ಈ ವರ್ಷ ತಮಿಳುನಾಡಿಗೆ ನೀರು ಬಿಡಲು ಆಗಲ್ಲ, ಬೆಂಗಳೂರಿಗೆ ಕುಡಿಯೋ ನೀರು ಸಮಸ್ಯೆ ಆಗದಂತೆ ಆದ್ಯತೆವಹಿಸಲಾಗುತ್ತೆ -ಡಿಕೆ ಶಿವಕುಮಾರ್

ಭದ್ರಾ ಅಪ್ಪರ್ ಯೋಜನೆ ಬಗ್ಗೆಯೂ ಪ್ರಸ್ತಾಪ ಮಾಡಿದ್ದೇವೆ. ಯೋಜನೆಯ ಹಣ ಬಿಡಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಹಲವು ಯೋಜನೆಗಳ ಅನುದಾನ ಬಿಡುಗಡೆಗೂ ಮನವಿ ಮಾಡಿದ್ದೇವೆ ಎಂದು ದೆಹಲಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ವರ್ಷ ತಮಿಳುನಾಡಿಗೆ ನೀರು ಬಿಡಲು ಆಗಲ್ಲ, ಬೆಂಗಳೂರಿಗೆ ಕುಡಿಯೋ ನೀರು ಸಮಸ್ಯೆ ಆಗದಂತೆ ಆದ್ಯತೆವಹಿಸಲಾಗುತ್ತೆ -ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Edited By:

Updated on: Jul 01, 2023 | 2:03 PM

ದೆಹಲಿ: ಕೇಂದ್ರ ಸಚಿವರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿರುವ ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(DK Shivakumar) ಅವರು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಬೆಂಗಳೂರಿನ ಕೊಳಚೆ ನೀರು ಶುದ್ಧೀಕರಣ ವಿಚಾರವಾಗಿ ಭೇಟಿ ವೇಳೆ ಚರ್ಚೆ ನಡೆದಿದೆ. ಈ ಬಗ್ಗೆ ತಮಿಳುನಾಡು ಸರ್ಕಾರ ಕೋರ್ಟ್​ಗೆ ಹೋಗಿದೆ. ನ್ಯಾಯಾಧೀಕರಣ ರಚನೆಗೆ ಸೂಚನೆ ಬಂದಿದೆ ಎಂದರು.

ಕೊಳಚೆ ನೀರು ಶುದ್ಧೀಕರಿಸಿ ಕೋಲಾರ ಸೇರಿ ಹಲವೆಡೆ ಕೆರೆ ತುಂಬಿಸುವ ಕೆಲಸ ಆಗುತ್ತಿದೆ. ಕೊಳಚೆ ನೀರು ಶುದ್ಧೀಕರಣದ ವಿಚಾರಕ್ಕೆ ಕೇಂದ್ರ ಸರ್ಕಾರವೂ ಅಭಿನಂದಿಸಿದೆ. ನಾವು ನ್ಯಾಯಾಧೀಕರಣ ರಚನೆ ಬೇಡ ಎಂದು ಮನವಿ ಮಾಡಿದ್ದೇವೆ ಎಂದರು.

ಇದನ್ನೂ ಓದಿ: Monsoon Session: ಜುಲೈ 20ರಿಂದ ಆಗಸ್ಟ್ 11ರವರೆಗೆ ಸಂಸತ್​ನ ಮುಂಗಾರು ಅಧಿವೇಶನ; ಸಚಿವ ಪ್ರಹ್ಲಾದ್ ಜೋಶಿ

ಬೆಂಗಳೂರಿಗೆ ಸದ್ಯಕ್ಕೆ ಕುಡಿಯೋ ನೀರು ಸಮಸ್ಯೆ ಆಗದಂತೆ ಆದ್ಯತೆ

ಇನ್ನು ಡಿಕೆಶಿ, ಕಳಸಾ ಬಂಡೂರಿ, ಕೃಷ್ಣಾ ನದಿ ವಿಚಾರಗಳ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ಕೇಂದ್ರ ಸಚಿವರ ಗಮನಕ್ಕೆ ತಂದಿದ್ದೇವೆ. ಕೃಷ್ಣಾ ನದಿಯ ಗೆಜೆಟ್​ ನೋಟಿಫಿಕೇಷನ್​​ ಪಿಂಡಿಂಗ್ ಬಗ್ಗೆ ಮಾಹಿತಿ ಇದೆ. ಮೇಕೆದಾಟು ಯೋಜನೆ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಬೇಕು. ಕಾನೂನು ತಜ್ಞರ ಸಲಹೆ ಪಡೆದು ಕೇಂದ್ರ ಸಚಿವರ ಜೊತೆ ಚರ್ಚಿಸುವೆ. ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಾಗಿದೆ. ನಮ್ಮವರಿಗೇ ನೀರಿನ ಸಮಸ್ಯೆ ಎದುರಾಗಿದೆ. ಈ ವರ್ಷ ತಮಿಳುನಾಡಿಗೆ ನೀರು ಬಿಡಲು ಆಗಲ್ಲ. ಬೆಂಗಳೂರಿಗೆ ಸದ್ಯಕ್ಕೆ ಕುಡಿಯೋ ನೀರು ಸಮಸ್ಯೆ ಆಗದಂತೆ ಆದ್ಯತೆವಹಿಸಲಾಗುತ್ತೆ ಎಂದರು.

ಭದ್ರಾ ಅಪ್ಪರ್ ಯೋಜನೆ ಬಗ್ಗೆಯೂ ಪ್ರಸ್ತಾಪ ಮಾಡಿದ್ದೇವೆ. ಯೋಜನೆಯ ಹಣ ಬಿಡಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಹಲವು ಯೋಜನೆಗಳ ಅನುದಾನ ಬಿಡುಗಡೆಗೂ ಮನವಿ ಮಾಡಿದ್ದೇವೆ ಎಂದು ದೆಹಲಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ