ಅಂಗನವಾಡಿ ಕೇಂದ್ರ ಪುನರಾರಂಭ: ರಾಜ್ಯ ಸರ್ಕಾರದಿಂದ ಆದೇಶ, ಕೊರೊನಾ ಮಾರ್ಗಸೂಚಿ ಅನ್ವಯ

ಸುಪ್ರೀಂ ಕೋರ್ಟ್​ ಆದೇಶದಂತೆ ಕೊವಿಡ್​ನಿಂದಾಗಿ ಬಂದ್​ ಮಾಡಲಾಗಿದ್ದ ಅಂಗನವಾಡಿ ಆರಂಭಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

  • TV9 Web Team
  • Published On - 10:36 AM, 8 Feb 2021
ಅಂಗನವಾಡಿ ಕೇಂದ್ರ ಪುನರಾರಂಭ: ರಾಜ್ಯ ಸರ್ಕಾರದಿಂದ ಆದೇಶ, ಕೊರೊನಾ ಮಾರ್ಗಸೂಚಿ ಅನ್ವಯ
ಅಂಗನವಾಡಿ ಕೇಂದ್ರ

ಬೆಂಗಳೂರು: ಸುಪ್ರೀಂ ಕೋರ್ಟ್​ ಆದೇಶದಂತೆ ಕೊವಿಡ್​ನಿಂದಾಗಿ ಬಂದ್​ ಮಾಡಲಾಗಿದ್ದ ಅಂಗನವಾಡಿ ಮರು ಆರಂಭಕ್ಕೆ ರಾಜ್ಯ ಸರ್ಕಾರ  ನಿರ್ಧರಿಸಿದೆ. ಈ ಕುರಿತಂತೆ ಗ್ರಾಮ ಪಂಚಾಯತಿ ಮೂಲಕ ಅಂಗನವಾಡಿ ಕೇಂದ್ರಗಳನ್ನು ಸ್ಯಾನಿಟೈಸ್​ ಮಾಡುವಂತೆ ಮಾರ್ಗಸೂಚಿ ಹೊರಡಿಸಿದೆ.

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಕೊರೊನಾ ಟೆಸ್ಟ್ ಮಾಡಿಸುವುದು, ಅಂಗನವಾಡಿ ಕೇಂದ್ರದ ಆವರಣವನ್ನು, ಶೌಚಾಲಯ ಹಾಗೂ ಪೀಠೋಪಕರಣ ಸ್ವಚ್ಛಗೊಳಿಸುವುದು, 3-6 ವರ್ಷದ ಮಕ್ಕಳಿಗೆ ಮಧ್ಯಾಹ್ನ 12ರವರೆಗೆ ಚಟುವಟಿಕೆ, 3 ವರ್ಷದೊಳಗಿನ ಮಕ್ಕಳು, ಗರ್ಭಿಣಿ, ಬಾಣಂತಿಯರು ಅಂಗನವಾಡಿ ಒಳಗೆ ಭೇಟಿ ನೀಡದಂತೆ ನೋಡಿಕೊಳ್ಳುವುದು, ಕನಿಷ್ಠ 5 ಮಕ್ಕಳು ಹಾಜರಾಗುವಂತೆ ನೋಡಿಕೊಳ್ಳುವುದು, ಮಕ್ಕಳಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯ, ಹಾಗೂ ಎಲ್ಲ ಮಕ್ಕಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ರಾಜ್ಯ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಈ ಕುರಿತಂತೆ, ಮಕ್ಕಳು ದೈಹಿಕ ಅಂತರ ಪಾಲಿಸುವಂತೆ ನೋಡಿಕೊಳ್ಳವುದು, ಮಕ್ಕಳಲ್ಲಿ ಕೆಮ್ಮು, ಜ್ವರ, ಗಂಟಲು ನೋವಿನ ಲಕ್ಷಣ ಇದ್ದರೆ ಹತ್ತಿರದ ಸರ್ಕಾರಿ ವೈದ್ಯರಿಗೆ ತೋರಿಸುವುದು, ತಾಂತ್ರಿಕ ಸಲಹಾ ಸಮಿತಿ ಮಾರ್ಗಸೂಚಿ ಪರಿಶೀಲಿಸುವುದು ಈ ರೀತಿಯ ಕೆಲ ನಿಯಮಗಳ ಕುರಿತು ಸರ್ಕಾರ ಆದೇಶ ಹೊರಡಿಸಿದೆ.

ಓದು ಮಗು ಓದು: ಹೀಗಿದೆ ಮಕ್ಕಳ ಪುಸ್ತಕಗಳ ವ್ಯಾಪಾರ ವಹಿವಾಟು…