ಆಗಸ್ಟ್‌ ಮೊದಲ ವಾರದಲ್ಲಿ ರಾಜ್ಯದ ಮೊದಲ ‘ಭಾರತ್‌ ಗೌರವ್‌ ರೈಲು ಯಾತ್ರೆ ಪ್ರಾರಂಭ

ಆಗಸ್ಟ್‌ ಮೊದಲ ವಾರದಲ್ಲಿ ರಾಜ್ಯದ ಮೊದಲ ‘ಭಾರತ್‌ ಗೌರವ್‌ ರೈಲು ಬೆಂಗಳೂರು-ಕಾಶಿ ನಡುವೆ ಸಂಚಾರ ಆರಂಭಿಸಲಿದೆ. ಧಾರ್ಮಿಕ ದತ್ತಿ ಇಲಾಖೆ ಮಾಲಿಕತ್ವದಲ್ಲಿ ಸಂಚರಿಸಲಿದ್ದು, ಯಾತ್ರಾರ್ಥಿಗಳು ಕಡಿಮೆ ಖರ್ಚಿನಲ್ಲಿ ಕಾಶಿಯಾತ್ರೆ ಕೈಗೊಳ್ಳಬಹುದಾಗಿದೆ.

ಆಗಸ್ಟ್‌ ಮೊದಲ ವಾರದಲ್ಲಿ ರಾಜ್ಯದ ಮೊದಲ ‘ಭಾರತ್‌ ಗೌರವ್‌ ರೈಲು ಯಾತ್ರೆ ಪ್ರಾರಂಭ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on: Jun 09, 2022 | 9:00 AM

ಬೆಂಗಳೂರು: ಆಗಸ್ಟ್‌ ಮೊದಲ ವಾರದಲ್ಲಿ ರಾಜ್ಯದ ಮೊದಲ ‘ಭಾರತ್‌ ಗೌರವ್‌ ರೈಲು (Bharat Gaurav Railway) ಬೆಂಗಳೂರು-ಕಾಶಿ (Bengaluru-Kashi) ನಡುವೆ ಸಂಚಾರ ಆರಂಭಿಸಲಿದೆ. ಧಾರ್ಮಿಕ ದತ್ತಿ ಇಲಾಖೆ ಮಾಲಿಕತ್ವದಲ್ಲಿ ಸಂಚರಿಸಲಿದ್ದು, ಯಾತ್ರಾರ್ಥಿಗಳು ಕಡಿಮೆ ಖರ್ಚಿನಲ್ಲಿ ಕಾಶಿಯಾತ್ರೆ ಕೈಗೊಳ್ಳಬಹುದಾಗಿದೆ. ವಿಶೇಷವೆಂದರೆ ಈ ಯಾತ್ರೆಗೆ ರಾಜ್ಯ ಸರಕಾರ ಯಾತ್ರಾರ್ಥಿಗಳಿಗೆ ಬಜೆಟ್‌ನಲ್ಲಿ ತಲಾ .5 ಸಾವಿರ ಸಹಾಯಧನ ನೀಡುವ ಯೋಜನೆಯನ್ನು ಘೋಷಿಸಿದೆ.

ಕೇಂದ್ರ ಸರ್ಕಾರದ ‘ಭಾರತ್‌ ಗೌರವ್‌ ರೈಲು’ ಯೋಜನೆಯನ್ನು ಬಳಸಿಕೊಂಡು ಧಾರ್ಮಿಕ ದತ್ತಿ ಇಲಾಖೆ ಕಾಶಿಯಾತ್ರೆ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಿದೆ. ಇದಕ್ಕಾಗಿ ಕಳೆದ ವಾರ ನೈಋುತ್ಯ ರೈಲ್ವೆಯಲ್ಲಿ ನೋಂದಣಿ ಮಾಡಿಕೊಂಡಿತ್ತು. ಸದ್ಯ ಎರಡೂ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿ ರೈಲು ಬೋಗಿಗಳು, ಆಂತರಿಕ ಸೌಲಭ್ಯಗಳು, ವೇಳಾಪಟ್ಟಿ, ಮಾರ್ಗ, ಓಡಾಟ ವೆಚ್ಚದ ಕುರಿತು ಚರ್ಚಿಸಿದ್ದು ಯೋಜನೆ ಮೊದಲ ಪ್ರವಾಸವನ್ನು ಆಗಸ್ಟ್‌ ಮೊದಲ ವಾರ ಕೈಗೊಳ್ಳಲು ನಿರ್ಧರಿಸಲಾಗಿದೆ.

ಇದನ್ನು ಓದಿ: ಯಾವುದೇ ಧರ್ಮ ಅಷ್ಟು ದುರ್ಬಲವಾಗಿಲ್ಲ; ಅಲ್ ಖೈದಾ ಬೆದರಿಕೆ ಖಂಡಿಸಿದ ಶಿವಸೇನಾ ಸಂಸದೆ

ಏಳು ದಿನಗಳ ಪ್ರವಾಸ ಇದಾಗಿದ್ದು, ಕಾಶಿ, ಅಯೋಧ್ಯೆ ಹಾಗೂ ಪ್ರಯಾಗ ಧಾರ್ಮಿಕ ಸ್ಥಳಗಳ ದರ್ಶನ ಒಳಗೊಂಡಿದೆ. ರೈಲ್ವೆ ನಿಲ್ದಾಣ ಬಳಿಕ ಯಾತ್ರಿ ಸ್ಥಳಗಳಲ್ಲಿ ಆಹಾರ, ವಸತಿ ಮತ್ತು ಸ್ಥಳೀಯ ಸಾರಿಗೆ ಅಗತ್ಯಗಳನ್ನು ಐಆರ್‌ಸಿಟಿಸಿ ನೋಡಿಕೊಳ್ಳಲಿದೆ. ಕಾಶಿಯಾತ್ರೆ ಯೋಜನೆ ಅರ್ಹ ಫಲಾನುಭವಿಗಳು ಮತ್ತು ಇತರೆ ಯಾತ್ರಿಗಳ ನೋಂದಣಿ ಪ್ರಕ್ರಿಯೆ ಧಾರ್ಮಿಕ ದತ್ತಿ ಇಲಾಖೆ ಶೀಘ್ರದಲ್ಲಿಯೇ ಆರಂಭಿಸುವ ಸಾಧ್ಯತೆಗಳಿವೆ. ದೇಗುಲ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಪ್ರಧಾನಿ ಮೋದಿಯವರ ‘ದಿವ್ಯ ಕಾಶಿ, ಭವ್ಯ ಕಾಶಿ’ ಅಭಿಯಾನವನ್ನು ಉತ್ತೇಜಿಸಲು ಕರ್ನಾಟಕದ ಜನರಿಗೆ ಈ ವಿಶೇಷ ರೈಲು ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ

ಇದನ್ನು ಓದಿ: ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ: ಪಿಣರಾಯಿ ವಿಜಯನ್ ಮೇಲೆ ಸ್ವಪ್ನಾ ಸುರೇಶ್ ಗಂಭೀರ ಆರೋಪ

ಭಾರತ್ ಗೌರವ್ ಯೋಜನೆಯನ್ನು ರೈಲ್ವೇ ಸಚಿವಾಲಯವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ಸ್ಥಳಗಳನ್ನು ಪ್ರದರ್ಶಿಸಲು ರಾಜ್ಯ ಸರ್ಕಾರ ಅಥವಾ ಖಾಸಗಿ ಪಕ್ಷಗಳು ನಿರ್ವಹಿಸುವ ರೈಲುಗಳೊಂದಿಗೆ ಜಾರಿಗೆ ತಂದಿದೆ ಮತ್ತು ಅವರು ಮಾಲೀಕತ್ವವನ್ನು ತೆಗೆದುಕೊಳ್ಳುತ್ತಾರೆ ಮತ್ತು ಪ್ರವಾಸವನ್ನು ಅಂತಿಮಗೊಳಿಸುತ್ತಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ