Special Train: ಕೊಟ್ಟೂರು ರಥೋತ್ಸವಕ್ಕಾಗಿ ವಿಶೇಷ ರೈಲು ವ್ಯವಸ್ಥೆ; ವಿವರ ಇಲ್ಲಿದೆ

Kottur Car Festival, Special Train Service: ವಿಜಯನಗರ ಜಿಲ್ಲೆಯ ಸುಪ್ರಸಿದ್ಧ ಕೊಟ್ಟೂರು ಗುರುಬ್ರಹ್ಮ ರಥೋತ್ಸವಕ್ಕೆ ಲಕ್ಷಾಂತರ ಜನರು ಸೇರುತ್ತಿದ್ದು ಅದಕ್ಕಾಗಿ ನೈರುತ್ಯ ರೈಲ್ವೆ ಇಲಾಖೆ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಬಳ್ಳಾರಿ ಸಂಸದ ವೈ ದೇವೇಂದ್ರಪ್ಪರ ಮನವಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

Special Train: ಕೊಟ್ಟೂರು ರಥೋತ್ಸವಕ್ಕಾಗಿ ವಿಶೇಷ ರೈಲು ವ್ಯವಸ್ಥೆ; ವಿವರ ಇಲ್ಲಿದೆ
ಕೊಟ್ಟೂರು ರಥೋತ್ಸವ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 15, 2023 | 12:17 PM

ಹುಬ್ಬಳ್ಳಿ: ಬಳ್ಳಾರಿಯಲ್ಲಿ ಪ್ರತೀ ವರ್ಷ ಭವ್ಯವಾಗಿ ನಡೆಯುವ ಕೊಟ್ಟೂರು ಜಾತ್ರೆ ಮತ್ತು ರಥೋತ್ಸವದ (Kotturu Car Festival) ನಿಮಿತ್ತ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಬಳ್ಳಾರಿ ಸಂಸದ ವೈ ದೇವೇಂದ್ರಪ್ಪ ಅವರ ಮನವಿ ಮೇರೆಗೆ ಇಂದಿನಿಂದ ಆರು ದಿನಗಳ ಕಾಲ ಹುಬ್ಬಳ್ಳಿಯಿಂದ ಹೊಸಪೇಟೆಗೆ ವಿಶೇಷ ರೈಲು ಓಡಿಸಲಾಗುತ್ತಿದೆ. ಫೆಬ್ರುವರಿ 15ರಿಂದ 20ವರೆಗೂ ಸಂಚರಿಸುವ ಈ ರೈಲು ದಾವಣಗೆರೆ ಮೂಲಕ ಹಾದು ಹೋಗುತ್ತದೆ.

ನೈರುತ್ಯ ರೈಲ್ವೆ ವಲಯದ ಟ್ರೈನ್ ನಂಬರ್ 07339/07340 ಹುಬ್ಬಳ್ಳಿ ಹೊಸಪೇಟೆ ಮಾರ್ಗದ ರೈಲು ಪ್ರತೀ ದಿನ ಬೆಳಗ್ಗೆ 6:15ಕ್ಕೆ ಹುಬ್ಬಳ್ಳಿಯಿಂದ ಹೊರಟು ಮಧ್ಯಾಹ್ನ 1:45ಕ್ಕೆ ಹೊಸಪೇಟೆ ತಲುಪುತ್ತದೆ. ಮಧ್ಯಾಹ್ನ 3ಕ್ಕೆ ಹೊಸಪೇಟೆಯಿಂದ ವಾಪಸ್ ಹೊರಡುವ ರೈಲು ರಾತ್ರಿ 10:50ಕ್ಕೆ ಹುಬ್ಬಳ್ಳಿ ತಲುಪುತ್ತದೆ. ಹುಬ್ಬಳ್ಳಿಯಿಂದ ಯಳವಗಿ, ಹಾವೇರಿ, ಬ್ಯಾಡಗಿ, ರಾಣೆಬೆನ್ನೂರ, ಹರಿಹರ, ದಾವಣಗೆರೆ, ತೊಳಹುಣಸಿ, ಅಮರಾವತಿ ಕಾಲೊನಿ, ತೆಲಗಿ, ಹರಪನಹಳ್ಳಿ, ಬೆನೆಹಳ್ಳಿ, ಕೊಟ್ಟೂರು, ಮಳವಿ, ಹಗರಿಬೊಮ್ಮನಹಳ್ಳಿ, ಹಂಪಪಟ್ಟಣ, ಮಾರಿಯಮನಹಳ್ಳಿ, ವ್ಯಾಸ ಕಾಲೊನಿ, ತುಂಗಭದ್ರ ಅಣೆಕಟ್ಟು ಮತ್ತು ನಂತರ ಹೊಸಪೇಟೆಗೆ ಈ ರೈಲು ನಿಲುಗಡೆ ಇರುತ್ತದೆ.

ಇದನ್ನೂ ಓದಿ: Aero India 2023: ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪನಿಗಳ ಪ್ರಾಡಕ್ಟ್​ಗಳಿಗೆ ಭಾರೀ ಬೇಡಿಕೆ: ಗಮನ ಸೆಳೆದ ಮಾನವ ರಹಿತ ಡ್ರೋನ್

ಇದು ಇಂದು ಬುಧವಾರದಿಂದ ಮುಂದಿನ ಮಂಗಳವಾರದವರೆಗೂ ಇರುತ್ತದೆ. ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆಯುವ ಗುರು ಬವಸವೇಶ್ವರ ರಥೋತ್ಸವ ಮತ್ತು ಜಾತ್ರೆಗೆ ಪ್ರತೀ ವರ್ಷ ಲಕ್ಷಾಂತರ ಜನರು ಸೇರುತ್ತಾರೆ. ಈ ಅವಧಿಯಲ್ಲಿ ಈ ಮಾರ್ಗದ ಬಸ್ಸುಗಳು ತುಂಬಿತುಳುಕುತ್ತಿರುತ್ತವೆ. ಈ ಭಾಗಕ್ಕೆ ಹೆಚ್ಚಿನ ರೈಲು ವ್ಯವಸ್ಥೆ ಇಲ್ಲ. ಕೊಟ್ಟೂರು ಮೂಲಕ ಒಂದು ಎಕ್ಸ್​ಪ್ರೆಸ್ ರೈಲು ಇದ್ದು ಹೊಸಪೇಟೆಯಿಂದ ದಾವಣಗೆರೆಗೆ ಇದು ಸಂಪರ್ಕಿಸುತ್ತದೆ. ಇದೇ ಸೆಪ್ಟೆಂಬರ್ ತಿಂಗಳಿಂದ ಬೆಂಗಳೂರಿನಿಂದ ಕೊಟ್ಟೂರು ಮಾರ್ಗವಾಗಿ ವಿಜಯಪುರಕ್ಕೆ ಹೊಸ ರೈಲು ಓಡಲಿದೆ.

Published On - 12:17 pm, Wed, 15 February 23