ಟೋಪಿ ಅಂದ್ರೆ ಕನ್ನಡ, ಕನ್ನಡಕ ಅಂದ್ರೆ ಕನ್ನಡ; ಎರಡನ್ನೂ ಧರಿಸಿರುವವನು ಅಪ್ಪಟ ಮತ್ತು ಅದ್ಭುತ ಕನ್ನಡ ಹೋರಾಟಗಾರ: ವಾಟಾಳ್ ನಾಗರಾಜ್

| Updated By: Digi Tech Desk

Updated on: Nov 02, 2023 | 5:23 PM

ಬೆಂಗಳೂರಲ್ಲಿ ಬೇರೆ ಭಾಷಿಕರು ದಿನೇದಿನೇ ಹೆಚ್ಚುತ್ತಿರುವುದರಿಂದ ಕನ್ನಡದ ಹೋರಾಟಗಳ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹೇಳುವ ಅವರು ಕೆಲ ಕನ್ನಡ ಪರ ಹೋರಾಟಗಾರರು ಸ್ವಾರ್ಥಕ್ಕಾಗಿ ಚಳಿವಳಿಗಳನ್ನು ಬಳಸಿಕೊಳ್ಳುತ್ತಿರಬಹುದು ಆದರೆ ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗಲಾಗಲ್ಲ, ತಮ್ಮಂಥ ಹಲವಾರು ಜನ ನಿಸ್ವಾರ್ಥ ಮನೋಭಾವದಿಂದ ಕನ್ನಡ ಜಲ-ನೆಲ-ಭಾಷೆಗಾಗಿ ಹೋರಾಟ ಮಾಡುತ್ತಿದ್ದಾರೆ ಎನ್ನುತ್ತಾರೆ.

ಬೆಂಗಳೂರು: ಇದೊಂದು ವಿನೂತನ ಪ್ರಯೋಗ, ಚಲಿಸುವ ವಾಹನದಲ್ಲಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಅವರ ಸಂದರ್ಶನ! ಟೌನ್ ಹಾಲ್ ನಿಂದ ವಿಧಾನಸೌಧಕ್ಕೆ (Vidhan Soudha) ತೆರೆದ ವಾಹನದಲ್ಲಿ ಹೊರಟ ವಾಟಾಳ್ ನಾಗರಾಜ್, ಟಿವಿ9 ಕನ್ನಡ ವಾಹಿನಿಯ ವರದಿಗಾರ ಕೇಳುವ ಪ್ರಶ್ನೆಗಳಿಗೆ ಎಂದಿನ ಹಾಗೆ ನೇರಾನೇರ ಉತ್ತರ ನೀಡಿದ್ದಾರೆ. ಕನ್ನಡಿಗರಿಗೆ ವಾಟಾಳ್ ನಾಗರಾಜ್ ಅಂದಾಕ್ಷಣ ತಲೆಯ ಮೇಲೆ ಟೋಪಿ (cap) ಮತ್ತು ಕಣ್ಣಿಗೆ ಕಪ್ಪು ಕನ್ನಡಕ (black google) ತೊಟ್ಟ ಚಿತ್ರಣ ಕಣ್ಣಮುಂದೆ ಬರುತ್ತದೆ. ಟೋಪಿ ಮತ್ತು ಕನ್ನಡಕ ಜೊತೆ ನಾಗರಾಜ್ ಗೆ ಅವಿನಾಭಾವ ಸಂಬಂಧ ಬೆಳೆದಿದ್ದು ಹೇಗೆ? ಪ್ರಶ್ನೆಗೆ ನಾಗರಾಜ್ ಸಮಂಜಸವಾದ ಉತ್ತರವೇನೂ ನೀಡಲ್ಲ, ಆದರೆ; ಟೋಪಿ ಅಂದರೆ ಕನ್ನಡ, ಕನ್ನಡಕ ಅಂದರೆ ಕನ್ನಡ ಮತ್ತು ಇವೆರಡನ್ನು ಧರಿಸಿರೋದು ಕನ್ನಡಕ್ಕಾಗಿ ಹೋರಾಟ ಮಾಡಿಕೊಂಡು ಬಂದಿರುವ ಅದ್ಭುತವಾದ ಕನ್ನಡದ ವ್ಯಕ್ತಿ ಎಂದು ಹೇಳುತ್ತಾರೆ.

ಬೆಂಗಳೂರಲ್ಲಿ ಬೇರೆ ಭಾಷಿಕರು ದಿನೇದಿನೇ ಹೆಚ್ಚುತ್ತಿರುವುದರಿಂದ ಕನ್ನಡದ ಹೋರಾಟಗಳ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹೇಳುವ ಅವರು ಕೆಲ ಕನ್ನಡ ಪರ ಹೋರಾಟಗಾರರು ಸ್ವಾರ್ಥಕ್ಕಾಗಿ ಚಳಿವಳಿಗಳನ್ನು ಬಳಸಿಕೊಳ್ಳುತ್ತಿರಬಹುದು ಆದರೆ ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗಲಾಗಲ್ಲ, ತಮ್ಮಂಥ ಹಲವಾರು ಜನ ನಿಸ್ವಾರ್ಥ ಮನೋಭಾವದಿಂದ ಕನ್ನಡ ಜಲ-ನೆಲ-ಭಾಷೆಗಾಗಿ ಹೋರಾಟ ಮಾಡುತ್ತಿದ್ದಾರೆ ಎನ್ನುತ್ತಾರೆ. ಎಲ್ಲವೂ ತನ್ನಂತೆ ನಡೆದಿದ್ದರೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಇತ್ತು ಅಂತ ಅವರು ಯಾವ ಅರ್ಥದಲ್ಲಿ ಹೇಳಿದರು ಅನ್ನೋದು ಕನ್ನಡಿಗರಿಗೆ ಪ್ರಾಯಶಃ ಅರ್ಥವಾಗಿರಲಿಕ್ಕಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 02, 2023 05:15 PM