ಬೀದರ್: ಒಂದ್ಕಡೆ ಕೊರೊನಾ ಕ್ರಿಮಿ ಕಾಟಕೊಡುತ್ತಿದ್ದರು ಅದರ ಬಗ್ಗೆ ಜಾಗ್ರತೆ ವಹಿಸದೆ ಐನಾತಿ ಕಳ್ಳರು ತಮ್ಮ ಕೈಚಳಕ ತೋರುವುದನ್ನು ಮುಂದುವರಿಸಿದ್ದಾರೆ. ಈ ಐನಾತಿ ಕಳ್ಳರು ಎಟಿಎಂ ಮಶೀನ್ ಕದ್ದುಕೊಂಡು ಹೋಗಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಎಟಿಎಂ ಅನ್ನು ಕದಿಯಲಾಗಿದೆ.
ಡಾಟಾ ಪ್ರಾಡಕ್ಟ್ ಸಂಸ್ಥೆಯವರು ಈ ಎಟಿಎಂ ಯಂತ್ರವನ್ನು ಅಳವಡಿಸಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಟಾಟಾ ಕಂಪನಿಯ ಇಂಡಿಕ್ಯಾಷ್ ಎಟಿಎಂ ಇದಾಗಿದೆ.
ಕೊರೊನಾಗೂ ಅಂಜದೇ ಬಸ್ ನಿಲ್ದಾಣದ ಬಳಿ ಎಟಿಎಂ ಯಂತ್ರ ಕದ್ದ ಔರಾದ್ನ ಐನಾತಿ ಕಳ್ಳರು
(tata indicash atm machine stolen in aurad town)