ಬೆಂಗಳೂರು, ಅಕ್ಟೋಬರ್ 09: ಆಂಬ್ಯುಲೆನ್ಸ್ಗೆ (ambulance) ದಾರಿ ಬಿಟ್ಟಾಗ ಚಲನ್ ಆದರೆ ಅವರ ಟ್ರಾಫಿಕ್ ಫೈನ್ ಮನ್ನಾ ಮಾಡುತ್ತೇವೆ ಎಂದು ಸಂಚಾರ ವಿಭಾಗ ಜಂಟಿ ಆಯುಕ್ತ ಎಂ.ಎನ್ ಅನುಚೇತ್ ಹೇಳಿದ್ದಾರೆ. ನಗರದಲ್ಲಿ ಸಂಚಾರ ವ್ಯವಸ್ಥೆ ನಿಯಂತ್ರಣಕ್ಕೆ ಎಐ ಬಳಕೆ ಹಿನ್ನಲೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹಾಗೂ ಸಂಚಾರ ಜಂಟಿ ಆಯುಕ್ತ ಎಂ.ಎನ್. ಅನುಚೇತ್ ಸುದ್ದಿಗೋಷ್ಠಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಎನ್. ಅನುಚೇತ್, ಯಾರಾದರೂ ಆಂಬ್ಯುಲೆನ್ಸ್ಗೆ ದಾರಿ ಬಿಟ್ಟಾಗ ದಂಡ ಬೀಳಲ್ಲ. ಒಂದು ವೇಳೆ ಫೈನ್ ಬಿದ್ದರೆ ಅದನ್ನು ಪ್ರಶ್ನೆ ಮಾಡಿ. ನಂತರ ನಾವು ಮನ್ನಾ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆಂಬ್ಯುಲೆನ್ಸ್ಗಳ ಸುಗಮ ಸಂಚಾರಕ್ಕೆ ಇ-ಪಾತ್ ಆ್ಯಪ್, ಹೇಗೆ ಕಾರ್ಯ ನಿರ್ವಹಿಸುತ್ತದೆ? ಇಲ್ಲಿದೆ ಮಾಹಿತಿ
ಎಐ ತಂತ್ರಜ್ಞಾನ ವೇಳೆ ಆ್ಯಂಬುಲೆನ್ಸ್ಗೆ ದಾರಿ ಬಿಡಲು ವಾಹನ ಸವಾರರ ಭಯ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಯಾವ ಆ್ಯಂಬುಲೆನ್ಸ್ಗೆ ಪ್ರಾಮುಖ್ಯತೆ ಕೊಡಬೇಕು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಖಾಸಗಿ ಆ್ಯಂಬುಲೆನ್ಸ್ ಚಾಲಕರನ್ನ ಕರೆಸಿ ಸಭೆ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಸಂಚಾರ ವ್ಯವಸ್ಥೆ ನಿಯಂತ್ರಣಕ್ಕೆ ಎಐ ಬಳಕೆ ಮಾಡಲಾಗುತ್ತಿದೆ. ಇತ್ತೀಚೆಗೆ ನಗರದಲ್ಲಿ ಎಐ ಆಧಾರಿತ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು, ನಗರದಲ್ಲಿ 60 ಜಂಕ್ಷನ್ಗಳಲ್ಲಿ ಈ ತಂತ್ರಜ್ಞಾನ ಯಶಸ್ವಿ ಆಗಿದೆ. ಎಐ ತಂತ್ರಜ್ಞಾನ ಮೂಲಕ ನಗರದಲ್ಲಿ ಸಂಚಾರ ದಟ್ಟಣೆ ನಿರ್ವಹಣೆ ಮಾಡಲಾಗುತ್ತಿದೆ. ಭಾರತದ 30 ನಗರಗಳಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಎಐ ತಂತ್ರಜ್ಞಾನ ವ್ಯವಸ್ಥೆ ಅನುಸರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 68% ರಷ್ಟು ದ್ವಿಚಕ್ರ ವಾಹನ ಇದೆ. ಬೆಂಗಳೂರಿನಲ್ಲಿ ಲಕ್ಷಾಂತರ ವಾಹನಗಳು ಓಡಾಡುತ್ತಿದ್ದಾವೆ. 165 ಜಂಕ್ಷನ್ಗಳಲ್ಲಿ ಎಐ ತಂತ್ರಜ್ಞಾನ ಅಳವಡಿಕೆಯಾಗಿದೆ. ನಾಲ್ಕು ಮೋಡ್ಗಳಲ್ಲಿ ಈ ತಂತ್ರಜ್ಞಾನ ನಿರ್ವಹಣೆ ಮಾಡುತ್ತೆ. ಸಿಗ್ನಲ್ ಬಳಿ ಎಷ್ಟು ವಾಹನಗಳಿವೆ. ಯಾವ ರಸ್ತೆಯಲ್ಲಿ ಹೆಚ್ಚು ವಾಹನಗಳಿವೆ, ಅದನ್ನ ಗಣಿತ ಮಾಡಿ ಸಿಗ್ನಲ್ ಬಿಡುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೆಎಸ್ಆರ್ಟಿಸಿ ನಿಗಮ ಸೇರಲಿವೆ 1.78 ಕೋಟಿ ರೂ ಮೌಲ್ಯದ 20 ಐರಾವತ 2.0 ಮಾದರಿಯ ಬಸ್
ಈ ಮೊದಲು ಸೆಕೆಂಡ್ಸ್ ಫಿಕ್ಸ್ ಮಾಡಿ ವಾಹನಗಳನ್ನು ಬಿಡುತ್ತಿದ್ದೇವೆ. 20 ಸೆಕೆಂಡ್ ಸಿಗ್ನಲ್ ಇದ್ದರೆ 10 ಸೆಕೆಂಡ್ ನಲ್ಲಿ ವಾಹನಗಳು ಖಾಲಿ ಆಗುತ್ತಿದ್ದವು. ಇನ್ನು ಹತ್ತು ಸೆಕೆಂಡ್ ಖಾಲಿ ಇರುತ್ತಿತ್ತು. ಇನ್ಮುಂದೆ ಈ ವಿಚಾರದಲ್ಲೂ ತಂತ್ರಜ್ಞಾನ ಬಳಕೆ ಆಗುತ್ತಿದೆ. ಎಷ್ಟು ವಾಹನಗಳು ಇದ್ದಾವೆ ಎಷ್ಟು ಸೆಕೆಂಡ್ನಲ್ಲಿ ವಾಹನಗಳು ಖಾಲಿಯಾದ್ದವು, ಅದನ್ನ ಡಿಟೆಕ್ಟ್ ಮಾಡಿ ಸಿಗ್ನಲ್ ಚೇಂಜ್ ಆಗುತ್ತೆ. ಪೀಕ್ ಅವರ್ನಲ್ಲಿ ಹೆಚ್ಚು ಮಾನವಚಾಲಿತ ವ್ಯವಸ್ಥೆ ಮಾಡಬೇಕು ಎಂದುಕೊಂಡಿದ್ದೇವೆ. ಪೀಕ್ ಅವರ್ನಲ್ಲೂ ಎಐ ಸಿಸ್ಟಮ್ ತುಂಬಾ ಚೆನ್ನಾಗಿ ವರ್ಕ್ ಆಗುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.