ಜಿಲ್ಲೆಯಲ್ಲಿ 105 ಗಣಿಗಳಿವೆ.. ಸುಮಲತಾಗೆ ಅಧಿಕಾರಿ ಪದ್ಮಜಾರಿಂದ ಮಾಹಿತಿ

| Updated By: ಆಯೇಷಾ ಬಾನು

Updated on: Jul 08, 2021 | 9:29 AM

ನಿನ್ನೆ ಸುಮಲತಾ ಮಂಡ್ಯ ಜಿಲ್ಲೆ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಗಣಿ & ಭೂವಿಜ್ಞಾನ ಇಲಾಖೆ ಅಧಿಕಾರಿ ಪದ್ಮಜಾ ಬಳಿ ಮಾಹಿತಿ ಕಲೆ ಹಾಕಿದ್ದಾರೆ. ಅಧಿಕಾರಿಗಳ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 105 ಗಣಿಗಳಿವೆ.

ಜಿಲ್ಲೆಯಲ್ಲಿ 105 ಗಣಿಗಳಿವೆ.. ಸುಮಲತಾಗೆ ಅಧಿಕಾರಿ ಪದ್ಮಜಾರಿಂದ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಮಂಡ್ಯ: ಕಳೆದ ಕೆಲವು ದಿನಗಳಿಂದ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಂಡ್ಯ ಸಂಸದೆ ಸುಮಲತಾ ನಡುವಿನ ಮಾತಿನ ಮಲ್ಲ ಯುದ್ಧ ನಡೆಯುತ್ತಲೇ ಇದೆ. ನಿನ್ನೆ ಸುಮಲತಾ ಮಂಡ್ಯ ಜಿಲ್ಲೆ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಗಣಿ & ಭೂವಿಜ್ಞಾನ ಇಲಾಖೆ ಅಧಿಕಾರಿ ಪದ್ಮಜಾ ಬಳಿ ಮಾಹಿತಿ ಕಲೆ ಹಾಕಿದ್ದಾರೆ. ಅಧಿಕಾರಿಗಳ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 105 ಗಣಿಗಳಿವೆ. 57 ಬಿ ಫಾರ್ಮ್ ಹೊಂದಿರುವ ಕ್ರಷರ್‌ಗಳು, 68 ಸಿ ಫಾರ್ಮ್ ಹೊಂದಿರುವ ಕ್ರಷರ್‌ಗಳು, ಬೇಬಿ ಬೆಟ್ಟದಲ್ಲಿ 2 ಗಣಿಗಾರಿಕೆ ನಡೆಯುತ್ತಿದೆ. 23 ಕ್ರಷರ್‌ಗಳು ಸಿ ಫಾರ್ಮ್ ಹೊಂದಿವೆ. 2 ಕಡೆ ಚೆಕ್‌ಪೋಸ್ಟ್ ಮಾಡಲಾಗಿದ್ದು ನಿಗಾವಹಿಸಲಾಗಿದೆ. 2 ತಿಂಗಳಲ್ಲಿ 85 ವಾಹನ ಸೀಜ್ ಮಾಡಿ ₹25 ಲಕ್ಷ ದಂಡ ಹಾಕಲಾಗಿದೆ ಎಂದ ಗಣಿ & ಭೂವಿಜ್ಞಾನ ಇಲಾಖೆ ಅಧಿಕಾರಿ ಪದ್ಮಜಾ ಮಾಹಿತಿ ನೀಡಿದ್ದಾರೆ.

ಇನ್ನು ನಿನ್ನೆ ಮಂಡ್ಯ ಸಂಸದೆ ಸುಮಲತಾ ಗಣಿಗಾರಿಕೆ ನಡೀತಿರೋ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಈ ವಾಕ್ಸಮರ ಕೊನೆಗೊಳ್ಳಬಹುದು ಅಂತಾ ಎಲ್ಲರೂ ತಿಳಿದಿದ್ರು. ಆದ್ರೆ, ಸುಮಲತಾ ಭೇಟಿ ಬಳಿಕ ಇಬ್ಬರ ನಡುವಿನ ಕದನ ಮತ್ತಷ್ಟ ತಾರಕಕ್ಕೇರೋ ಲಕ್ಷಣಗಳು ಕಂಡು ಬರ್ತಿದೆ. ನಿನ್ನೆ ಸುಮಲತಾ ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ಹಲವು ಹೈಡ್ರಾಮಾಗಳು ನಡೆದು ಹೋಗಿವೆ.

ಬೇಬಿ ಬೆಟ್ಟಕ್ಕೆ ಭೇಟಿ ನೀಡಲೇ ಇಲ್ಲ ಸಂಸದೆ ಸುಮಲತಾ!
ಕೆಆರ್ಎಸ್ ಡ್ಯಾಂನಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದಕ್ಕೆ ಬೇಬಿ ಬೆಟ್ಟದಲ್ಲಿ ನಡೀತಿರೋ ಗಣಿಗಾರಿಕೆಯೇ ಕಾರಣ. ಮಂಡ್ಯ ಜಿಲ್ಲೆಯಲ್ಲಿ ಗಣಿಗಳು ಹೆಚ್ಚಿವೆ. ಜೊತೆಗೆ ಕ್ರಷರ್ಗಳು ಸಹ ಹೆಚ್ಚಾಗಿವೆ. ಇದೇ ಕಾರಣಕ್ಕೆ ಕೆಆರ್ಎಸ್ ಡ್ಯಾಂ ಮೇಲೆ ಒತ್ತಡ ಹೆಚ್ಚಾಗಿ ಬಿರುಕು ಕಾಣಿಸಿಕೊಂಡಿದೆ ಅಂತಾ ಸಂಸದೆ ಸುಮಲತಾ ಆರೋಪಿಸಿದ್ರು. ಯಾವಾಗ ಸುಮಲತಾ ಹೀಗೆ ಆರೋಪಿಸಿದ್ರೋ.. ಅದಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭರ್ಜರಿ ತಿರುಗೇಟು ನೀಡಿದ್ರು. ಅಲ್ದೆ, ಸಂಸದೆಯನ್ನ ಟೀಕಿಸೋ ಭರದಲ್ಲಿ ಅವರು ನೀಡಿದ್ದ ಹೇಳಿಕೆ ರಾಜ್ಯ ರಾಜಕಾರಣದಲ್ಲಿ.. ಅದ್ರಲ್ಲೂ ಮಂಡ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದಾದ ಬಳಿಕ ಮಂಡ್ಯ ಜಿಲ್ಲೆಯಲ್ಲಿ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ಕೊಡ್ತೀನಿ ಅಂತಾ ಸಂಸದೆ ಸುಮಲತಾ ಹೇಳಿದ್ರು. ಇದರಂತೆ ನಿನ್ನೆ ಮಂಡ್ಯದಲ್ಲಿ ಗಣಿಗಾರಿಕೆ ನಡೀತಿದ್ದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ್ರು. ಆದ್ರೆ, ಕೆಆರ್ಎಸ್ ಡ್ಯಾಂಗೆ ಮಾರಕವಾಗಿರೋ ಬೇಬಿ ಬೆಟ್ಟಕ್ಕೆ ಮಾತ್ರ ಸುಮಲತಾ ಹೋಗಲೇ ಇಲ್ಲ.

ಮಂಡ್ಯ ಜಿಲ್ಲೆಯ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಂಸದೆ ಸುಮಲತಾ ಮೊದಲಿಗೆ ಚೆನ್ನನಕೆರೆಗೆ ಭೇಟಿ ನೀಡಿದ್ರು. ಸುಮಾರು 4 ಗಂಟೆ ವೇಳೆಗೆ ಚೆನ್ನನಕೆರೆ ಗ್ರಾಮದ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿದ್ರು. ಸಂಸದೆ ಸುಮಲತಾ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡ್ತಾರೆ ಅಂತಾ ಗೊತ್ತಾದ ತಕ್ಷಣ. ಗಣಿ ಮಾಲೀಕರು ತಮ್ಮ ಗಣಿಗಳಿಗೆ ಪ್ರವೇಶಿಸದಂತೆ ತಡೆಯಲು ಗಣಿಗಳಿಗೆ ಹೋಗೋ ರಸ್ತೆಗಳಲ್ಲಿ ತಡೆಯೊಡ್ಡಿದ್ರು. ದಾರಿಗಳಿಗೆ ಮಣ್ಣು ಸುರಿದು ತಮ್ಮ ಗಣಿ ಪ್ರದೇಶಗಳಿಗೆ ಸುಮಲತಾ ರೇಡ್ ಮಾಡದಂತೆ ತಡೆಯೊಡ್ಡಿದ್ರು. ಇದಕ್ಕೂ ಮೊದಲು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಲು ತೆರಳುತ್ತಿದ್ದ ಸುಮಲತಾರನ್ನ ತಡೆದ ಚೆನ್ನನಕೆರೆ ಗ್ರಾಮಸ್ಥರು ತಮ್ಮ ಗ್ರಾಮದ ನೀರಿನ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ರು.

ಚೆನ್ನನಕೆರೆಯಲ್ಲಿನ ಗಣಿಗಾರಿಕೆ ಪ್ರದೇಶಗಳನ್ನ ವೀಕ್ಷಿಸಿದ ಬಳಿಕ ಹಂಗರಹಳ್ಳಿಯಲ್ಲಿ ಗಣಿಗಾರಿಕೆ ನಡೀತಿದ್ದ ಪ್ರದೇಶಗಳಿಗೆ ಭೇಟಿ ನೀಡಿದ್ರು. ಸುಮಾರು 6 ಗಂಟೆ ವೇಳೆಗೆ ಹಂಗರಹಳ್ಳಿಗೆ ಆಗಮಿಸಿದ ಸುಮಲತಾರಿಗೆ ಇಲ್ಲೂ ಸಹ ಸುಗಮವಾಗಿ ಗಣಿ ವೀಕ್ಷಣೆ ಮಾಡಲು ಆಗಲಿಲ್ಲ. ಹಂಗರಹಳ್ಳಿಯ ಗಣಿಗಾರಿಕೆ ಪ್ರದೇಶಕ್ಕೆ ತಮ್ಮ ವಾಹನದಲ್ಲಿ ತೆರಳಲು ಸಾಧ್ಯವಾಗ್ತಿರಲಿಲ್ಲ. ಇದೇ ಕಾರಣಕ್ಕೆ ಪೊಲೀಸ್ ಜೀಪ್ನಲ್ಲಿ ಗಣಿಗಾರಿಕೆ ಪ್ರದೇಶಗಳ ವೀಕ್ಷಣೆಗೆ ತೆರಳಿದ್ರು. ಹಂಗರಹಳ್ಳಿಯಲ್ಲಿ ಭಾರಿ ಹೈಡ್ರಾಮಾ ನಡೀತು. ಸಂಸದೆ ಸುಮಲತಾ ಕೇವಲ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತು ಅವರ ಬೆಂಬಲಿಗರು ಗಣಿಗಾರಿಕೆ ನಡೆಸ್ತಿರೋ ಪ್ರದೇಶಗಳಿಗೆ ಮಾತ್ರ ಭೇಟಿ ನೀಡ್ತಿದ್ದಾರೆ. ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಕ್ವಾರಿಗಳಿಗೂ ಭೇಟಿ ನೀಡಿ ಅಂತಾ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು, ಸುಮಲತಾ ಕಾರಿಗೆ ಅಡ್ಡ ನಿಂತಿದ್ರು. ಬಳಿಕ ಒತ್ತಾಯಕ್ಕೆ ಮಣಿದು ರಮೇಶ್ ಬಂಡಿಸಿದ್ದೇಗೌಡ ಕ್ವಾರಿಗಳಿಗೂ ಭೇಟಿ ನೀಡಿದ್ರು.

ಚೆನ್ನನಕೆರೆ, ಹಂಗರಹಳ್ಳಿಯ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿದ್ರೂ ಕೆಆರ್ಎಸ್ ಡ್ಯಾಂಗೆ ಕಂಟಕ ತಂದಿರೋ ಬೇಬಿ ಬೆಟ್ಟದ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಲು ಸಂಸದೆ ಸುಮಲತಾಗೆ ಸಾಧ್ಯವಾಗಲೇ ಇಲ್ಲ. ಹಂಗರಹಳ್ಳಿಯಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಸೃಷ್ಟಿಸಿದ ಅಡ್ಡಿ-ಆತಂಕದಿಂದ ಬೇಬಿ ಬೆಟ್ಟಕ್ಕೆ ತೆರಳಿದ್ರೆ ಗಲಾಟೆಯಾಗೋ ಅವಕಾಶ ಇದೆ ಅನ್ನೋ ಕಾರಣಕ್ಕೆ, ಬೇಬಿ ಬೆಟ್ಟ ಭೇಟಿಯನ್ನ ರದ್ದುಗೊಳಿಸಿದ್ರು.

ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಸುಮಲತಾ ಸೋಲಿಸಲು ಹೆಚ್​ಡಿ ಕುಮಾರಸ್ವಾಮಿ ಶಪಥ.. ಇದಕ್ಕೆ ಸುಮಲತಾ ಕೌಂಟರ್ ಪ್ಲಾನ್ ಏನು?