AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಗ್ಗತ್ತಲ ರಾತ್ರಿಯಲ್ಲಿ ‘ಬ್ರಹ್ಮರಾಕ್ಷಸನ’ ಓಡಿಸಲು ಕೋಳಿ ರಕ್ತ ಹೀರುವಂತೆ ವ್ಯಕ್ತಿಗೆ ಮಂತ್ರವಾದಿ ಹಿಂಸೆ

ಮಂಗಳೂರು: ದೇವರು, ದೆವ್ವದ ಹೆಸರಲ್ಲಿ ಜನ ಹಣ ಮಾಡೋ ಕಾರ್ಯಕ್ಕೆ ಇಳಿದಿರೋದು ಹೊಸದೇನಲ್ಲ. ಎಷ್ಟೋ ಡೋಂಗಿ ಬಾಬಾಗಳು, ಪೂಜಾರಿಗಳು ದೇವರ ಹೆಸರನ್ನು ಬಳಸಿ ಜನರಿಗೆ ಮೋಸ ಮಾಡಿದ್ದಾರೆ. ದೇವರ ಮೇಲಿಸುವ ಭಕ್ತಿಗೆ ಕಂಟಕವಾಗ್ತಿದ್ದಾರೆ. ಆದರೆ ಕರಾವಳಿಯನ್ನೇ ಬೆಚ್ಚಿ ಬೀಳಿಸಿದ ನಿಗೂಢ ಘಟನೆಯೊಂದು ಸಂಭವಿಸಿದೆ. ವೈಜ್ಞಾನಿಕ ಯುಗದಲ್ಲೂ ಅಲ್ಲಿ ಇಂದಿಗೂ ಭಯಾನಕ ಸಂಪ್ರದಾಯ ಮುಂದುವರೆದಿದೆ. ಕರಾವಳಿ ರಕ್ತಾಸುರ: ಕರಾವಳಿಯಲ್ಲಿ ಪೂಜೆ ನೆಪದಲ್ಲಿ ಮಾಟ ಮಂತ್ರ ಮಾಡೋ ಮಂತ್ರವಾದಿಯಿಂದ ಹಿಂಸಾತ್ಮಕ ಕೃತ್ಯ ನಡೆದಿರೋ ವಿಡಿಯೋ ರಿಲೀಸ್ ಆಗಿದೆ. ಆ ದೃಶ್ಯ […]

ಕಗ್ಗತ್ತಲ ರಾತ್ರಿಯಲ್ಲಿ ‘ಬ್ರಹ್ಮರಾಕ್ಷಸನ’ ಓಡಿಸಲು ಕೋಳಿ ರಕ್ತ ಹೀರುವಂತೆ ವ್ಯಕ್ತಿಗೆ ಮಂತ್ರವಾದಿ ಹಿಂಸೆ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on: Oct 23, 2020 | 10:47 AM

Share

ಮಂಗಳೂರು: ದೇವರು, ದೆವ್ವದ ಹೆಸರಲ್ಲಿ ಜನ ಹಣ ಮಾಡೋ ಕಾರ್ಯಕ್ಕೆ ಇಳಿದಿರೋದು ಹೊಸದೇನಲ್ಲ. ಎಷ್ಟೋ ಡೋಂಗಿ ಬಾಬಾಗಳು, ಪೂಜಾರಿಗಳು ದೇವರ ಹೆಸರನ್ನು ಬಳಸಿ ಜನರಿಗೆ ಮೋಸ ಮಾಡಿದ್ದಾರೆ. ದೇವರ ಮೇಲಿಸುವ ಭಕ್ತಿಗೆ ಕಂಟಕವಾಗ್ತಿದ್ದಾರೆ. ಆದರೆ ಕರಾವಳಿಯನ್ನೇ ಬೆಚ್ಚಿ ಬೀಳಿಸಿದ ನಿಗೂಢ ಘಟನೆಯೊಂದು ಸಂಭವಿಸಿದೆ. ವೈಜ್ಞಾನಿಕ ಯುಗದಲ್ಲೂ ಅಲ್ಲಿ ಇಂದಿಗೂ ಭಯಾನಕ ಸಂಪ್ರದಾಯ ಮುಂದುವರೆದಿದೆ.

ಕರಾವಳಿ ರಕ್ತಾಸುರ: ಕರಾವಳಿಯಲ್ಲಿ ಪೂಜೆ ನೆಪದಲ್ಲಿ ಮಾಟ ಮಂತ್ರ ಮಾಡೋ ಮಂತ್ರವಾದಿಯಿಂದ ಹಿಂಸಾತ್ಮಕ ಕೃತ್ಯ ನಡೆದಿರೋ ವಿಡಿಯೋ ರಿಲೀಸ್ ಆಗಿದೆ. ಆ ದೃಶ್ಯ ನೋಡಿದ್ರೆ ಎಂಥಾ ಕೆಚ್ಚೆದೆಯ ಗುಂಡಿಗೆಯೂ ಝಲ್ ಎನ್ನುತ್ತೆ. ಅಂತಹ ಭಯಾನಕ ವಿಡಿಯೋ ಅದು. ನಟ್ಟ ನಡುರಾತ್ರಿಯಲ್ಲಿ ‘ಬ್ರಹ್ಮರಾಕ್ಷಸ’ನನ್ನ ಓಡಿಸುವುದಾಗಿ ಮಂತ್ರವಾದಿ ವ್ಯಕ್ತಿಯೊಬ್ಬರನ್ನು ಅಮಾನವೀಯವಾಗಿ ಹಿಂಸಿಸಿದ್ದಾನೆ. ಕೋಳಿಯ ರಕ್ತವನ್ನ ಹೀರಿ ಕುಡಿಯುವಂತೆ ವ್ಯಕ್ತಿಗೆ ಹಿಂಸಿಸಿದ್ದಾನೆ. ಈ ಹಿಂಸಾಚಾರದ ದೃಶ್ಯ ನೋಡಿ ಕರಾವಳಿ ಭಾಗದಲ್ಲಿ ನಡುಕ ಹುಟ್ಟಿದೆ.

ವ್ಯಕ್ತಿಯ  ಮೈಯಲ್ಲಿ ಬ್ರಹ್ಮರಾಕ್ಷಸ ಸೇರಿಕೊಂಡಿದ್ದಾನೆಂದು ಮಂತ್ರವಾದಿಯೊಬ್ಬ ಪೂಜೆ ನೆಪದಲ್ಲಿ ಹಿಂಸಾತ್ಮಕ ಕೃತ್ಯ ಎಸಗಿದ್ದಾನೆ. ‘ಬ್ರಹ್ಮರಾಕ್ಷಸ’ ಮೆಟ್ಟಿಕೊಂಡಿದ್ದಾನೆಂದು ಪೂಜೆ ವೇಳೆ ಜೀವಂತ ಕೋಳಿ ನುಂಗುವಂತೆ ವ್ಯಕ್ತಿಗೆ ಮಂತ್ರವಾದಿ ಹೇಳಿದ್ದಾನೆ. ಜೀವಂತ ಕೋಳಿ ತಿನ್ನದಿದ್ದಾಗ ಚಾಟಿಯಿಂದ ಹೊಡೆದು, ಕರ್ಪೂರವನ್ನುವ್ಯಕ್ತಿಯ ಕೈಯಲ್ಲಿ ಹಚ್ಚಿ ವ್ಯಕ್ತಿಗೆ ಹಿಂಸೆ ಮೇಲೆ ಹಿಂಸೆ ನೀಡಿದ್ದಾನೆ.

ನಂತರ ಆ ವ್ಯಕ್ತಿ ಕೋಳಿಯನ್ನು ಕಚ್ಚಿ ರುಂಡ ಬೇರ್ಪಡಿಸಿದ್ದಾನೆ. ಪೂಜೆ ವೇಳೆ ನೆರೆದಿದ್ದವರು ವ್ಯಕ್ತಿಯನ್ನ ಥಳಿಸಿದ್ದಾರೆ. ಕೋಳಿ ರಕ್ತ ಕುಡಿಯುವಂತೆ ಕಿರುಕುಳ ನೀಡಿದ್ದಾರೆ. ಈ ವೇಳೆ ಜನ ವ್ಯಕ್ತಿಯ ಕೈಗಳನ್ನು ಹಿಡಿದುಕೊಂಡಿದ್ದು ಮಂತ್ರವಾದಿ ಬಲವಂತವಾಗಿ ವ್ಯಕ್ತಿಗೆ ಕೋಳಿಯ ರಕ್ತವನ್ನು ಕುಡಿಸಿದ್ದಾನೆ. ಬಳಿಕ ಎಲ್ಲಾ ದೇವರ ಮೇಲೆ ಆಣೆ ಮಾಡಿಸಿ ‘ಬ್ರಹ್ಮರಾಕ್ಷಸ’ನನ್ನು ಓಡಿಸಿದ್ದಾನೆ. ಆ ರಾಕ್ಷಸ ಹೊರಡುವಾಗ ಮಹಿಳೆಯೊಬ್ಬರು ವಿಚಿತ್ರವಾಗಿ ವರ್ತಿಸಿದ್ದಾರೆ.

ಅಷ್ಟಕ್ಕೂ ಕರಾವಳಿಯಲ್ಲಿ ಬ್ರಹ್ಮರಾಕ್ಷಸ ಅಂದ್ರೆ ಯಾರು? ಹಿಂದೂ ಪುರಾಣದ ಪ್ರಕಾರ ಬ್ರಹ್ಮರಾಕ್ಷಸ ಒಬ್ಬ ಬ್ರಾಹ್ಮಣನ ಆತ್ಮ. ಹಿಂದಿನ ಜನ್ಮದ ಒಬ್ಬ ಮೃತ ವಿದ್ವಾಂಸನ ಆತ್ಮವೇ ಬ್ರಹ್ಮರಾಕ್ಷಸ ಎನ್ನಲಾಗುತ್ತೆ. ಜೀವನದಲ್ಲಿ ಕೆಟ್ಟ ಕರ್ಮಗಳನ್ನು ಮಾಡಿರುವುದರಿಂದ ಮರಣದ ನಂತರ ‘ಬ್ರಹ್ಮರಾಕ್ಷಸ’ನಾಗಿ ನರಳ ಬೇಕು. ಕರ್ಮದ ಫಲ ಬ್ರಹ್ಮರಾಕ್ಷಸನಾಗುತ್ತಾನೆಂದು ಪುರಾಣದಲ್ಲಿ ಉಲ್ಲೇಖವಿದೆ.

ವಿದ್ಯಾರ್ಥಿಗಳಿಗೆ ಜ್ಞಾನ ಹಂಚುವುದು ವಿದ್ವಾಂಸನ ಕರ್ತವ್ಯ. ಆದರೆ ವಿದ್ವಾಂಸ ಜ್ಞಾನವನ್ನ ದಾನ ಮಾಡದಿದ್ದರೆ ಮರಣದ ನಂತರ ಘೋರ ಶಿಕ್ಷೆ ನೀಡಲಾಗುತ್ತೆ. ಮರಣದ ಬಳಿಕ ವಿದ್ವಾಂಸನ ಆತ್ಮವೇ ‘ಬ್ರಹ್ಮರಾಕ್ಷಸ’ನಾಗಿ ಬದಲಾಗುತ್ತದೆ. ಬ್ರಹ್ಮ ಶಬ್ದದ ಅರ್ಥ ಬ್ರಾಹ್ಮಣ ಮತ್ತು ರಾಕ್ಷಸನೆಂದರೆ ಪಿಶಾಚಿ. ಪುರಾಣದ ಪ್ರಕಾರ ಅನೇಕ ಶಕ್ತಿಗಳನ್ನ ಹೊಂದಿರುವ ಪ್ರಬಲ ರಾಕ್ಷಸ ಜಗತ್ತಿನಲ್ಲಿ ಕೆಲವರು ಮಾತ್ರ ಇವರೊಂದಿಗೆ ಸೆಣಸಾಡಿ ಜಯಿಸಬಹುದಂತೆ. ಈ ಜೀವರೂಪದಿಂದ ಅವರಿಗೆ ಮೋಕ್ಷವನ್ನು ನೀಡಬಹುದಂತೆ.

ಮಾಂಗಲ್ಯ ಭಾಗ್ಯದ ಅರ್ಥವೇನು, ಸ್ತ್ರೀಯರಿಗೆ ಇದು ಶ್ರೀರಕ್ಷೆ ಹೇಗೆ?
ಮಾಂಗಲ್ಯ ಭಾಗ್ಯದ ಅರ್ಥವೇನು, ಸ್ತ್ರೀಯರಿಗೆ ಇದು ಶ್ರೀರಕ್ಷೆ ಹೇಗೆ?
ಈ ರಾಶಿಯವರು ಇಂದು ಸ್ವಂತ ಉದ್ಯೋಗದಲ್ಲಿ ಅಧಿಕ ಲಾಭ ಪಡೆಯುವರು
ಈ ರಾಶಿಯವರು ಇಂದು ಸ್ವಂತ ಉದ್ಯೋಗದಲ್ಲಿ ಅಧಿಕ ಲಾಭ ಪಡೆಯುವರು
ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ: ನಟಿ ರಮ್ಯಾ
ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ: ನಟಿ ರಮ್ಯಾ
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ