RCB ಟಿ20 ಆಡೋಕೆ ಮಾತ್ರ, ನಾನು ಟೆಸ್ಟ್ ಮ್ಯಾಚ್ ಆಡೋಕೆ ಬಂದವನು: ವಿರೋಧಿಗಳಿಗೆ ವಿಜಯೇಂದ್ರ ಎಚ್ಚರಿಕೆ

| Updated By: ರಮೇಶ್ ಬಿ. ಜವಳಗೇರಾ

Updated on: Oct 09, 2024 | 5:41 PM

ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಎನ್ನುವುದು ಮುಚ್ಚಿಟ್ಟಿರುವ ವಿಚಾರವೇನೂ ಅಲ್ಲ. ಯಾವಾಗ ಬಿಎಸ್ ಯಡಿಯೂರಪ್ಪರ ಪುತ್ರ ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದರೋ ಅಲ್ಲಿಂದ ಈಚೆಗೆ ಪಕ್ಷದಲ್ಲಿ ಮತ್ತಷ್ಟು ಧಗಧಗಿಸೋಕೆ ಶುರು ಮಾಡಿದೆ. ಈ ಹಿಂದೆ ಬಿಎಸ್​ವೈ ವಿರುದ್ಧ ಈಶ್ವರಪ್ಪ ರಾಯಣ್ಣ ಬ್ರಿಗೇಡ್​ ಕಟ್ಟಿದ್ದರು. ಇದೀಗ ವಿಜಯೇಂದ್ರ ವಿರುದ್ಧ ಆರ್​ಸಿಬಿ ಬ್ರಿಗೇಡ್​ ಕಟ್ಟಲು ಎಲ್ಲಾ ತಯಾರಿ ನಡೆದಿದ್ದು, ಇದಕ್ಕೆ ವಿಜಯೇಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ.

RCB ಟಿ20 ಆಡೋಕೆ ಮಾತ್ರ, ನಾನು ಟೆಸ್ಟ್ ಮ್ಯಾಚ್ ಆಡೋಕೆ ಬಂದವನು: ವಿರೋಧಿಗಳಿಗೆ ವಿಜಯೇಂದ್ರ ಎಚ್ಚರಿಕೆ
ಬಿವೈ ವಿಜಯೇಂದ್ರ
Follow us on

ಹುಬ್ಬಳ್ಳಿ, (ಅಕ್ಟೋಬರ್ 09): ಬಿಜೆಪಿಯಲ್ಲಿ ಭಿನ್ನಮತ ಮತ್ತಷ್ಟು ತೀವ್ರಗೊಂಡಿದ್ದು, ಇದೀಗ ತಮ್ಮ ವಿರುದ್ಧ ಆರ್​ಸಿಬಿ ಬ್ರಿಗೇಡ್​ ಕಟ್ಟಲು ಮುಂದಾಗಿರುವ ಸ್ವಪಕ್ಷದ ವಿರೋಧಿಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಇಂದು (ಅಕ್ಟೋಬರ್ 09) ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಆರ್​ಸಿಬಿ ((ರಾಯಣ್ಣ,ಚನ್ನಮ್ಮ ಬ್ರಿಗೇಡ್‌)) ಟಿ-20 ಆಡೋಕೆ ಮಾತ್ರ ಚೆನ್ನಾಗಿರುತ್ತೆ. ಆದರೆ ನಾನು ಟೆಸ್ಟ್ ಮ್ಯಾಚ್ ಆಡುವುದಕ್ಕೆ ಬಂದವನು. ನಾನು ಸುದೀರ್ಘವಾಗಿ ಓಡುವಂತಹ ಕುದುರೆ. ವಿಜಯೇಂದ್ರ ತಾಕತ್ತಿನ ಬಗ್ಗೆ ಅರಿತುಕೊಂಡಿರುವುದು ಬಹಳ ಸಂತಸ. ನಾನು ಲಂಬಿ ರೇಸ್ ಕಾ ಗೋಡಾ ನೋಡೋಣ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಪಕ್ಷಕ್ಕೆ ದ್ರೋಹ ಮಾಡಿ ಪಕ್ಷ ಬಿಟ್ಟೋದವರು ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ, ಯೋಗ್ಯತೆ ಕಳೆದುಕೊಂಡಿದ್ದಾರೆ ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದ ವಿಜಯೇಂದ್ರ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಕೆಲಸ ಮಾಡಲು ಭಗವಂತ ಬುದ್ದಿ ನೀಡಿದ್ದಾನೆ. ಆ ಕಾರ್ಯ ಮಾಡುವೆ. ನಾನು ಯಾರ ಹೇಳಿಕೆ ಗಂಭೀರವಾಗಿ ಪರಿಗಣಿಸಲ್ಲ, ನೋವು ಮಾಡಿಕೊಳ್ಳಲ್ಲ. ಲೋಕಸಭಾ ಚುನಾವಣೆಯಲ್ಲಿ ಕೆಲವರನ್ನು ಪಕ್ಷದಿಂದ ಹೊರಹಾಕಿದ್ದೇವೆ. ಈಗಾಗಲೇ ಶುದ್ಧೀಕರಣ ಆಗಿದೆ ಎಂದರು.

ಇದನ್ನೂ ಓದಿ: ಕೂಡಲಸಂಗಮದ ಬಸವಜಜಾತಿಗಣತಿ ಅಸ್ತ್ರಕ್ಕೆ ಬಿಜೆಪಿಯಿಂದ ಒಳ ಮೀಸಲಾತಿ ಬ್ರಹ್ಮಾಸ್ತ್ರ: ಒಳಮೀಸಲಾತಿ ಜಾರಿಗೆ ಒತ್ತಾಯಿಸಲು ಬಿಜೆಪಿ ನಿರ್ಧಾರ

ಬಿಜೆಪಿ ಉಚ್ಛಾಟಿಯ ನಾಯಕ ಕೆಎಸ್​ ಈಶ್ವರಪ್ಪ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​, ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಸಿಡಿದೆದ್ದಿದ್ದು, ಹೇಗಾದರೂ ಮಾಡಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕೆಂದು ತೊಡೆತಟ್ಟಿದ್ದಾರೆ. ಹೀಗಾಗಿ ಯತ್ನಾಳ್​, ಬಿಎಸ್​ವೈ ಕುಟುಂಬದ ವಿರೋಧಿ ನಾಯಕರನ್ನು ಭೇಟಿ ಮಾಡಿ ತಂಡ ಕಟ್ಟಲು ಮುಂದಾಗಿದ್ದಾರೆ. ಇದಕ್ಕೆ ಈಶ್ವರಪ್ಪ ಸಹ ಕೈಜೋಡಿಸಿದ್ದು, ರಾಯಣ್ಣ, ಚೆನ್ನಮ್ಮ ಬ್ರಿಗೇಡ್ ಸಂಘಟನೆ ಮಾಡಿಕೊಂಡು ಬಿಎಸ್​ವೈ ಕುಟುಂಬದ ವಿರುದ್ಧ ಸಮರ ಸಾರಲು ಮುಂದಾಗಿದ್ದಾರೆ.

ಈಗಾಗಲೇ ಯತ್ನಾಳ್ ಅಸಮಾಧಾನಿತ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಾರೆ. ಬೆಳಗಾವಿ, ಬೆಂಗಳೂರು, ದಾವಣಗೆರೆಯಲ್ಲಿ ಅಸಮಾಧಾನಿತ ನಾಯಕರು ಒಟ್ಟಿಗೆ ಸೇರಿ ಸಭೆ ಸಹ ಮಾಡಿದ್ದಾರೆ.

ಹಿಂದುಳಿದ, ದಲಿತ ಸೇರಿದಂತೆ ಎಲ್ಲ ಸಮಾಜದವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯಾಗಲು ಸಾಧು-ಸಂತರ ನೇತೃತ್ವದಲ್ಲಿ ನೂತನ ಸಂಘಟನೆಯನ್ನು ಹುಟ್ಟುಹಾಕಲು ಚಿಂತಿಸಲಾಗಿದೆ. ಅ. 20ರಂದು ಬಾಗಲಕೋಟೆಯಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ. ಎಸ್ ಈಶ್ವರಪ್ಪ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ