ಮಂಡ್ಯದ ಗಂಡು! ಹಾವೇರಿ ಯುವತಿಗೆ ಮಂಡ್ಯದ ಸೊಸೆಯಾಗುವ ಆಸೆ: ಅಭಿಮಾನಿ ಮದುವೆಗೆ ಬಂದು ಆಶೀರ್ವಾದ ಮಾಡಿದ ಸಂಸದೆ ಸುಮಲತಾ

ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಫೇಸ್​ಬುಕ್ ಪೇಜ್​ನಲ್ಲಿ ಆಕ್ಟೀವ್ ಆಗಿದ್ದ ಅಂಬಿ ಅಭಿಮಾನಿ ಶ್ರೀನಿವಾಸ್ ಜೊತೆ ತಾನು ಮಂಡ್ಯ ಸೊಸೆಯಾಗಿ ಬರಬೇಕೆಂಬ ತನ್ನ ಕನಸು ಹಂಚಿಕೊಂಡಿದ್ದು, ಅದರಂತೆ ಮಂಡ್ಯದ ಸೊಸೆಯಾಗಿದ್ದಾರೆ.

ಮಂಡ್ಯದ ಗಂಡು! ಹಾವೇರಿ ಯುವತಿಗೆ ಮಂಡ್ಯದ ಸೊಸೆಯಾಗುವ ಆಸೆ: ಅಭಿಮಾನಿ ಮದುವೆಗೆ ಬಂದು ಆಶೀರ್ವಾದ ಮಾಡಿದ ಸಂಸದೆ ಸುಮಲತಾ
ಸುಮಲತಾ ಅಭಿಮಾನಿ ಸವಿತಾ ಮತ್ತು ಅಂಬರೀಶ್ ಅಭಿಮಾನಿ ಶ್ರೀನಿವಾಸ್
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Mar 06, 2021 | 11:31 AM

ಮಂಡ್ಯ: ಬಾಲ್ಯದಿಂದಲೂ ನಟಿ ಸುಮಲತಾ ಅಂಬರೀಶ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಉತ್ತರ ಕರ್ನಾಟಕದ ಯುವತಿಗೆ ಸುಮಲತಾರಂತೆ ತಾನು ಸಹ ಮಂಡ್ಯ ಸೊಸೆಯಾಗಬೇಕು, ಅದ್ರಲ್ಲೂ ಅಂಬರೀಶ್ ಅವರ ಅಭಿಮಾನಿಯನ್ನೇ ಮದುವೆಯಾಗಬೇಕೆಂಬ ಮಹದಾಸೆ ಹೊಂದಿದ್ದಳು. ಸದ್ಯ ಆಕೆಯ ಮಹದಾಸೆಯಂತೆಯೇ ಮಂಡ್ಯದ ಗಂಡನ್ನೇ ವರಿಸಿದ್ದಾಳೆ. ಇನ್ನೂ ವಿಶೇಷ ಎಂದರೆ ದಾಂಪತ್ಯಕ್ಕೆ ಕಾಲಿಟ್ಟ ಆ ನವ ಜೋಡಿಗೆ ರೆಬಲ್ ಲೇಡಿ ಸುಮಲತಾ ಆಶೀರ್ವಾದ ಮಾಡಿದ್ದಾರೆ.

ಹಾವೇರಿ ಜಿಲ್ಲೆ, ರಾಣಿ ಬೆನ್ನೂರು ತಾಲೂಕಿನ ಅಂತರವಳ್ಳಿ ಗ್ರಾಮದ ಲಲಿತಮ್ಮ ಹಾಗೂ ಲೇ. ತಿಪ್ಪಣ್ಣ ಎಂಬ ದಂಪತಿಯ ಹಿರಿಯ ಪುತ್ರಿಯಾದ 21 ವರ್ಷದ ಸವಿತಾ ಪಿಯುಸಿ ವರೆಗೆ ಓದಿದ್ದು, ಈಕೆಗೆ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಎಂದರೆ ಸಿಕ್ಕಾಪಟ್ಟೆ ಇಷ್ಟ. ಸುಮಲತಾ ನಟನೆಯ ಎಲ್ಲಾ ಸಿನಿಮಾಗಳನ್ನ ನೋಡಿರುವ ಸವಿತಾ ಸುಮಲತಾ ಅವರನ್ನ ಅಮ್ಮ ಎಂದೇ ಕರೆಯುತ್ತಾರೆ.

ಚಿಕ್ಕ ವಯಸ್ಸಿನಿಂದಲೂ ಸುಮಲತಾ ಅಂಬರೀಶ್ ಬಗೆಗೆ ವಿಶೇಷ ಅಭಿಮಾನ ಹೊಂದಿದ್ದ ಸವಿತಾ ಅವರಂತೆ ತಾನೂ ಕೂಡ ಮಂಡ್ಯದ ಸೊಸೆಯಾಗಬೇಕು ಎಂಬ ಕನಸು ಕಂಡಿದ್ದರು. ಸವಿತಾಳ ತಂದೆ ತಿಪ್ಪಣ್ಣ 10 ವರ್ಷಗಳ ಹಿಂದೆಯೇ ತೀರಿಕೊಂಡಿದ್ದು, ತಾಯಿ ಲಲಿತಮ್ಮ ಕ್ಯಾಂಟೀನ್ ಇಟ್ಟುಕೊಂಡು ಇಬ್ಬರು ಹೆಣ್ಣು ಮಕ್ಕಳನ್ನು ಸಾಕಿದ್ದಾರೆ. ಸವಿತಾ ಪಿಯುಸಿವರೆಗೂ ಓದಿ ಬಳಿಕ ಕ್ಯಾಂಟೀನ್​ನಲ್ಲಿ ತಾಯಿಗೆ ಸಹಾಯ ಮಾಡಿಕೊಂಡಿದ್ದರು. ಹೀಗಿರುವಾಗಲೇ ಅವರು ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಫೇಸ್​ಬುಕ್ ಪೇಜ್​ನಲ್ಲಿ ಆಕ್ಟೀವ್ ಆಗಿದ್ದರು.

fan marriage

ತನ್ನ ಕನಸಿನಂತೆ ಮಂಡ್ಯದ ವರನನ್ನು ಮದುವೆಯಾದ ಸವಿತಾ

ಆ ವೇಳೆಗೆ ಅದೇ ಫೇಸ್​ಬುಕ್​ನಲ್ಲಿ ಫ್ರೆಂಡ್ ಆಗಿದ್ದ ಅಂಬಿ ಅಭಿಮಾನಿ ಶ್ರೀನಿವಾಸ್ ಜೊತೆ ತನ್ನ ಕನಸು ಹಂಚಿಕೊಂಡಿದ್ದು ತಾನು ಮಂಡ್ಯ ಸೊಸೆಯಾಗಿ ಬರಬೇಕೆಂಬ ಬಗೆಗೆ ಹೇಳಿಕೊಂಡಿದ್ದರು. ಇಬ್ಬರು ಒಂದೇ ಜಾತಿಯಾಗಿದ್ದರಿಂದ ಎರಡು ಕುಟುಂಬಗಳೂ ಒಪ್ಪಿ ಇಬ್ಬರಿಗೂ ಮದುವೆ ಮಾಡಲು ನಿರ್ಧರಿಸಿತ್ತು. ಅದರಂತೆ ಮಂಡ್ಯ ಮದ್ದೂರು ತಾಲೂಕಿನ ಹೊಸಕೆರೆ ಗ್ರಾಮದ ಹೊರವಲಯದಲ್ಲಿನ ಬೀರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸರಳ ವಿವಾಹವಾಗುವ ಮೂಲಕ ದಾಂಪತ್ಯಕ್ಕೆ ಕಾಲಿಟ್ಟರು.

fan marriage

ಅಭಿಮಾನಿ ಸವಿತಾ ಮದುವೆಗೆ ಆಗಮಿಸಿ ಆಶೀರ್ವಾದ ಮಾಡಿದ ಸಂಸದೆ ಸಯಮಲತಾ

ಮದುವೆಗೆ ಸಂಸದೆ ಸುಮಲತಾ ಅಂಬರೀಶ್ ಭಾಗವಹಿಸಬೇಕಿತ್ತಾದರೂ ಅವರ ಕೆಲಸದ ಒತ್ತಡ ನಡುವೆ ತಡವಾಗಿ ಭೇಟಿ ನೀಡಿ ನವ ಜೋಡಿಗೆ ಶುಭ ಹಾರೈಸಿದರು. ಈ ವೇಳೆ ಸುಮಲತಾ ಮಂಡ್ಯ ಸೊಸೆಯಾಗಿರುವ ಸವಿತಾಗೆ ಮಂಡ್ಯದ ಸೇವೆ ಮಾಡುವ ಅವಕಾಶ ಬರಲಿ ಎಂದು ಆಶೀರ್ವದಿಸಿದರು.

fan marriage

ಸವಿತಾ ಮತ್ತು ಶ್ರೀನಿವಾಸ್

ಒಟ್ಟಾರೆ ಸವಿತಾ ತನ್ನ ಕನಸ್ಸಿನಂತೆಯೇ ಮಂಡ್ಯ ಸೊಸೆಯಾಗಿದ್ದು, ಸಿನಿ ರಂಗದ ಯಶಸ್ವಿ ಜೋಡಿಯಾಗಿ ಉತ್ತುಂಗಕ್ಕೆ ಬೆಳೆದ ಅಂಬರೀಶ್ ಹಾಗೂ ಸುಮಲತಾ ಅವರಂತೆ ಈ ನವ ಜೋಡಿಯ ಬಾಳು ಬೆಳಗಲಿ ಎಂಬುದೇ ನಮ್ಮ ಆಶಯ.

ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಸಂಸದರ ವ್ಯಾಪ್ತಿ ಮೀರಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ- ಸಂಸದೆ ಸುಮಲತಾ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?