ದೇವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೋಂಕಿತರ ಚಿಕಿತ್ಸೆಗೆ ಸಿದ್ಧತೆ; ಚಿಕಿತ್ಸೆ ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ
ಜಿಲ್ಲಾಡಳಿತ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲೆಯ ಎಲ್ಲಾ ಹಾಸ್ಟೆಲ್ಗಳಲ್ಲಿ ಬೆಡ್ಗಳನ್ನು ಹಾಕಿ ತಯಾರಿ ಮಾಡಿಕೊಳ್ಳಲು ಹೊರಟಿದೆ. ದೇವನಹಳ್ಳಿ ತಾಲೂಕಿನ ಸೋಮತ್ತನಹಳ್ಳಿ ಗ್ರಾಮದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಕೊಡಲು ತಯಾರಿ ಮಾಡಲು ಹೊರಟಿದೆಯಂತೆ.
ದೇವನಹಳ್ಳಿ: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅದರಲ್ಲೂ ಬೆಂಗಳೂರಿನಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಇದರ ಬೆನ್ನಲ್ಲೆ ಬೆಡ್ಗಳು ಸಿಗದೆ ಸೋಂಕಿತರ ಸಾವನ್ನಪ್ಪುತ್ತಲೆ ಇದ್ದಾರೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವು ಹಾಸ್ಟೆಲ್ಗಳನ್ನು ಕೊವಿಡ್ ಚಿಕಿತ್ಸಾ ಕೇಂದ್ರಗಳಾಗಿ ಮಾಡಲು ಹೊರಟಿರುವ ಸರ್ಕಾರಕ್ಕೆ ಇದೀಗ ಪ್ರತಿಭಟನೆ ಬಿಸಿ ಎದುರಾಗಿದೆ.
ಜಿಲ್ಲಾಡಳಿತ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲೆಯ ಎಲ್ಲಾ ಹಾಸ್ಟೆಲ್ಗಳಲ್ಲಿ ಬೆಡ್ಗಳನ್ನು ಹಾಕಿ ತಯಾರಿ ಮಾಡಿಕೊಳ್ಳಲು ಹೊರಟಿದೆ. ದೇವನಹಳ್ಳಿ ತಾಲೂಕಿನ ಸೋಮತ್ತನಹಳ್ಳಿ ಗ್ರಾಮದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಕೊಡಲು ತಯಾರಿ ಮಾಡಲು ಹೊರಟಿದೆಯಂತೆ. ಈ ನಿರ್ಧಾರದಿಂದ ರೊಚ್ಚಿಗೆದ್ದಿರುವ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಕೊರೊನಾ ಸೊಂಕೀತರಿಗೆ ಐಸೋಲೇಷನ್ ಮಾಡಲು ಬಿಡುವುದಿಲ್ಲ ಅಂತಾ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈಗಾಗಲೇ ಸೋಂಕಿತರ ಪ್ರಮಾಣ ಹೆಚ್ಚಾಗಿದ್ದು, ಜಿಲ್ಲೆಯ ಕೊವಿಡ್ ಸೆಂಟರ್ಗಳಲ್ಲಿ ಬೆಡ್ಗಳು ಭರ್ತಿಯಾಗಿವೆ. ಇದರಿಂದ ಹಾಸ್ಟೆಲ್ಗಳನ್ನ ಕೊರೊನಾ ಸೆಂಟರ್ ಮಾಡಲು ಹೊರಟಿದ್ದು, ಹಳ್ಳಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟನೆಯಾಗಿ ವರ್ಷ ಕಳೆದಿದೆಯಂತೆ. ಇನ್ನೂ ಕಟ್ಟಡ ಕಾಮಾಗಾರಿ ಸಾಕಷ್ಟಿದ್ದು, ಇದು ಮುಗಿಯುದರೊಳಗೆ ಕೊವಿಡ್ ಐಸೋಲೇಷನ್ ಸೆಂಟರ್ ಮಾಡಲು ಹೊರಟಿರುವುದು ಸೋಮತ್ತನಹಳ್ಳಿ ಹಾಗೂ ದೇವನಾಯಕನಹಳ್ಳಿ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿನ ವಸತಿ ಶಾಲೆಯ ಪಕ್ಕದಲ್ಲೆ ಗ್ರಾಮಸ್ಥರ ಕೃಷಿ ಜಮೀನುಗಳಿದ್ದು, ಪ್ರತಿನಿತ್ಯ ಜನ ಓಡಾಡುತ್ತಾರೆ. ಅಲ್ಲದೆ ಹಾಸ್ಟೆಲ್ ಸುತ್ತ ಕಾಂಪೌಂಡ್ ಇಲ್ಲದೆ ಇರುವುದು ಐಸೋಲೇಷನ್ ಮಾಡಿದ ಸೋಂಕಿತರು ಹಾಸ್ಟೆಲ್ ಹೊರಗೆ ಓಡಾಡಿದರೆ ಹೇಗೆ ಅಂತಾ ಇಲ್ಲಿನ ಜನರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿಯೇ ಹಾಸ್ಟೆಲ್ಗೆ ಬರುವ ಮುಖ್ಯ ರಸ್ತೆಗೆ ಟ್ರಂಚ್ ಹೊಡೆದು ಯಾರು ಬಾರದಂತೆ ತಡೆಹಿಡಿಯಲಾಗಿದೆ.
ಕೊರೊನಾ ಸೋಂಕಿತರ ಬೆಡ್ ಸಂಖ್ಯೆ ನೀಗಿಸಲು ಹಾಸ್ಟೆಲ್ಗಳನ್ನ ಕೊವಿಡ್ ಸೆಂಟರ್ ಮಾಡಲು ಹೊರಟಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತಕ್ಕೆ ಗ್ರಾಮಸ್ಥರು ಶಾಕ್ ನೀಡಿದ್ದಾರೆ. ಜೊತೆಗೆ ಯಾವುದೇ ಕಾರಣಕ್ಕೂ ವಸತಿ ಶಾಲೆಯಲ್ಲಿ ಸೋಂಕಿತರನ್ನು ಕರೆತರಲು ನಾವು ಬಿಡುವುದಿಲ್ಲ ಅಂತಾ ಗ್ರಾಮಸ್ಥರೆಲ್ಲಾ ಟೊಂಕ ಕಟ್ಟಿಕೊಂಡು ನಿಂತಿದ್ದಾರೆ.
ಇದನ್ನೂ ಓದಿ
ಆಮ್ಲಜನಕ ಕೊರತೆ ನೀಗಿಸಲು ಆಕ್ಸಿಜನ್ ಪ್ಲಾಂಟ್ ಸಿದ್ಧಪಡಿಸಿದ ಚಾಮರಾಜನಗರ ಜಿಲ್ಲಾಡಳಿತ
(Villagers oppose treating infected at Morarji Desai Model Residential School in Devanahalli)
Published On - 12:13 pm, Tue, 27 April 21