯದಿಂದ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿ ಕಾರ್ನಲ್ಲಿ ಬಂದಿದ್ದಾರೆ. ಪರೀಕ್ಷಾ ಕೇಂದ್ರದ ಅಧಿಕಾರಿಗಳು ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು 33 SSLC ವಿದ್ಯಾರ್ಥಿಗಳಿಗೆ ಕೊರೊನಾ
ಇನ್ನು ರಾಜ್ಯದಲ್ಲಿ ಒಟ್ಟು 33 SSLC ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿತ್ತು.
ಎಸ್ಎಸ್ಎಲ್ಸಿ ಪರೀಕ್ಷೆಗೆ ಎರಡು ದಿನದಲ್ಲಿ SSLCಯ ಒಟ್ಟು 6 ವಿಷಯಗಳನ್ನ ಕವರ್ ಮಾಡಲಾಗ್ತಿದೆ. ಇಂದು ಗಣಿತ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ಪರೀಕ್ಷೆ ನಡೆದ್ರೆ, ಜುಲೈ 22 ರಂದು ಕನ್ನಡ, ಹಿಂದಿ, ಇಂಗ್ಲಿಷ್ ಸೇರಿದಂತೆ ಭಾಷಾ ವಿಷಯಗಳ ಪರೀಕ್ಷೆ ನಡೆದಿದೆ. ಅಂದರೆ ಗಣಿತ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ಸೇರಿ ಒಂದು ಪ್ರಶ್ನೆ ಪತ್ರಿಕೆ ಇರುತ್ತೆ. ಮತ್ತೊಂದು ಪ್ರಶ್ನೆ ಪತ್ರಿಕೆ ಮೂರು ಭಾಷಾ ವಿಷಯಗಳನ್ನ ಸೇರಿಸಿ ಸಿದ್ಧಪಡಿಸಲಾಗಿರುತ್ತದೆ.
ಪ್ರತಿ ಪಶ್ನೆ ಪತ್ರಿಕೆ ಒಟ್ಟು 120 ಅಂಕಗಳನ್ನ ಒಳಗೊಂಡಿದ್ದು, ಮೂರು ಮೂರು ವಿಷಯಗಳಿಗೆ ತಲಾ 40 ಅಂಕಗಳ ಪ್ರಶ್ನೆಗಳಿರುತ್ತೆ. ಅಷ್ಟೇ ಅಲ್ಲ ಒಂದು ಪ್ರಶ್ನೆಗೆ ಬಹು ಆಯ್ಕೆಯ ಉತ್ತರಗಳನ್ನ ನೀಡಲಾಗ್ತಿದ್ದು, ವಿದ್ಯಾರ್ಥಿಗಳು OMR ಶೀಟ್ನಲ್ಲಿ ಉತ್ತರ ಗುರುತು ಮಾಡಿದ್ರೆ ಸಾಕು. ಪ್ರತಿ ವಿಷಯಕ್ಕೆ ಒಎಂಆರ್ ಶೀಟ್ನಲ್ಲಿ ಬಣ್ಣ ಬದಲು ಮಾಡಿದ್ದಾರೆ. ಗಣಿತಕ್ಕೆ ಪಿಂಕ್ ಕಲರ್, ವಿಜ್ಞಾನಕ್ಕೆ ಆರೆಂಜ್ ಕಲರ್, ಸಮಾಜ ವಿಜ್ಞಾನಕ್ಕೆ ಗ್ರೀನ್ ಕಲರ್ OMR ಶೀಟ್ ಇರಲಿದೆ. ಪರೀಕ್ಷೆಗೆ 3 ಗಂಟೆಗಳ ಅವಧಿ ನೀಡಲಾಗಿದ್ದು, ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ. ಇನ್ನು ಒಟ್ಟು 8 ಲಕ್ಷದ 76 ಸಾವಿರ 581 ವಿದ್ಯಾರ್ಥಿಗಳ ಎಕ್ಸಾಂಗೆ ನೊಂದಣಿ ಮಾಡಿಕೊಂಡಿದ್ದಾರೆ.