ಅಪರಾಧ ಸುದ್ದಿ: ಪೊಲೀಸರ ಸೋಗಿನಲ್ಲಿ ಸುಲಿಗೆ ತಲಘಟ್ಟಪುರದಲ್ಲಿ ಮೂವರ ಬಂಧನ, ಸವಣೂರಿನಲ್ಲಿ ರೌಡಿ ಶೀಟರ್ ಹತ್ಯೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 08, 2021 | 10:01 PM

ನಿರ್ಜನ ಪ್ರದೇಶದಲ್ಲಿ ಏಕಾಂತದಲ್ಲಿರುತ್ತಿದ್ದ ಪ್ರೇಮಿಗಳನ್ನು ಪೊಲೀಸರ ಸೋಗಿನಲ್ಲಿ ಸುಲಿಗೆ ಮಾಡುತ್ತಿದ್ದ ಮೂವರನ್ನು ತಲಘಟ್ಟಪುರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಅಪರಾಧ ಸುದ್ದಿ: ಪೊಲೀಸರ ಸೋಗಿನಲ್ಲಿ ಸುಲಿಗೆ ತಲಘಟ್ಟಪುರದಲ್ಲಿ ಮೂವರ ಬಂಧನ, ಸವಣೂರಿನಲ್ಲಿ ರೌಡಿ ಶೀಟರ್ ಹತ್ಯೆ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ನಿರ್ಜನ ಪ್ರದೇಶದಲ್ಲಿ ಏಕಾಂತದಲ್ಲಿರುತ್ತಿದ್ದ ಪ್ರೇಮಿಗಳನ್ನು ಪೊಲೀಸರ ಸೋಗಿನಲ್ಲಿ ಸುಲಿಗೆ ಮಾಡುತ್ತಿದ್ದ ಮೂವರನ್ನು ತಲಘಟ್ಟಪುರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಂಧಿತರನ್ನು ಶಿವ, ಪ್ರವೀಣ್ ಕುಮಾರ್, ರಘು ಎಂದು ಗುರುತಿಸಲಾಗಿದೆ. ಈ ಪೈಕಿ ಆರೋಪಿ ರಘು ಎಂಬಾತ ಈ ಹಿಂದೆ ಹೋಮ್​ಗಾರ್ಡ್ ಆಗಿದ್ದ.

ಹಳೆಯ ಐಡಿ ಕಾರ್ಡ್‌ ತೋರಿಸುತ್ತಿದ್ದ ರಘು ತಾನು ಪೊಲೀಸ್ ಎಂದು ಹೇಳಿಕೊಂಡು ಸುಲಿಗೆ ಮಾಡುತ್ತಿದ್ದ. ರಘುವಿಗೆ ಆರೋಪಿಗಳಾದ ಶಿವ, ಪ್ರವೀಣ್ ಸಾಥ್ ನೀಡುತ್ತಿದ್ದರು. ರಾಮನಗರ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬನಿಂದ ಹಣ ಮತ್ತು ಎಟಿಎಂ ಕಾರ್ಡ್ ದೋಚಿ ಪರಾರಿಯಾಗಿದ್ದರು. ಬೈಕ್ ಸಹ ಕಳ್ಳತನ ಮಾಡಿದ್ದರು. ವಿಚಾರಣೆ ವೇಳೆ ಸುಲಿಗೆ ಮಾಡ್ತಿದ್ದನ್ನು ಒಪ್ಪಿಕೊಂಡಿದ್ದರು. ಬಂಧಿತರಿಂದ $1.5 ಲಕ್ಷ ನಗದು, ಕಾರು, ಚಾಕು, ನಕಲಿ ಐಡಿ ಕಾರ್ಡ್​ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಸವಣೂರಿನಲ್ಲಿ ರೌಡಿಶೀಟರ್ ಹತ್ಯೆ
ಹಣಕಾಸಿನ ವಿಚಾರಕ್ಕೆ ನಡೆದ ಜಗಳ ರೌಡಿ ಶೀಟರ್ ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡಿದೆ. ಹಾವೇರಿ ಜಿಲ್ಲೆ ಸವಣೂರಿನ ಕಾರಡಗಿ ರಸ್ತೆಯಲ್ಲಿ ಕೊಡಲಿಯಿಂದ ಕೊಚ್ಚಿ ರೌಡಿಶೀಟರ್​ಹಜರತ್ ಅಲಿ ಅಲಿಯಾಸ್​​ ಅನ್ವರ್​ ಶೇಖ್ (35) ಎಂಬಾತನನ್ನು ಹತ್ಯೆ ಮಾಡಲಾಗಿದೆ. ಕೊಲೆ ಆರೋಪದ ಮೇಲೆ ಸವಣೂರಿನ ಇಮ್ರಾನ್ ಚೌಧರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗೋವಾದಲ್ಲಿ ನಡೆದಿದ್ದ ಕೆಲ ಅಪರಾಧ ಪ್ರಕರಣಗಳಲ್ಲೂ ಅನ್ವರ್ ಆರೋಪ ಎದುರಿಸುತ್ತಿದ್ದ. ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

(Thalaghattapura Police Arrest 3 People Who Are Posing as Police)

ಇದನ್ನೂ ಓದಿ: ಅಪರಾಧ ಹಿನ್ನೆಲೆಯ ವ್ಯಕ್ತಿಗಳ ಜತೆ ಸಂಪರ್ಕ, ಪೊಲೀಸ್ ಠಾಣೆಯಲ್ಲಿ ಖಾಸಗಿ ಸಂಭ್ರಮಾಚರಣೆಗಳಿಗೆ ಸಂಪೂರ್ಣ ನಿಷೇಧ: ಪ್ರವೀಣ್ ಸೂದ್ ಆದೇಶ

ಇದನ್ನೂ ಓದಿ: ರೌಡಿ ಶೀಟರ್ ಹರೀಶ್ ಕೊಲೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ