ಬೆಳಗಾವಿ ಅಧಿವೇಶನದ ಕರ್ತವ್ಯಕ್ಕೆ ಬಂದ ಚಾಲಕರಿಗೆ ಕಳಪೆ ಊಟ ವಿತರಣೆ ಆರೋಪ: ತೀವ್ರ ಆಕ್ರೋಶ
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಇಂದು ನಾಲ್ಕನೇ ದಿನದ ಚಳಿಗಾಲದ ಅಧಿವೇಶನ ನಡೆಯಲಿದೆ. ಆದರೆ, ಅಧಿವೇಶನದ ಕರ್ತವ್ಯಕ್ಕೆ ಬಂದಿರುವ ಚಾಲಕರಿಗೆ ಸರಿಯಾದ ಸೌಲಭ್ಯ ಕಲ್ಪಿಸದಿರುವುದು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಊಟ ಸರಿಯಿಲ್ಲವೆಂದು ಪ್ರಶ್ನಿಸಿದ್ದಕ್ಕೆ ಪೊಲೀಸರು ನಿಂದಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿ, ಡಿ.7: ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ಕರ್ತವ್ಯಕ್ಕೆ (Belagavi Session) ಆಗಮಿಸಿದ ಚಾಲಕರಿಗೆ ಸರಿಯಾದ ಸೌಲಭ್ಯ ಕಲ್ಪಿಸದಿರುವುದು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಊಟ ಸರಿಯಿಲ್ಲವೆಂದು ಪ್ರಶ್ನಿಸಿದ್ದಕ್ಕೆ ಪೊಲೀಸರು ನಿಂದಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರಿ ಕಾರು ಚಾಲಕರು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಚಾಲಕರಿಗೆ ಬೆಳಗಾವಿಯ ಸಂಗಮೇಶ್ವರನಗರದ ತರಬೇತಿ ಸಂಕೀರ್ಣದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಆದರೆ ಸೂಕ್ತ ವ್ಯವಸ್ಥೆ ಮಾಡಿಲ್ಲ, ಊಟ ನೀಡುತ್ತಿಲ್ಲ ಎಂದು ಚಾಲಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Belagavi session: ಬೆಳಗಾವಿ ಅಧಿವೇಶನಕ್ಕೆ ಮೂರನೇ ದಿನವೂ ಪ್ರತಿಭಟನೆ ಕಾವು, ರೈತರಿಂದ ಸರ್ಕಾರದ ವಿರುದ್ಧ ಆಕ್ರೋಶ
ಊಟ ಸರಿಯಿಲ್ಲವೆಂದು ಪ್ರಶ್ನಿಸಿದ್ದಕ್ಕೆ ಪೊಲೀಸರು ನಿಂದಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ ಚಾಲಕರು, ಕುಡಿಯಲು ನೀರಿಲ್ಲ, ಮೂರು ದಿನಗಳಿಂದ ಅರೆಬೆಂದ ಚಪಾತಿ ನೀಡುತ್ತಿದ್ದಾರೆ. ರೂಮ್ಗಳಿಲ್ಲದೆ ಬಾಲ್ಕನಿಯಲ್ಲಿ ಮಲಗುತ್ತಿದ್ದೇವೆ, ಶೌಚಾಲಯವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ, ಊಟ, ವಸತಿ ಕಲ್ಪಿಸದಿದ್ದರೆ ಕೆಲಸ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರ, ಪೊಲೀಸರ ವಿರುದ್ಧ ಚಾಲಕರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:06 am, Thu, 7 December 23