ಹಿಜಾಬ್ ತೆಗೆಯದೆ ಪರೀಕ್ಷೆ ಬರೆಯಲ್ಲವೆಂದು ಪಟ್ಟು ಹಿಡಿದ ವಿದ್ಯಾರ್ಥಿಗಳು; ತಹಶೀಲ್ದಾರ್​ರಿಂದ ಮನವೊಲಿಕೆಗೆ ಯತ್ನ

ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಇಂದು ಹರಾಜು ಪ್ರಕ್ರಿಯೆ ನಡೆಯದ ಹಿನ್ನೆಲೆ ರೇಷ್ಮೆಗೂಡು ಮಾರಾಟಕ್ಕೆ ತಂದಿದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚನ್ನಪಟ್ಟಣದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಘಟನೆ ನಡೆದಿದೆ.

ಹಿಜಾಬ್ ತೆಗೆಯದೆ ಪರೀಕ್ಷೆ ಬರೆಯಲ್ಲವೆಂದು ಪಟ್ಟು ಹಿಡಿದ ವಿದ್ಯಾರ್ಥಿಗಳು; ತಹಶೀಲ್ದಾರ್​ರಿಂದ ಮನವೊಲಿಕೆಗೆ ಯತ್ನ
ಸಾಂದರ್ಭಿಕ ಚಿತ್ರ
Edited By:

Updated on: Mar 17, 2022 | 3:53 PM

ಬೆಂಗಳೂರು ಗ್ರಾಮಾಂತರ: ಹಿಜಾಬ್ (Hijab) ಧರಿಸಿ ಕಾಲೇಜಿಗೆ ವಿದ್ಯಾರ್ಥಿನಿಯರು ಬಂದಿದ್ದು, ಹಿಜಾಬ್ ತೆಗೆಯದೆ ಪರೀಕ್ಷೆ ಬರೆಯಲು ಮುಂದಾದವರಿಗೆ ಕಾಲೇಜಿನಲ್ಲಿ ತಡೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಘಟನೆ ನಡೆದಿದೆ. ಹಿಜಾಬ್ ಧರಿಸಿ‌ ಪರೀಕ್ಷೆಯಲು ಮುಂದಾದವರನ್ನ ತಡೆದ ಹಿನ್ನಲೆ, ಪರೀಕ್ಷೆ ಬರೆಯಲು ಹೋಗದೆ ಸ್ಟೂಡೆಂಟ್ಸ್ ಹೊರಗಡೆ‌ ಕುಳಿತುಕೊಂಡಿದ್ದಾರೆ. ಹಿಜಾಬ್ ತೆಗೆಯುವಂತೆ ತಹಶೀಲ್ದಾರ್ ಶಿವರಾಜ್​ರಿಂದ ಹಿಜಾಬ್ ಧರಿಸಿದ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದ್ದು, ಹಿಜಾಬ್ ಧರಿಸಿಯೇ‌ ನಾವು ಕಾಲೇಜು ಒಳಗಡೆ ಹೋಗ್ತಿವಿ ಅಂತಾ ಪಟ್ಟು ಹಿಡಿದಿದ್ದಾರೆ. ಕಾಲೇಜು‌ ಒಳಗಡೆ ಹೋಗದೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಂದ ಹೈಡ್ರಾಮವೇ ನಡೆಯಿತು. ಪೊಲೀಸರು ಅಧಿಕಾರಿಗಳಿಂದ ವಿದ್ಯಾರ್ಥಿಗಳ‌ ಮನವೊಲಿಸಿ ಹಿಜಾಬ್ ತೆಗೆಸಿ ಪರಿಕ್ಷೆ ಬರೆಯಲು ಅವಕಾಶ ಮಾಡಲಾಗಿದೆ.

ಹರಾಜು ಪ್ರಕ್ರಿಯೆ ನಡೆಯದ ಹಿನ್ನೆಲೆ ರೈತರ ಪ್ರತಿಭಟನೆ:

ರಾಮನಗರ: ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಇಂದು ಹರಾಜು ಪ್ರಕ್ರಿಯೆ ನಡೆಯದ ಹಿನ್ನೆಲೆ ರೇಷ್ಮೆಗೂಡು ಮಾರಾಟಕ್ಕೆ ತಂದಿದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚನ್ನಪಟ್ಟಣದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಘಟನೆ ನಡೆದಿದೆ. ಪ್ರತಿನಿತ್ಯ ಹರಾಜು ಪ್ರತಿಕ್ರಿಯೆ ನಡೆಯುತ್ತದೆ. ಬಹುತೇಕ ಮುಸ್ಲಿಂ ರಿಲಾರ್ಸ್ ಗಳು ಗೂಡು ಖರೀದಿಸುತ್ತಾರೆ. ಆದರೆ ಇಂದು ಬಂದ್ ಹಿನ್ನೆಲೆ ರಿಲಾರ್ಸ್ ಗಳು ಗೂಡ ಖರೀದಿಸಿಲ್ಲ. ರೇಷ್ಮೆಗೂಡು ಮಾರಾಟಕ್ಕೆ ತಂದ ರೈತರಿಂದ ಆಕ್ರೋಶಗೊಂಡಿದ್ದರು. ಈ ನಡುವೆ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ಉಂಟಾಗಿ, ರೈತರಿಂದ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು. ಬೆಂಗಳೂರು ಮೈಸೂರು ಹೆದ್ದಾರಿ ತಡೆದಿದ್ದು, ಹೆದ್ದಾರಿಯಲ್ಲಿ ಬುಟ್ಟಿಗಳನ್ನ ಇಟ್ಟು ಪ್ರತಿಭಟನೆ ಮಾಡಿದರು. ಚನ್ನಪಟ್ಟಣದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ಮುಂಭಾಗ ಪ್ರತಿಭಟನೆ ಮಾಡಲಾಯಿತು.

ಇದನ್ನೂ ಓದಿ:

ICC Women’s World Cup: ಆಫ್ರಿಕಾಗೆ ಸತತ ನಾಲ್ಕನೇ ಜಯ; ತವರಿನಲ್ಲಿ ಕಿವೀಸ್​ಗೆ ಸೋಲಿನ ಮುಖಭಂಗ

ಎಸಿಬಿ ದಾಳಿಗೊಳಗಾಗಿದ್ದ ಬಿಡಿಎ ಅಧಿಕಾರಿಗಳನ್ನು ಆರೋಪ ಮುಕ್ತ ಮಾಡುವುದಾಗಿ 10 ಲಕ್ಷ ರೂ ವಂಚನೆ, ಮೂವರು ಅರೆಸ್ಟ್