ದೆಹಲಿ: ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ನೋಟಿಸ್‌ಗೆ 4 ವಾರದಲ್ಲಿ ಉತ್ತರಿಸುವಂತೆಯೂ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಮಾಜಿ ಶಾಸಕ ವೆಂಕಟಶಿವಾರೆಡ್ಡಿ ವಿರುದ್ಧ ಶಾಸಕ ರಮೇಶ್ ಕುಮಾರ್ ಮಾನಹಾನಿ ಕೇಸ್ ದಾಖಲಿಸಿದ್ದರು. ಅರಣ್ಯ ಭೂಮಿ ಒತ್ತುವರಿ ಎಂದಿದ್ದಕ್ಕೆ ಕೇಸ್ ದಾಖಲಿಸಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್ಗೆ ವೆಂಕಟಶಿವಾರೆಡ್ಡಿ ಅರ್ಜಿ ಸಲ್ಲಿಸಿದ್ದರು. ಇದೀಗ, ಮಾನಹಾನಿ ಕೇಸ್ಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠದಿಂದ ನೋಟಿಸ್ ಜಾರಿ ಮಾಡಿದೆ.
ಇತ್ತೀಚೆಗಷ್ಟೇ ಪೊಲೀಸರ ವಿರುದ್ಧ ರಮೇಶ್ ಕುಮಾರ್ ಆಕ್ರೋಶ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಆ ಘಟನೆಯ ಬಗ್ಗೆ ಮಾಜಿ ಸ್ಪೀಕರ್ ಹಾಗೂ ಶಾಸಕ ಕೆ.ಆರ್. ರಮೇಶ್ ಕುಮಾರ್ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದರು. ನಾನು ಊರಿನಿಂದ ಬರುತ್ತಿದ್ದೆ. ಪೊಲೀಸರು ವಾಹನಗಳನ್ನು ಸಾಲಿನಲ್ಲಿ ನಿಲ್ಲಿಸುತ್ತಿದ್ರು. ನನ್ನ ವಾಹನ ನೋಡಿ ಹೋಗಲು ಹೇಳಿದ್ರು. ಅದಕ್ಕೆ ಯಾಕೆ ಹೀಗೆ ಮಾಡ್ತೀರಪ್ಪ ಎಂದು ಪ್ರಶ್ನಿಸಿದ್ದೆ. ನಿಮ್ಮ ಮಕ್ಕಳಿಗೆ ಒಳ್ಳೆಯದಾಗ ಬೇಡ್ವಾ ಎಂದು ಕೇಳಿದ್ದೆ. ಪೊಲೀಸ್ ಸಿಬ್ಬಂದಿಯನ್ನು ಬೈಯ್ಯಲು ನಾನು ಶತ್ರುವಾ? ನನಗೆ ಬೇರೆ ಸಾಮಾನ್ಯರಿಗೆ ಬೇರೆ ನಿಯಮ ಏಕೆಂದು ಕೇಳಿದ್ದೆ. 24 ಕಡೆ ವಾಹನ ನಿಲ್ಲಿಸಿ, ಟೋಲ್ ರೀತಿ ಮಾಡಿದ್ರೆ ಹೇಗೆ. ಅದಕ್ಕೂ ಒಂದು ನಿಯಮ ಇಲ್ವಾ? ಪೊಲೀಸರ ಮಕ್ಕಳ ಬಗ್ಗೆ ನಾನೇ ಅಸೆಂಬ್ಲಿಯಲ್ಲಿ ಮಾತಾಡಿದ್ದೇನೆ ಎಂದು ರಮೇಶ್ ಕುಮಾರ್ ಹೇಳಿದ್ದರು.
ನನಗೊಂದು ನ್ಯಾಯ ಅವರಿಗೊಂದು ನ್ಯಾಯವೇಕೆ? ಒಂದು ವೇಳೆ ಕಾನೂನು ಇದ್ರೆ ನನಗೂ ದಂಡ ಹಾಕಲಿ. ನನ್ನ ಮಾತ್ರ ಬಿಟ್ರು ಎಂದು ಬಂದು ಬಿಟ್ರೆ ನಾನೊಬ್ಬ ಜನಪ್ರತನಿಧಿಯಾಗಿ ತಪ್ಪಾಗುತ್ತೆ. ನನ್ನ ಮತದಾರ ಅಲ್ಲಿ ಇದ್ರೆ ಅವನು ನನ್ನ ಬಗ್ಗೆ ಏನು ತಿಳಿದುಕೊಳ್ಳಬೇಕು. ಹೀಗಾಗಿ ಅವರಿಗೆ ಅರ್ಥ ಮಾಡಿಸಿದೆ ಅಷ್ಟೇ. ಇದನ್ನು ಹೆಚ್ಚು ಬೆಳೆಸುವುದು ಬೇಡ. ಗೃಹ ಸಚಿವರಿಗೆ ಎಲ್ಲವೂ ಗೊತ್ತಾಗಿರುತ್ತೆ ಎಂದು ರಮೇಶ್ ಕುಮಾರ್ ತಿಳಿಸಿದ್ದರು.
ಮಾಜಿ ಸ್ಪೀಕರ್ ಹಾಗೂ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಅವರು ಪೊಲೀಸರೊಂದಿಗೆ ನಡೆದುಕೊಂಡದ್ದನ್ನು ಗಮನಿಸಿ ಪೊಲೀಸ್ ಸಿಬ್ಬಂದಿ ಪತ್ರದ ಮೂಲಕ ಅಸಮಾಧಾನ ಹೊರಹಾಕಿದ್ದರು. ಬಳಿಕ ಆ ಬಗ್ಗೆ ರಮೇಶ್ ಕುಮಾರ್ ಸ್ಪಷ್ಟೀಕರಣ ನೀಡಿದ್ದರು.
ಇದನ್ನೂ ಓದಿ: Pegasus row ಪೆಗಾಸಸ್ ವಿವಾದ ಬಗ್ಗೆ ವಿವರವಾದ ಅಫಿಡವಿಟ್ ಸಲ್ಲಿಸುವುದಿಲ್ಲ: ಸುಪ್ರೀಂಕೋರ್ಟ್ನಲ್ಲಿ ಕೇಂದ್ರ ಹೇಳಿಕೆ
ಇದನ್ನೂ ಓದಿ: ಅನಧಿಕೃತ ಧಾರ್ಮಿಕ ಕಟ್ಟಡ ತೆರವು ವಿವಾದ: ಸುಪ್ರೀಂಕೋರ್ಟ್ ಆದೇಶದಲ್ಲೇನಿದೆ?
Published On - 4:51 pm, Mon, 13 September 21