AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣದ ದಾಹಕ್ಕೆ ರೋಗಿ ಪರದಾಟ; ಮುಂಗಡ ಹಣ ಪಾವತಿಸಲಾಗದೆ ಚಿಕಿತ್ಸೆ ಪಡೆಯದೆ ವೃದ್ಧೆ ಮನೆಗೆ ವಾಪಸ್

ಖಾಸಗಿ ಆಸ್ಪತ್ರೆ ಮುಂಗಡವಾಗಿ 20 ಸಾವಿರ ಪಾವತಿಸಲು ಸೂಚಿಸಿದೆ. ಹಣ ಪಾವತಿಸಲು ಸಾಧ್ಯವಾಗದೆ ವೃದ್ಧೆ ತಮ್ಮ ಊರಿಗೆ ವಾಪಸ್ ಆಗಿದ್ದಾರೆ. ದಾವಣಗೆರೆಯಲ್ಲಿ ಬಡವರಿಗೆ ಸರಿಯಾದ ಚಿಕಿತ್ಸೆ ಸಿಗುವುದು ಕೂಡ ಕಷ್ಟವಾಗಿದೆ.

ಹಣದ ದಾಹಕ್ಕೆ ರೋಗಿ ಪರದಾಟ; ಮುಂಗಡ ಹಣ ಪಾವತಿಸಲಾಗದೆ ಚಿಕಿತ್ಸೆ ಪಡೆಯದೆ ವೃದ್ಧೆ ಮನೆಗೆ ವಾಪಸ್
ಮುಂಗಡ ಹಣ ಪಾವತಿಸಲಾಗದೆ ಚಿಕಿತ್ಸೆ ಪಡೆಯದೆ ವೃದ್ಧೆ ಮನೆಗೆ ವಾಪಸ್
ಆಯೇಷಾ ಬಾನು
|

Updated on: Apr 27, 2021 | 12:32 PM

Share

ದಾವಣಗೆರೆ: ಮಹಾಮಾರಿ ಕೊರೊನಾ ಸಮಯದಲ್ಲಿ ಅನೇಕ ಮುಖವಾಡಗಳು ಬಯಲಾಗುತ್ತಿವೆ. ಖಾಸಗಿ ಆಸ್ಪತ್ರೆಗಳು ತಮ್ಮ ಹಣದ ದಾಹಕ್ಕೆ ಏನೆನೋ ಹೀನ ಕೃತ್ಯಕ್ಕೆ ಮುಂದಾಗಿರುವ ಬಗ್ಗೆ ಅನೇಕ ಸಂಗತಿಗಳು ಹರಿದಾಡುತ್ತಿವೆ. ಈಗ ಇದಕ್ಕೆ ಪುಷ್ಟಿಕೊಡುವಂತೆ ಖಾಸಗಿ ಆಸ್ಪತ್ರೆಯ ಹಣದ ದಾಹಕ್ಕೆ ಉಸಿರಾಟ ಸಮಸ್ಯೆಯಿಂದ ವೃದ್ಧೆ ಪರದಾಡಿದಂತ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಮುಂಗಡ ಹಣ ಪಾವತಿಸಲಾಗದೆ ವೃದ್ಧೆ ಮನೆಗೆ ವಾಪಸ್ ಆಗಿದ್ದಾರೆ. ವಿಜಯ ನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕೋಡಿಯಾಲ ಗ್ರಾಮದ ಅನುಸೂಯಮ್ಮಗೆ ಉಸಿರಾಟ ಸಮಸ್ಯೆ ಇತ್ತು. ಹೀಗಾಗಿ ದಾವಣೆಗೆರೆ ಆಸ್ಪತ್ರೆಗೆ ಬಂದಿದ್ದರು. ಆದ್ರೆ ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ಹೋಗುವಂತೆ ಅಲ್ಲಿನ ಸಿಬ್ಬಂದಿ ಸೂಚಿಸಿದ್ದರು. ಬಳಿಕ ಹಲವು ಆಸ್ಪತ್ರೆಗಳು ಸುತ್ತಾಡಿದ್ದ ವೃದ್ಧೆ ಅನುಸೂಯಮ್ಮಗೆ ಬೆಡ್ ಸಿಕ್ಕಿಲ್ಲ. ಜಿಲ್ಲಾಸ್ಪತ್ರೆಯಿಂದ ರೆಫರೆನ್ಸ್ ಲೆಟರ್ ಇದ್ದರೂ ಖಾಸಗಿ ಆಸ್ಪತ್ರೆಗಳು ದಾಖಲಿಸಿಕೊಂಡಿಲ್ಲ. ಕೊವಿಡ್ ನೆಗೆಟಿವ್ ಇದ್ದರೂ ಆಕೆಯನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳು ಹಿಂದೇಟು ಹಾಕಿವೆ.

ಅದರಲ್ಲೂ ಒಂದು ಖಾಸಗಿ ಆಸ್ಪತ್ರೆ ಮುಂಗಡವಾಗಿ 20 ಸಾವಿರ ಪಾವತಿಸಲು ಸೂಚಿಸಿದೆ. ಹಣ ಪಾವತಿಸಲು ಸಾಧ್ಯವಾಗದೆ ವೃದ್ಧೆ ತಮ್ಮ ಊರಿಗೆ ವಾಪಸ್ ಆಗಿದ್ದಾರೆ. ದಾವಣಗೆರೆಯಲ್ಲಿ ಬಡವರಿಗೆ ಸರಿಯಾದ ಚಿಕಿತ್ಸೆ ಸಿಗುವುದು ಕೂಡ ಕಷ್ಟವಾಗಿದೆ.

ಇದನ್ನೂ ಓದಿ: ನಾಲ್ಕು ತಿಂಗಳಲ್ಲಿ ಹುಬ್ಬಳ್ಳಿಯ ತೋಳನಕೆರೆ ಉದ್ಯಾನವನ ಲೋಕಾರ್ಪಣೆಗೊಳ್ಳುತ್ತದೆ; ಪ್ರಹ್ಲಾದ್ ಜೋಶಿ ಮಾಹಿತಿ