ಕೆಆರ್ಎಸ್ ಜಲಾಶಯದಿಂದ ವಿಶ್ವೇಶ್ವರಯ್ಯ ನಾಲೆಗೆ ಹರಿದ ನೀರು, ಮಂಡ್ಯಭಾಗದ ರೈತರಲ್ಲಿ ಸಂತಸ
ಜಲಾಶಯದಲ್ಲಿ ನೀರಿಲ್ಲವೆಂದರೆ ಅದನ್ನು ರೈತರು ಅರ್ಥಮಾಡಿಕೊಳ್ಳುತ್ತಾರೆ. ಅದರೆ ಅದು ಗರಿಷ್ಠಮಟ್ಟದವರಗೆ ತುಂಬಿ ನೀರನ್ನು ಪುನಃ ನದಿಗೆ ಹರಿಬಿಟ್ಟು ಅದು ಪಕ್ಕದ ತಮಿಳುನಾಡುಗೆ ಹರಿದು ಹೋಗವುದನ್ನು ನೋಡುವುದು ಪ್ರಾಯಶಃ ಸರ್ಕಾರಕ್ಕೆ ವಿಕೃತಾನಂದ ನೀಡುತ್ತಿರಬಹುದು. ಕಳೆದೊಂದು ವಾರದ ಅವಧಿಯಿಂದ ರೈತರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜಡತ್ವ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಮಂಡ್ಯ, ಜುಲೈ 9: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ, ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಕೆಅರ್ಎಸ್ ಜಲಾಶಯ ತುಂಬಿ ತುಳುಕುತ್ತಿದೆ ಮತ್ತು ಹೆಚ್ಚುವರಿ ನೀರು ನದಿ ಮೂಲಕ ತಮಿಳುನಾಡುಗೆ ಹರಿದುಹೋಗುತ್ತಿದೆ. ಆದರೆ ನಮ್ಮ ಘನ ಸರ್ಕಾರ (state government) ತುಂಬಿದ ಜಲಾಶಯದಿಂದ ನಾಲೆಗೆ ನೀರು ಬಿಡದೆ ಮಂಡ್ಯ ಭಾಗದ ರೈತರ ಆಕ್ರೋಶಕ್ಕೆ ಗುರಿಯಾಗಿತ್ತು. ಅನ್ನದಾತರ ಕೋಪದಿಂದ ಅಳುಕಿದ ಸರ್ಕಾರ ನಿನ್ನೆ ತಡರಾತ್ರಿಯಿಂದ ಜಲಾಶಯದಿಂದ ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸಿದೆ. ನಾಲೆಯಲ್ಲಿ ಹರಿಯವ ನೀರನ್ನು ಕಂಡು ರೈತರು ಪಡುವ ಆನಂದ ಸರ್ಕಾರಕ್ಕೆ ಗೊತ್ತಾಗುವುದಿಲ್ಲವೇನೋ?
ಇದನ್ನೂ ಓದಿ: ಕೆಅರ್ಎಸ್ ಗೆ ಹೆಚ್ಚಿದ ಒಳಹರಿವು, ಮಳೆಗಾಲದ ಮೊದಲ ತಿಂಗಳಲ್ಲೇ ಜಲಾಶಯದಲ್ಲಿ 100 ಅಡಿ ನೀರು!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

