ಉಗ್ರನಿಗೆ ನೆರವು: ವೈದ್ಯ ನಾಗರಾಜ್ ಕರ್ಮಕಾಂಡ ಬಯಲು, ಸ್ಫೋಟಕ ಮಾಹಿತಿ ಬಿಚ್ಚಿಟ್ಟ NIA

ಬೆಂಗಳೂರಿನ ಜೈಲಿನಲ್ಲಿರುವ ಉಗ್ರರಿಗೆ ನೆರವು ನೀಡಿದ ಆರೋಪದಡಿ ಈಗಾಗಲೇ ಎನ್​ಐಎ ಅಧಿಕಾರಿಗಳು ವೈದ್ಯ ನಾಗರಾಜ್​​ ನನ್ನು ಬಂಧಿಸಿದ್ದಾರೆ. ಇತ್ತ ಹೆಚ್ಚಿನ ತನಿಖೆ ನಡೆಸಿರುವ NIA ಅಧಿಕಾರಿಗಳು ಸ್ಫೋಟಕ ಮಾಹಿತಿ ಪತ್ತೆ ಮಾಡಿದ್ದಾರೆ. ಸಹಾಯಕಿ ಪವಿತ್ರಾಳನ್ನು ಬಳಸಿಕೊಂಡು ವೈದ್ಯ ನಾಗರಾಜ್​, ಜೈಲಿನಲ್ಲಿರುವ ಕೈದಿಗಳಿಗೆ ಮೊಬೈಲ್ ಮಾರಾಟ ಮಾಡುತ್ತಿದ್ದ ಸಂಗತಿ ಬಹಿರಂಗವಾಗಿದೆ.

ಉಗ್ರನಿಗೆ ನೆರವು: ವೈದ್ಯ ನಾಗರಾಜ್ ಕರ್ಮಕಾಂಡ ಬಯಲು, ಸ್ಫೋಟಕ ಮಾಹಿತಿ ಬಿಚ್ಚಿಟ್ಟ NIA
Nia, ವೈದ್ಯ ನಾಗರಾಜ್

Updated on: Jul 09, 2025 | 12:43 PM

ಬೆಂಗಳೂರು, ಜುಲೈ 09: ಎಲ್‌ಇಟಿ ಭಯೋತ್ಪಾದಕ ಟಿ ನಾಸೀರ್‌ಗೆ ನೆರವು ನೀಡಿದ ಆರೋಪದಡಿ ಮೂವರು ಶಂಕಿತ ಉಗ್ರರನ್ನ ಎನ್‌ಐಎ (NIA) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ. ಬೆಂಗಳೂರು ಮತ್ತು ಕೋಲಾರದಲ್ಲಿ 5 ಕಡೆ ದಾಳಿ ನಡೆಸಿ ಮೂವರನ್ನ ಅರೆಸ್ಟ್​ ಮಾಡಲಾಗಿದೆ. ಸದ್ಯ ಎನ್​​ಐಎ ಅಧಿಕಾರಿಗಳ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೈಲಿನಲ್ಲಿ ಕೈದಿಗಳಿಗೆ ವೈದ್ಯ ನಾಗರಾಜ್ ಮೊಬೈಲ್ (mobile) ಮಾರಾಟ ಮಾಡುತ್ತಿದ್ದ ವಿಚಾರ ಬಯಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ 4ರಿಂದ 5 ವರ್ಷಗಳಿಂದ ಮನೋವೈದ್ಯನಾಗಿರುವ ನಾಗರಾಜ್‌, ವೈದ್ಯ ಕೆಲಸ ಬಿಟ್ಟು ಮೊಬೈಲ್ ಸಪ್ಲೈ ಮಾಡುವ ಕೆಲಸ ಮಾಡುತ್ತಿದ್ದರಂತೆ. ಉಗ್ರ ನಾಸೀರ್ ಸೇರಿದಂತೆ ಹಲವು ಕೈದಿಗಳಿಗೆ ತನ್ನ ಸಹಾಯಕಿ ಪವಿತ್ರಾಳ ಮೂಲಕ ಜೈಲಿಗೆ ಮೊಬೈಲ್ ರವಾನೆ ಮಾಡುತ್ತಿದ್ದರು.

ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್, ರಾಮೇಶ್ವರಂ ಕೆಫೆ ಸ್ಫೋಟ ಮಾಸ್ಟರ್ ಮೈಂಡ್​ಗೂ ಬಂಧಿತ ಶಂಕಿತರಿಗೂ ಪ್ರಬಲ ನಂಟು!

ಇದನ್ನೂ ಓದಿ
ಸಂಪುಟ ವಿಸ್ತರಣೆಗಾಗಿ ದೆಹಲಿಗೆ ಬಂದಿಲ್ಲ: ಡಿಸಿಎಂ ಡಿಕೆ ಶಿವಕುಮಾರ್
ಮುಡಾ: ಒಬ್ಬ ವ್ಯಕ್ತಿಗೆ 30ಕ್ಕೂ ಹೆಚ್ಚು ಸೈಟ್​ ಹಂಚಿಕೆ, ತನಿಖೆಯಲ್ಲಿ ಪತ್ತೆ
ಹಲವು ಸ್ಫೋಟಗಳ ಮಾಸ್ಟರ್ ಮೈಂಡ್ ನಾಸೀರ್ ಜತೆ ಬಂಧಿತರಿಗೆ ಪ್ರಬಲ ನಂಟು
ಬೆಂಗಳೂರು, ಕೋಲಾರದಲ್ಲಿ NIA ದಾಳಿ: ಮೂವರು ಶಂಕಿತ ಉಗ್ರರ ಬಂಧನ

ಬಳಿಕ ಕೈದಿಗಳಿಗೆ ಮೊಬೈಲ್ ಮಾರುತ್ತಿದ್ದ ನಾಗರಾಜ್, 10ಸಾವಿರ ರೂ ಮೊಬೈಲ್‌ಗಳನ್ನ 50 ಸಾವಿರ ರೂ. ಗೆ ಮಾರಾಟ ಮಾಡಿದ್ದನಂತೆ. ಶಂಕಿತ ಉಗ್ರರು, ಡ್ರಗ್ ಪೆಡ್ಲರ್, ರೌಡಿಶೀಟರ್‌ಗಳು ಸೇರಿದಂತೆ ನೂರಾರು ಮಂದಿಗೆ ಮೊಬೈಲ್ ಸಪ್ಲೈ ಮಾಡಿದ್ದಾರೆ. ನಾಸೀರ್‌ಗೂ ಮೊಬೈಲ್ ನೀಡಿದ ಆರೋಪದಲ್ಲಿ ನಾಗರಾಜ್‌ನನ್ನ ಎನ್​​ಐಎ ಬಂಧಿಸಿದೆ.

ಶಂಕಿತ ಉಗ್ರ ಸಲ್ಮಾನ್ ಜೊತೆ ASI ಚಾನ್ ಪಾಷಾ ಸಂಪರ್ಕ

ಈ ಹಿಂದೆ ಸುಲ್ತಾನ್​ಪಾಳ್ಯ, ಭದ್ರಪ್ಪ ಲೇಔಟ್​ನಲ್ಲಿ ಶಂಕಿತ ಉಗ್ರರ ಮನೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. 2022ರಲ್ಲಿ ಟಿ ನಾಸೀರ್ ಪರ ಕೆಲಸ ಮಾಡುತ್ತಿದ್ದ ಆರೋಪ ಜೈಲಿನ ASI ಚಾಂದ್ ಪಾಷಾ ವಿರುದ್ಧ ಕೇಳಿ ಬಂದಿದೆ. ನಾಸೀರ್‌ನನ್ನ ಯಾವ್ಯಾವ ಕೋರ್ಟ್‌ಗೆ ಕರೆದೊಯ್ಯುತ್ತಿದ್ದರು ಎಂಬುದನ್ನ ನಾಸೀರ್ ಸೇರಿದಂತೆ ಆತನ ಸಂಪರ್ಕಿತ ಸಂಘಟನೆಗೆ ASI ಚಾಂದ್ ಪಾಷಾ ಮಾಹಿತಿ ರವಾನೆ ಮಾಡುತ್ತಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲ, ಈ ಹಿಂದೆ ಸಿಸಿಬಿ ದಾಳಿಯಾದಾಗ ಶಂಕಿತ ಉಗ್ರ ಸಲ್ಮಾನ್ ಎಂಬಾತ ತಪ್ಪಿಸಿಕೊಳ್ಳಲು ಚಾಂದ್‌ಪಾಷಾ ನೆರವು ನೀಡಿದ್ದರಂತೆ.

ಇದನ್ನೂ ಓದಿ: ಬೆಂಗಳೂರು, ಕೋಲಾರದಲ್ಲಿ NIA ದಾಳಿ: ಒಟ್ಟು ಮೂವರು ಶಂಕಿತ ಉಗ್ರರ ಬಂಧನ..!

ಗ್ರೆನೇಡ್ ಸಪ್ಲೈ ಕೇಸ್‌ನಲ್ಲಿ ಸಲ್ಮಾನ್ ತಲೆಮರೆಸಿಕೊಂಡಿದ್ದ. ಆಗ ಸಿಸಿಬಿ ಸಲ್ಮಾನ್ ಮೇಲೆ ದಾಳಿ ಮಾಡಿದಾಗ ಸಲ್ಮಾನ್ ಪರಾರಿಯಾಗಲು ASI ನೆರವು ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಶಂಕಿತ ಉಗ್ರ ಸಲ್ಮಾನ್ ಜತೆ ASI ಗೆ ಸಂಪಕ್ಕ ಇದ್ದ ಕಾರಣ NIA ಅಧಿಕಾರಿಗಳು ಬಂಧಿಸಿದ್ದಾರೆ.

ವರದಿ: ವಿಕಾಸ್ ಗೌಡ ಕ್ರೈಂ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.