ಹಾಸನ: ರಾಜ್ಯದ 8 ನಗರಗಳಲ್ಲಿ ಕೊರೊನಾ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಈ ನಿಟ್ಟಿನಲ್ಲಿ ಪಾರ್ಟಿ ಮಾಡಲು ಪಾರ್ಟಿ ಪ್ರಿಯರು ಹಾಸನದತ್ತ ಮುಖ ಮಾಡಿದ್ದಾರೆ. ಆಲೂರು ತಾಲೂಕಿನ ಹೊಂಕರವಳ್ಳಿ ಬಳಿಯ ಎಸ್ಟೇಟ್‌ನಲ್ಲಿ ನೈಟ್ ರೇವ್ ಪಾರ್ಟಿ ಮಾಡಲು ಹೋಗಿದ್ದ 150 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊವಿಡ್ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಎಸ್ಟೇಟ್ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರು, ಮಂಗಳೂರು ನಗರಗಳಲ್ಲಿ ನೈಟ್ ಕರ್ಫ್ಯೂ ಇರುವುದರಿಂದ ರಾತ್ರಿ ಪಾರ್ಟಿ ಮಾಡಲು ಜನರು ಹಾಸನಕ್ಕೆ ತೆರಳಿದ್ದಾರೆ. ರಾತ್ರಿ ಎಸ್ಪಿ ನೇತೃತ್ವದಲ್ಲಿ ದಾಳಿ ಮಾಡಿ ಮೋಜು ಮಸ್ತಿಯಲ್ಲಿ ತೊಡಗಿದ್ದ 150 ಕ್ಕೂ ಹೆಚ್ಚು ಯುವಕ ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಡು ರಾತ್ರಿ ಎಸ್ಪಿ ಶ್ರೀನಿವಾಸಗೌಡ ನೇತೃತ್ವದಲ್ಲಿ ದಾಳಿ ನಡೆದಿದ್ದು ಎಸ್ಟೇಟ್ ಮಾಲೀಕರ ವಿರುದ್ಧ ಕೇಸ್ ದಾಖಲಾಗಿದೆ. ಕೊರೊನಾ ನಿಯಮ ಉಲ್ಲಂಘನೆ ಜೊತೆಗೆ ಅಕ್ರಮವಾಗಿ ರೇವ್ ಪಾರ್ಟಿ ಆಯೋಜನೆ ಆರೋಪ ಕೇಳಿ ಬಂದಿದೆ.
ನಿನ್ನೆಯಿಂದ ಕರ್ಫ್ಯೂ: ರಸ್ತೆಗಳು ನಿರ್ಜನ, ಬೇಕಾಬಿಟ್ಟಿ ದಾರಿಗಿಳಿದವರಿಗೆ ಪೋಲಿಸರಿಂದ ಕ್ಲಾಸ್
ರಾಜ್ಯ ಸರ್ಕಾರ ನಿನ್ನೆಯಿಂದ 20 ನೇ ತಾರೀಕಿನವರೆಗೆ ಹೇರಿರುವ ರಾತ್ರಿ ಕರ್ಫ್ಯೂ ಅನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಲು ಪೊಲೀಸರು ಪ್ರಯಾಸ ಪಡುತ್ತಿದ್ದಾರೆ. ಸರ್ಕಾರದ ಘೋಷಣೆ ಹೊರತಾಗಿಯೂ ಕೆಲ ಜನ ಹೊರಗಡೆ ತಿರುಗುವ ಪ್ರಯತ್ನ ಮಾಡುತ್ತಿರುವುದು ಬೆಂಗಳೂರು ಮತ್ತು ಇತರ ಕಡೆಗಳಿಂದ ವರದಿಯಾಗುತ್ತಿದೆ.
ಬೆಂಗಳೂರು ನಗರದಲ್ಲಿ ಪ್ರಮುಖ ರಸ್ತೆಗಳನ್ನು ಪೊಲೀಸರ ಮುಚ್ಚಿ ಗಸ್ತು ತಿರುಗುತ್ತಿದ್ದಾರೆ. ಎಂ.ಜಿ.ರಸ್ತೆಯಲ್ಲಿ ಕ್ಯಾಬ್ಗಾಗಿ ಕಾಯುತ್ತಿರುವ ಜನ ಕಂಡುಬಂದಿದ್ದಾರೆ. ಬುಕ್ ಮಾಡಿದರೂ ಕ್ಯಾಬ್ಗಳು ಸಕಾಲಕ್ಕೆ ಬಾರದೆ ಪರದಾಡುತ್ತಿದ್ದಾರೆ. ಬೇಗ ಜಾಗ ಖಾಲಿ ಮಾಡುವಂತೆ ಪೊಲೀಸರು ಒತ್ತಾಯಿಸುವಂತ ದೃಶ್ಯಗಳನ್ನು ಮೊದಲ ದಿನದ ನೈಟ್ ಕರ್ಫೂ ವೇಳೆ ಗಮನಿಸಿದ್ದೇವೆ. ಇನ್ನು, ಬೆಂಗಳೂರು ನಗರದ ಎಲ್ಲಾ 47 ಫ್ಲೈಓವರ್‌ಗಳನ್ನು ಬಂದ್ ಮಾಡಲಾಗಿದೆ.
ಇದನ್ನೂ ಓದಿ: ಕೊರೊನಾ ನೈಟ್ ಕರ್ಫ್ಯೂ ಜಾರಿ; ಪೊಲೀಸ್ ಅಧಿಕಾರಿಗಳ ಜೊತೆ ಇಂದು ಕಮಲ್ ಪಂತ್ ಸಭೆ
ಮಿತಿಮೀರಿದ ಕೊರೊನಾ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೈಟ್ ಕರ್ಫ್ಯೂ ಜಾರಿ