ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಪೋಸ್ಟ್ ಮ್ಯಾನ್ ಸುರೇಶ ತಳವಾರ ಕಳೆದ 4 ವರ್ಷಗಳಿಂದ ಕಾಗದ ಪತ್ರಗಳನ್ನ ಹಂಚದೆ ಕಾಲ ಕಳೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
4 ವರ್ಷಗಳಿಂದ ಪತ್ರ ಹಂಚದೆ ಈ ಯುವ ಪೋಸ್ಟ್ಮ್ಯಾನ್ ನಿರ್ಲಕ್ಷ್ಯತೋರಿದ್ದಾನೆ ಎನ್ನಲಾಗಿದೆ. ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮ ವಿಭಾಗಕ್ಕೆ ನಾಲ್ಕು ವರ್ಷಗಳಿಂದ ಬಂದಿದ್ದ ಪತ್ರಗಳು, ಎಟಿಎಂ ಕಾರ್ಡ್ಗಳು, ಪರೀಕ್ಷಾ ಪ್ರವೇಶ ಪತ್ರಗಳು ಸೇರಿದಂತೆ ಯಾವುದೇ ಕಾಗದ ಪತ್ರ ತಲುಪಿಸದೆ ದಿವ್ಯ ನಿರ್ಲಕ್ಷ್ಯ ತೋರಿದ್ದಾನೆ.
2016ರಿಂದ ಈವರೆಗೂ ಸುರೇಶ ತಳವಾರ 1000ಕ್ಕೂ ಅಧಿಕ ಪತ್ರ, ATM ಕಾರ್ಡ್ಗಳನ್ನು ಬಟವಾಡೆ ಮಾಡದಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ.