ಉಡುಪಿ: ಭಾರತವನ್ನ ತ್ಯಾಜ್ಯಮುಕ್ತಗೊಳಿಸಿ ಆರೋಗ್ಯದ ಅರಿವು ಮೂಡಿಸೋ ಉದ್ದೇಶದಿಂದ ದೇಶ ಸುತ್ತುತ್ತಿದ್ದಾನೆ ಇಲ್ಲೊಬ್ಬ ಯುವಕ. ಇವರ ಹೆಸರು ರಿಪು ದಾಮನ್, ಇವರು ದಿಲ್ಲಿ ನಿವಾಸಿ. ಭಾರತ ತ್ಯಾಜ್ಯಮುಕ್ತವಾಗಬೇಕು ಎಂಬ ಅಭಿಲಾಷೆಯಿಂದ ದೇಶ ಸುತ್ತುವ ಕೆಲಸಕ್ಕೆ ಮುಂದಾಗಿದ್ದಾರೆ.
ಇಗಾಗಲೇ ಬಹಳ ಕಡೆ ಸುತ್ತಿರುವ ಇವರು ತಮ್ಮ ತ್ಯಾಜ್ಯಮುಕ್ತ ಅಭಿಯಾನವನ್ನು ಕೈಗೊಂಡಿದ್ದು, ಹೋದಲ್ಲೆಲ್ಲ ತ್ಯಾಜ್ಯಮುಕ್ತದ ಜೊತೆ ಆರೋಗ್ಯದ ಕಡೆ ಅರಿವು ಮೂಡಿಸುವ ಬಗ್ಗೆ ಸಂದೇಶ ರವಾನಿಸುತ್ತಿದ್ದಾರೆ.
ಒಂದು ದೊಡ್ಡ ಅಭಿಲಾಷೆಯಲ್ಲಿ ದೇಶ ಸುತ್ತುತ್ತಿರುವ ರಿಪು ದಾಮನ್ ಈಗ ಉಡುಪಿ ಜಿಲ್ಲೆಯ ಕುಂದಾಪುರಕ್ಕೆ ಬಂದಿದ್ದು, ಅಲ್ಲಿನ ಓಕ್ ವುಡ್ ಶಾಲಾ ಮಕ್ಕಳಿಗೆ ಕಸಮುಕ್ತ ಅಭಿಯಾನ ಕುರಿತು ಪಾಠ ಮಾಡಿ ಮಕ್ಕಳೊಂದಿಗೆ ಕೋಡಿ ಬೀಚ್ ಕ್ಲಿನ್ ಮಾಡಿದ್ರು.
ಇವರ ಈ ರೀತಿಯ ಭಾರತವನ್ನ ತ್ಯಾಜ್ಯಮುಕ್ತಗೊಳಿಸಿ ಒಳ್ಳೆ ಆರೋಗ್ಯದ ಅರಿವು ಜನರಲ್ಲಿ ಬಹಳಷ್ಟು ಅರಿವು ಮೂಡಿಸಿದೆ, ಜನರು ರಿಪು ದಾಮನ್ ಅವರ ಈ ಯೋಜನೆ ಕುರಿತು ಸಂತಾಪ ವ್ಯಕ್ತಪಡಿಸಿದ್ದು, ರಿಪು ದಾಮನ್ ಅವರ ಜೊತೆ ಕೈಜೋಡಿಸುತ್ತಿದ್ದಾರೆ.