ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ: ಖುಷಿ ಹಂಚಿಕೊಂಡ ಜನಾರ್ದನ ರೆಡ್ಡಿ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 30, 2024 | 3:09 PM

ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಟಿವಿ9 ಜೊತೆ ಮಾತನಾಡಿದ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಭಗವಂತನ ಆಶೀರ್ವಾದದಿಂದ ಕಷ್ಟದ ದಿನಗಳು ಮುಗಿಯಲು ಬರುತ್ತಿವೆ. ಬಳ್ಳಾರಿಗೆ ಅನುಮತಿ ಸಿಕ್ಕಿರುವುದು ಭಗವಂತನ ಕೃಪೆ. ನನ್ನೂರಿನಲ್ಲಿ ನೆಮ್ಮದಿಯಿಂದ ಬದುಕುತ್ತೇನೆ ಎನ್ನುವುದೆ ಖುಷಿ ಎಂದು ಹೇಳಿದ್ದಾರೆ.

ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ: ಖುಷಿ ಹಂಚಿಕೊಂಡ ಜನಾರ್ದನ ರೆಡ್ಡಿ
ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ: ಖುಷಿ ಹಂಚಿಕೊಂಡ ಜನಾರ್ದನ ರೆಡ್ಡಿ
Follow us on

ಬೆಂಗಳೂರು, ಸೆಪ್ಟೆಂಬರ್​ 30: ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ (Janardhana Reddy) ಬಳ್ಳಾರಿ ಪ್ರವೇಶಕ್ಕಿದ್ದ ನಿರ್ಬಂಧವನ್ನು ಇಂದು ಸುಪ್ರೀಂ ಕೋರ್ಟ್ ತೆರವುಗೊಳಿಸಿ ಆದೇಶ ಹೊರಡಿಸಿದೆ. ಇತ್ತ ಅನುಮತಿ ದೊರೆಯುತ್ತಿದ್ದಂತೆ ಬಳ್ಳಾರಿಯಲ್ಲಿ ರೆಡ್ಡಿ ಬೆಂಬಲಿಗರು ಫುಲ್​ ಖುಷ್​ ಆಗಿದ್ದಾರೆ. ಇನ್ನು ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಟಿವಿ9 ಜೊತೆ ಜನಾರ್ದನ ರೆಡ್ಡಿ ಮಾತನಾಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿಗೆ ಅನುಮತಿ ಸಿಕ್ಕಿರುವುದು ಭಗವಂತನ ಕೃಪೆ: ರೆಡ್ಡಿ 

ನಗರದಲ್ಲಿ ಮಾತನಾಡಿದ ಅವರು, ಭಗವಂತನ ಆಶೀರ್ವಾದದಿಂದ ಕಷ್ಟದ ದಿನಗಳು ಮುಗಿಯಲು ಬರುತ್ತಿವೆ. ನಾವು ಏನೇ ಮಾಡಿದರೂ ಕೂಡ ವಿಧಿ ಮತ್ತು ದೇವರ ಆಟದಲ್ಲಿ ಮನುಷ್ಯರಾಗಿ ಬದುಕಬೇಕಾಗುತ್ತದೆ. ನನ್ನ ವಿಧಿಯಲ್ಲಿ ಹುಟ್ಟೂರಿನಿಂದ 14 ವರ್ಷ ದೂರ ಇರಬೇಕು ಅಂತಾ ಭಗವಂತ ಬರೆದಿದ್ದ. ಶ್ರೀರಾಮಚಂದ್ರನಿಗೇ ಕಷ್ಟ ತಪ್ಪಿಲ್ಲ, ಇನ್ನು ಸಾಮಾನ್ಯ ಜನ ನಾವು ಯಾವ ಲೆಕ್ಕ. ಬಳ್ಳಾರಿಗೆ ಅನುಮತಿ ಸಿಕ್ಕಿರುವುದು ಭಗವಂತನ ಕೃಪೆ. ನನ್ನೂರಿನಲ್ಲಿ ನೆಮ್ಮದಿಯಿಂದ ಬದುಕುತ್ತೇನೆ ಎನ್ನುವುದೆ ಖುಷಿ ಎಂದಿದ್ದಾರೆ.

ಇದನ್ನೂ ಓದಿ: ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್: ಪೂರ್ವಾನುಮತಿ ಇಲ್ಲದೆ ಬಳ್ಳಾರಿ ಪ್ರವೇಶಕ್ಕೆ ಅನುಮತಿ

ಸಿಎಂ ಸಿದ್ದರಾಮಯ್ಯಗೆ ಈಗ ಲೋಕಾಯುಕ್ತ ಎಫ್​ಐಆರ್ ಮತ್ತು ನಾಗೇಂದ್ರ ಜೈಲು ವಿಚಾರವಾಗಿ ಮಾತನಾಡಿದ ಅವರು, ನಮ್ಮ ಸ್ವಾರ್ಥಕ್ಕೆ ತೊಂದರೆ ಕೊಟ್ಟು ಹಿಂಸೆ ಕೊಡುತ್ತೇವೋ ಆ ಕರ್ಮವನ್ನು ವಾಪಸ್ ಅನುಭವಿಸಲೇಬೇಕು. 14 ವರ್ಷಗಳ ಹಿಂದೆ ನನಗೆ ಏನೇನು ಅಪಪ್ರಚಾರ ಮಾಡಿದರು ಅಂತಾ ಕಣ್ಣ ಮುಂದೆಯೇ ಇದೆ. ಸುಳ್ಳು ಆರೋಪ ಒಂದನ್ನೂ ಅವರು ಸಾಬೀತು ಮಾಡಲು ಆಗಲಿಲ್ಲ. ನಾನು ಹೇಳುವುದು ಇಷ್ಟೇ, ಕರ್ಮದ ಫಲದಿಂದ ಯಾರೂ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಸಿದ್ದರಾಮಯ್ಯ ಮತ್ತು ನಾಗೇಂದ್ರ ವಿಚಾರಗಳು ಎಲ್ಲವೂ ಇಂದಿನ ಬೆಳವಣಿಗೆಗಳಿಗೆ ಸಾಕ್ಷಿ ಎಂದು ಹೇಳಿದ್ದಾರೆ.

ಮತ್ತೆ ಬಳ್ಳಾರಿಗೆ ರಾಜಕೀಯವಾಗಿ ಶಿಫ್ಟ್ ಆಗುವ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಇಡೀ ರಾಜ್ಯದಲ್ಲಿ ಓಡಾಟ ಮಾಡಿದ್ದೆ. ಬಳ್ಳಾರಿಯಲ್ಲಿ ಇದ್ದುಕೊಂಡು ಇಡೀ ರಾಜ್ಯದಲ್ಲಿ ಪಕ್ಷ ಬಲವರ್ಧನೆಗೆ, ಪಕ್ಷ ಏನು ಜವಾಬ್ದಾರಿ ಕೊಡುತ್ತದೋ ಅದನ್ನು ನಿರ್ವಹಿಸುತ್ತೇನೆ. ಸಂಡೂರು ಉಪ ಚುನಾವಣೆಯಲ್ಲಿ ಸಾಮಾನ್ಯ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಉರುಳಿಸಲು ಸಾವಿರ ಕೋಟಿ ರೆಡಿ: ಯತ್ನಾಳ್ ಹೇಳಿಕೆ ಬಗ್ಗೆ ಐಟಿ ತನಿಯಾಗಲಿ ಎಂದ ಡಿಕೆ ಶಿವಕುಮಾರ್

ಮತ್ತೆ ಬಳ್ಳಾರಿಯಲ್ಲಿ ಬಿಜೆಪಿ ಕಟ್ಟುವ ವಿಚಾರವಾಗಿ ಮಾತನಾಡಿದ್ದು, ರಾಜಕೀಯದಲ್ಲಿ ಏರುಪೇರು ಸಾಮಾನ್ಯ. ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ 10 ವಿಧಾನಸಭಾ ಕ್ಷೇತ್ರ ಮತ್ತು ಲೋಕಸಭಾ ಸ್ಥಾನ ಗೆಲ್ಲುವ ಮೂಲಕ ಬಿಜೆಪಿಗೆ ನನ್ನ ಕೊಡುಗೆ ಕೊಡುತ್ತೇನೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.