ಲಸಿಕೆ ಹಾಕಿಸಿಕೊಳ್ಳದಿದ್ದರೂ ಲಸಿಕೆ ಪಡೆದಿರುವ ಸಂದೇಶ; ಆರೋಗ್ಯ ಇಲಾಖೆಯ ವಿರುದ್ಧ ಸಾರ್ವಜನಿಕರ ಅಸಮಾಧಾನ

|

Updated on: May 07, 2021 | 11:34 AM

ಲಸಿಕೆ ಪಡೆಯದಿದ್ದರೂ ಲಸಿಕೆ ಪಡೆದಿರುವಂತೆ ದೇವನಕಳ್ಳ ನಿವಾಸಿ ವೇಣುಗೋಪಾಲ್​ ಅವರಿಗೆ ಆರೋಗ್ಯ ಇಲಾಖೆಯಿಂದ ಸಂದೇಶ ಬಂದಿದೆ. ಲಸಿಕೆ ಸ್ಟಾಕ್ ಇಲ್ಲದೇ ಇದ್ದರೂ ಲಸಿಕೆ ಹಾಕಿದ್ದೇವೆ ಎಂದು ಸರ್ಕಾರಕ್ಕೆ ಲೆಕ್ಕ ಕೊಡಲು ಈ ರೀತಿ ಮಾಡಲಾಗುತ್ತಿದೆಯಾ? ಎಂದು ಇಲಾಖೆಯ ವಿರುದ್ಧ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಲಸಿಕೆ ಹಾಕಿಸಿಕೊಳ್ಳದಿದ್ದರೂ ಲಸಿಕೆ ಪಡೆದಿರುವ ಸಂದೇಶ; ಆರೋಗ್ಯ ಇಲಾಖೆಯ ವಿರುದ್ಧ ಸಾರ್ವಜನಿಕರ ಅಸಮಾಧಾನ
ಪ್ರಾತಿನಿಧಿಕ ಚಿತ್ರ
Follow us on

ದೇವನಹಳ್ಳಿ: ಲಸಿಕೆ ಹಾಕಿಸಿಕೊಳ್ಳದಿದ್ದರೂ, ಲಸಿಕೆ ಪಡೆದಿದ್ದೀರಿ ಎಂದು ಆರೋಗ್ಯ ಇಲಾಖೆ ಸಂದೇಶ ರವಾನೆ ಮಾಡಿದೆ ಎಂಬ ಆರೋಪ ಇದೀಗ ಕೇಳಿ ಬಂದಿದೆ. ಲಸಿಕೆ ಪಡೆಯಲು ಆನ್​ಲೈನ್​ ರಿಜಿಸ್ಟರ್​ ಮಾಡಿದ್ದರು. ಆ ದಿನ ಲಸಿಕೆ ಖಾಲಿ ಆಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿತ್ತು. ಹಾಗಾಗಿ ಮರುದಿನ ಲಸಿಕೆ ಪಡೆಯಬೇಕು ಅನ್ನುವಷ್ಟರಲ್ಲಿ, ವ್ಯಕ್ತಿಯ ಮೊಬೈಲ್​ಗೆ ಆರೋಗ್ಯ ಇಲಾಖೆಯಿಂದ ಸಂದೇಶವೊಂದು ಬಂದಿದೆ. ಲಸಿಕೆ ಮಡೆಯುವುದಕ್ಕೂ ಮುನ್ನವೇ ಲಸಿಕೆ ಪಡೆದಿರುವ ಸಂದೇಶ ನೋಡಿದ ವ್ಯಕ್ತಿ ವಂಚನೆ ಆರೋಪ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ನಿವಾಸಿ ವೇಣುಗೋಪಾಲ್ (44) ಎಂಬುವವರು ಲಸಿಕೆ ಪಡೆಯಲು ರಿಜಿಸ್ಟರ್ ಮಾಡಿಸಿಕೊಂಡಿದ್ದರು. ಹೀಗಾಗಿ ನಿನ್ನೆ ಬಿದಲೂರು ಆಸ್ಪತ್ರೆಯಲ್ಲಿ ಲಸಿಕೆ ತೆಗೆದುಕೊಳ್ಳಬೇಕಿತ್ತು. ಆಸ್ಪತ್ರೆ ಸಿಬ್ಬಂದಿಗೆ ಪೋನ್ ಮಾಡಿದಾಗ ಲಸಿಕೆ ಸ್ಟಾಕ್ ಇಲ್ಲ ಎನ್ನುವ ಮಾಹಿತಿ ತಿಳಿದು ಬಂದಿತ್ತು. ಹೀಗಾಗಿ ಇಂದು ಲಸಿಕೆ ತೆಗೆದುಕೊಳ್ಳೋಣ ಎಂದು ವೇಣುಗೋಪಾಲ್ ನಿರ್ಧರಿಸಿದ್ದರು. ಆದರೆ ನಿನ್ನೆ ಸಂಜೆಯೇ ನೀವು ಯಶಸ್ವಿಯಾಗಿ ಲಸಿಕೆ ಹಾಕಿಸಿಕೊಂಡಿದ್ದೀರಿ ಎಂದು ಆರೋಗ್ಯ ಇಲಾಖೆಯಿಂದ ಸಂದೇಶ ಬಂದಿದೆ.

ಈಗಾಗಲೇ ಮೇ ತಿಂಗಳಿನಿಂದ 18 ರಿಂದ 45 ವರ್ಷದವರೆಗೆ ಕೊರೊನಾ ಲಸಿಕೆ ಪ್ರಾರಂಭ ಮಾಡಲಾಗಿದೆ. ರಿಜಿಸ್ಟರ್ ಮಾಡಿಕೊಂಡಿದ್ದ ವ್ಯಕ್ತಿಗಳಿಗೆ ಲಸಿಕೆ ಪಡೆದುಕೊಳ್ಳದೇ ಇದ್ದರು ಲಸಿಕೆ ಪಡೆದುಕೊಂಡಿರೋ ಸಂದೇಶವನ್ನು ಆರೋಗ್ಯ ಇಲಾಖೆ ಕಳುಹಿಸುತ್ತಿದೆ. ಲಸಿಕೆ ಸ್ಟಾಕ್ ಇಲ್ಲದೇ ಇದ್ದರೂ ಲಸಿಕೆ ಹಾಕಿದ್ದೇವೆ ಎಂದು ಸರ್ಕಾರಕ್ಕೆ ಲೆಕ್ಕ ಕೊಡಲು ಈ ರೀತಿ ಮಾಡಲಾಗುತ್ತಿದೆಯಾ? ಎಂದು ಇಲಾಖೆಯ ವಿರುದ್ಧ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Explainer: ಲಸಿಕೆಗೆ ಬೇಡಿಕೆ ಹೆಚ್ಚು, ಪೂರೈಕೆಗೆ ಹಲವು ಸಮಸ್ಯೆ; ಉತ್ಪಾದನೆ ಹೆಚ್ಚಿಸಲು ಸರ್ಕಾರದ ಮುಂದಿರುವ ಆಯ್ಕೆಗಳೇನು?