ನಾಳೆ ತಲಕಾವೇರಿಗೆ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಭೇಟಿ; ಸಾರ್ವಜನಿಕರಿಗೆ ಪ್ರವೇಶ ನಿಷೇಧ

ರಾಮ್​ನಾಥ್​ ಕೋವಿಂದ್ ಭೇಟಿ ಹಿನ್ನೆಲೆಯಲ್ಲಿ ತಲಕಾವೇರಿಯಲ್ಲಿ ಐದು ಅರ್ಚಕರಿಗೆ ಮಾತ್ರ ಪೂಜೆಗೆ ಅವಕಾಶವನ್ನು ನೀಡಲಾಗಿದೆ.

ನಾಳೆ ತಲಕಾವೇರಿಗೆ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಭೇಟಿ; ಸಾರ್ವಜನಿಕರಿಗೆ ಪ್ರವೇಶ ನಿಷೇಧ
ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್
Updated By: ರಶ್ಮಿ ಕಲ್ಲಕಟ್ಟ

Updated on: Feb 05, 2021 | 11:21 AM

ಕೊಡಗು: ಜಿಲ್ಲೆಯ ತಲಕಾವೇರಿಗೆ ನಾಳೆ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಭೇಟಿ  ಹಿನ್ನೆಲೆ ತಲಕಾವೇರಿ ಮತ್ತು ಭಾಗಮಂಡಲ ದೇಗುಲಕ್ಕೆ ಇಂದು ಮತ್ತು ನಾಳೆ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.

ರಾಷ್ಟ್ರಪತಿ ಕೋವಿಂದ್ ನಾಳೆ ಕುಟುಂಬ ಸಮೇತರಾಗಿ ಮಡಿಕೇರಿಗೆ ಭೇಟಿ ನೀಡಲಿದ್ದು, ತಲಕಾವೇರಿ ಹಾಗು ಭಾಗಮಂಡಲ ದೇಗುಲಕ್ಕೆ ಸ್ಯಾನಿಟೈಸ್ ಮಾಡಲಾಗುತ್ತದೆ. ಈಗಾಗಲೇ ಅರ್ಚಕರು ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಜೊತೆಗೆ ನಾಳೆ ತಲಕಾವೇರಿಯಲ್ಲಿ ಐದು ಅರ್ಚಕರಿಗೆ ಮಾತ್ರ ಪೂಜೆಗೆ ಅವಕಾಶವನ್ನು ನೀಡಲಾಗಿದೆ.

ಜನರಲ್ ತಿಮ್ಮಯ್ಯ ವಾರ್ ಮ್ಯೂಸಿಯಂ ಉದ್ಘಾಟನೆಗೆ ಆಗಮಿಸುತ್ತಿರುವ ರಾಷ್ಟ್ರಪತಿ, ನಾಳೆ ಬೆಳಗ್ಗೆ 11 ಗಂಟೆಗೆ ತಲಕಾವೇರಿಗೆ ಭೇಟಿ ನೀಡಲಿದ್ದಾರೆ. 3 ಗಂಟೆಗೆ ಸನ್ನಿ ಸೈಡ್ ಉದ್ಘಾಟನೆ ಮಾಡಿ 35 ನಿಮಿಷ ಕಾಲ ‌ ವೀಕ್ಷಣೆ ಮಾಡುತ್ತಾರೆ. ಆಯ್ದ ಕೆಲವು ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಕಾಂಗ್ರೆಸ್ ಪಕ್ಷ ಕಾರ್ಮಿಕರ ಪರವಾಗಿ ಇದೆ: ವಿಪಕ್ಷ ನಾಯಕ ಸಿದ್ದರಾಮಯ್ಯ